1:56 AM Saturday16 - January 2021
ಬ್ರೇಕಿಂಗ್ ನ್ಯೂಸ್
ರಾಜ್ಯದ ಎಲ್ಲ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರ ನೇಮಕ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ ಭದ್ರಾವತಿ: ಕ್ಷಿಪ್ರ ಕಾರ್ಯಪಡೆ ಕಚೇರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೂಮಿ… ಕೊರೊನಾ ತಡೆಗೆ ಸ್ವದೇಶಿ ವ್ಯಾಕ್ಸಿನ್ ಭಾರತದ ಸಾಧನೆಯ ಪ್ರತೀಕ: ಪ್ರಧಾನಿ ನರೇಂದ್ರ ಮೋದಿ ಲಿಂಗಸುಗೂರು: ಕೋವಿಡ್ 19 ಲಸಿಕೆ ಬಾಕ್ಸ್ ಗೆ ಪೂಜೆ ಸಲ್ಲಿಸಿ ಬರಮಾಡಿಕೊಂಡ ತಾಲೂಕು… ಬ್ಲ್ಯಾಕ್ ಮೇಲ್ ಮಾಡಿ ಮಂತ್ರಿ ಸ್ಥಾನ: ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆಗೆ ಎಸ್.… ಮಲ್ಪೆಯಲ್ಲಿ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಬೋಟ್ ನಿಂದ ಬಿದ್ದು ಮೀನುಗಾರ ಸಾವು ಸರಕಾರಿ ನೌಕರರ ಕ್ರೀಡಾಕೂಟದಲ್ಲಿ ಮಹಿಳಾ ಸಿಬ್ಬಂದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕೋಲಾರ ಜಿಲ್ಲಾಧಿಕಾರಿ… ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷರಾಗಿ  ದೇರಳಕಟ್ಟೆ ರೆಂಜಡಿಯ ಡಾ. ಅಬ್ದುಲ್ ಶಕೀಲ್ ನೇಮಕ ನೂತನ ಸಚಿವ ಎಸ್. ಅಂಗಾರರಿಗೆ ಸಿಹಿ ತಿನ್ನಿಸಿ ಶುಭ ಹಾರೈಸಿದ ಬಿಜೆಪಿ ಭೀಷ್ಮ… ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ನೋಡಿ

ಇತ್ತೀಚಿನ ಸುದ್ದಿ

ಸರಕಾರಿ ಬಂಗ್ಲೆ, ಕಾರು ತೊರೆದ ವಿಧಾನ ಪರಿಷತ್ ಸಭಾಪತಿ, ಕುಂದಾಪುರದ ಪ್ರತಾಪಚಂದ್ರ ಶೆಟ್ಟಿ

December 21, 2020, 9:37 PM

ಬೆಂಗಳೂರು(reporterkarnataka news):

ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ

ಮೇಲ್ಮನೆಯಲ್ಲಿ ನಡೆದ ಗದ್ದಲದ ಬಳಿಕ ವಿಧಾನ ಪರಿಷತ್ ಸಭಾಪತಿ ಕೆ.ಪ್ರತಾಪಚಂದ್ರಶೆಟ್ಟಿ ಅವರು ಸರಕಾರ ತಮಗೆ ಒದಗಿಸಿದ್ದ ಕಾರು ಮತ್ತು ಬಂಗಲೆಯನ್ನು ತ್ಯಜಿಸಿದ್ದಾರೆ.

ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ವಿರುದ್ಧ 

ಡಿಸೆಂಬರ್ 15ರಂದು ನಡೆದ ವಿಧಾನ ಪರಿಷತ್ ಅಧಿವೇಶನದಲ್ಲಿ ಅವಿಶ್ವಾಸ ಗೊತ್ತುವಳಿ ಮಂಡಿಸಲು ಬಿಜೆಪಿ ಪ್ರಯತ್ನಿಸಿತ್ತು. ಜೆಡಿಎಸ್ ಕೂಡ ಇದಕ್ಕೆ ಸಾಥ್ ನೀಡಿತ್ತು. ಬಿಜೆಪಿ ಸದಸ್ಯರು ಸಭಾಪತಿಯವರನ್ನು ಕೊಠಡಿಯಿಂದ ಹೊರಗೆ ಬರಲು ಬಿಡಲಿಲ್ಲ. ಈ ನಡುವೆ ಬಿಜೆಪಿ ಸದಸ್ಯರು ಪರಿಷತ್ ನ ಬೆಲ್ ಆಗುವ ಮುಂಚೆಯೇ ಉಪ ಸಭಾಪತಿ ಜೆಡಿಎಸ್ ನ ಧರ್ಮೇ ಗೌಡ ಅವರನ್ನು ಸಭಾಪತಿ ಪೀಠದಲ್ಲಿ ಕೂರಿಸಿದ್ದರು. ಇದರಿಂದ ಕೆರಳಿದ ಕಾಂಗ್ರೆಸ್ ಸದಸ್ಯರು ಧರ್ಮೇಗೌಡ ಅವರನ್ನು ಸಭಾಪತಿ ಪೀಠದಿಂದ ಎಳೆದು ತಂದಿದ್ದರು. ಮೇಲ್ಮನೆಯಲ್ಲಿ ಕಂಡು ಕೇಳರಿಯದ ಕೋಲಾಹಲ ನಡೆದಿತ್ತು. ಬಳಿಕ ಸದನದ ಕಲಾಪವನ್ನು ಅನಿರ್ದಿಷ್ಟಾವಧಿಯವರೆಗೆ ಮುಂದೂಡಲಾಗಿತ್ತು.

ಅಧಿವೇಶನ ಮುಗಿಸಿ ಉಡುಪಿಗೆ ತೆರಳಿದ ಪ್ರತಾಪಚಂದ್ರ ಶೆಟ್ಟಿ ಅವರು ಶನಿವಾರವೇ ಕಾರನ್ನು ವಾಪಸ್ ಕಳುಹಿಸಿದ್ದಾರೆ. ಬಂಗಲೆಯನ್ನೂ ತೆರವು ಮಾಡಿದ್ದು, ಸ್ವಾಧೀನಕ್ಕೆ ಪಡೆಯುವಂತೆ ವಿಧಾನಮಂಡಲ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ಪ್ರತಾಪಚಂದ್ರ ಶೆಟ್ಟಿ ಅವರು ಇದನ್ನು ರಿಪೋರ್ಟರ್ ಕರ್ನಾಟಕಕ್ಕೆ ಖಚಿತಪಡಿಸಿದ್ದಾರೆ.

ಕಾರನ್ನು ಶನಿವಾರವೇ ವಾಪಸ್ ಕಳುಹಿಸಿದ್ದೇನೆ. 

ಸಭಾಪತಿಗೆ ನೀಡಲಾಗುವ ಬಂಗಲೆಯನ್ನು ಬಿಟ್ಟಿದ್ದೇನೆ. ಸ್ವಾಧೀನಕ್ಕೆ ಪಡೆಯುವಂತೆ ಅಧಿಕಾರಿಗಳಿಗೆ ಪತ್ರ ಬರೆದಿದ್ದೇನೆ ಎಂದು ಹೇಳಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು