ಇತ್ತೀಚಿನ ಸುದ್ದಿ
ಸಂಸದರ ಜತೆ ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಮಹತ್ವದ ಚರ್ಚೆ
November 27, 2020, 8:27 AM

ಬೆಂಗಳೂರು(reporterkarnataka news): ರಾಜ್ಯ ಸಂಸದರ ಜತೆ ಇಂದು ಸಿಎಂ ಯಡಿಯೂರಪ್ಪ ಮಾತುಕತೆ ನಡೆಸಲಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಸಂಜೆ ಸಮಾಲೋಚನಾ ಸಭೆ ನಡೆಯಲಿದೆ.
ಬಿಜೆಪಿಯ ರಾಜ್ಯ ಸಭೆ ಮತ್ತು ಲೋಕಸಭಾ ಸದಸ್ಯರನ್ನು ಇಂದಿನ ಸಭೆಗೆ ಮುಖ್ಯಮಂತ್ರಿ ಆಹ್ವಾನಿಸಿದ್ದಾರೆ. ಸಂಸದರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಭಾಗವಾಗಿ ಸಿಎಂ ಈ ಸಭೆ ಕರೆದಿದ್ದಾರೆ.