ಇತ್ತೀಚಿನ ಸುದ್ದಿ
ಸ್ಯಾಂಡಲ್ ವುಡ್ ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ಆ ಡಿಂಪಲ್ ಕ್ವೀನ್ ಯಾರು ಗೊತ್ತೇ? :
August 17, 2020, 2:18 AM

ಲತಾ ಎ. ಕಲ್ಲಡ್ಕ ಮಂಗಳೂರು
info.reporterkarnataka@gmail.com
ಸ್ಯಾಂಡಲ್ ವುಡ್ ನ ಡಿಂಪಲ್ ಕ್ವೀನ್ ಅಂದ್ರೆ ಯಾರಿಗೆ ಗೊತ್ತಿಲ್ಲ? ಸಣ್ಣ ಹುಡ್ಗರಿಂದ ಹಿಡಿದು ವಯೋವೃದ್ಧರ ವರೆಗೆ ಎಲ್ಲರೂ ರಚಿತಾ ರಾಮ್ ಅಂತ ಉತ್ತರಿಸುತ್ತಾರೆ. ಅಷ್ಟು ಫೇಮಸ್ ನಮ್ಮ ರಚ್ಚು. ನಾವು ಈ ವಿಷಯವನ್ನು ಯಾಕೆ ಪ್ರಸ್ತಾಪಿಸುತ್ತೇವೆ ಅಂದ್ರೆ ಈಕೆ ಈಗ ಕನ್ನಡ ಚಿತ್ರರಂಗದಲ್ಲಿ ಅತೀ ಹೆಚ್ಚು ಬೇಡಿಕೆ ಇರುವ ನಟಿ.

ಕನ್ನಡ ಚಿತ್ರರಂಗದ ರಾಣಿಜೇನು ಎಂದೇ ಖ್ಯಾತಿ ಪಡೆದಿದ್ದ ರಮ್ಯಾ ಅವರು ರಾಜಕೀಯ ರಂಗ ಪ್ರವೇಶಿಸಿದ ಬಳಿಕ ಬೆಳ್ಳಿ ಪರದೆಯಿಂದ ದೂರ ಸರಿದಿದ್ದಾರೆ. ರಮ್ಯಾ ದೂರ ಸರಿಯುತ್ತಿದ್ದಂತೆ ಕನ್ನಡ ಚಿತ್ರರಂಗದಲ್ಲಿ ನಿರ್ಮಾಣವಾದ ಬ್ಲಾಂಕ್ ಸ್ಪೇಸ್ ತುಂಬಿಸಿದ್ದು ಡಿಂಪಲ್ ರಾಣಿ.

ರಚಿತಾ ರಾಮ್ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬುಲ್ ಬುಲ್ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಬೆಳ್ಳಿ ಪರದೆಗೆ ಎಂಟ್ರಿ ಕೊಟ್ಟರು. ಅದಕ್ಕೆ ಮುನ್ನ ಧಾರಾವಾಹಿಯಲ್ಲಿ ಆಕೆ ನಟಿಸಿದ್ದರು. ಟಿವಿ ಸೀರಿಯಲ್ ನ ಪಾತ್ರ ರಚಿತಾಗೆ ತಕ್ಕ ಮಟ್ಟಿಗೆ ಹೆಸರು ತಂದು ಕೊಟ್ಟಿತ್ತು. ರಚಿತಾ ಅವರು ಕನ್ನಡದ ಬಹುತೇಕ ಪ್ರಸಿದ್ಧ ನಟರ ಜತೆ ನಟಿಸಿದ್ದಾರೆ. ಇದೀಗ ಕನ್ನಡದಲ್ಲಿ ಅಧಿಕ ಸಂಭಾವನೆ ಪಡೆಯುವ ನಟಿಯೂ ಹೌದು.

ಕನ್ನಡದ ಖ್ಯಾತ ನಟ ಉಪೇಂದ್ರ ಅವರ ಜತೆ ‘ಉಪ್ಪಿ ಐ ಲವ್ ಯೂ’, ನಿಖಿಲ್ ಕುಮಾರಸ್ವಾಮಿ ಜತೆ ‘ಸೀತಾರಾಮ ಕಲ್ಯಾಣ’ ಸಿನಿಮಾದಲ್ಲಿ ನಟಿಸುವ ಮೂಲಕ ಮತ್ತಷ್ಟು ಮುನ್ನಲೆಗೆ ಬಂದಿದ್ದಾರೆ.

ಕನ್ನಡ ಸಿನಿಮಾ ಮಾತ್ರವಲ್ಲದೆ ಕಿರು ತೆರೆಯಲ್ಲಿಯೂ ಈಕೆ ಬ್ಯುಸಿಯಾಗಿದ್ದಾರೆ. ಮಜಾಭಾರತ, ಕಾಮಿಡಿ ಟಾಕೀಸ್ ಮುಂತಾದ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ