ಇತ್ತೀಚಿನ ಸುದ್ದಿ
ಸ್ಯಾನಿಟೈಸರ್ ಸುರಿದು ಬೆಂಕಿ ಹಚ್ಚಿ ಪತ್ರಕರ್ತನ ಭೀಕರ ಹತ್ಯೆ: 3 ಮಂದಿ ಆರೋಪಿಗಳ ಬಂಧನ
December 1, 2020, 5:58 PM

ಲಕ್ನೋ (reporterkarnataka news): ಮೂರು ಬಾಟಲಿ ಸ್ಯಾನಿಟೈಸರ್ ಸುರಿದು ಪತ್ರಕರ್ತರೊಬ್ಬರನ್ನು ಬೆಂಕಿ ಹಚ್ಚಿ ಹತ್ಯೆಗೈದ ಭೀಕರ ಘಟನೆ ಉತ್ತರ ಪ್ರದೇಶದ ಬಲರಾಮ್ ಪುರದಲ್ಲಿ
ನಡೆದಿದೆ.
ರಾಷ್ಟ್ರೀಯ ಸ್ವರೂಪ್ ಪತ್ರಿಕೆಯಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದ 37ರ ಹರೆಯದ ರಾಕೇಶ್ ಸಿಂಗ್ ನಿರ್ಭಿಕ್ ಅವರನ್ನು ಕೊಲೆ ಮಾಡಲಾಗಿದೆ. ಸಹದ್ಯೋಗಿ ಪತ್ರಕರ್ತ ಪಿಂಟು ಸಾಹು ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಲಕ್ನೊದಿಂದ ಸುಮಾರು 160 ಕಿ.ಮೀ. ದೂರದಲ್ಲಿರುವ ಬಲರಾಮ್ ಪುರದಲ್ಲಿ ಪಂಚಾಯಿತಿ ಸದಸ್ಯನ ಪುತ್ರ ಸೇರಿದಂತೆ ಮೂವರು ರಾಕೇಶ್ ಮನೆಗೆ ನುಗ್ಗಿ ಈ ಕೃತ್ಯ ಎಸಗಿದ್ದಾರೆ. ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.