2:03 PM Tuesday26 - January 2021
ಬ್ರೇಕಿಂಗ್ ನ್ಯೂಸ್
ಎಸ್‌ಡಿಪಿಐ ವತಿಯಿಂದ ಗಣರಾಜ್ಯೋತ್ಸವ ಪ್ರಯುಕ್ತ ರೈತ ಐಕ್ಯತಾ ಸಂಗಮ ಬಿಗ್ ಬಾಸ್ ಖ್ಯಾತಿಯ ನಟಿ ಜಯಶ್ರೀ ರಾಮಯ್ಯ ಆತ್ಮಹತ್ಯೆ: ಕುಟುಂಬದ ಸಮಸ್ಯೆ ಕಾರಣ? ಮಂಗಳೂರಿನ ನರ್ಸಿಂಗ್ ಕಾಲೇಜಿನ 4 ಮಂದಿ ವಿದ್ಯಾರ್ಥಿನಿಯರಿಗೆ ಕೊರೊನಾ: ಪಾಲಕರಲ್ಲಿ ಮತ್ತೆ ಭೀತಿ… ಗಣರಾಜ್ಯೋತ್ಸವ ಪರೇಡ್ ಗೆ ಆಯ್ಕೆಯಾದ ಕರ್ನಾಟಕದ ಟ್ಲಾಬ್ಲೊದಲ್ಲಿ ಕನ್ನಡ ಧ್ವಜ ನಾಪತ್ತೆ ಕಟೀಲು ಮೇಳ ಸೇವೆ ಆಟಗಳು:  ಇಂದು ಎಲ್ಲೆಲ್ಲಿ?  ನೀವೇ ನೋಡಿ ಬಡವರನ್ನು ಬೀದಿ ಪಾಲು ಮಾಡಿದರೆ ಜೋಕೆ: ಪಾಲಿಕೆಗೆ ಇಂಟಕ್ ರಾಷ್ಟ್ರೀಯ ಕಾರ್ಯದರ್ಶಿ ರಾಕೇಶ್… ವಿ.ವಿ ಕಾಲೇಜಿನಲ್ಲಿ ಪ್ರೌಢ ಶಾಲಾ ರಾಷ್ಟ್ರೀಯ ಸೇವಾಯೋಜನೆಯ ಯೋಜನಾಧಿಕಾರಿಗಳಿಗೆ ರಾಜ್ಯ ಮಟ್ಟದ ಕಾರ್ಯಾಗಾರ ಬಲ್ಯ ಸಮೀಪ ಕಾರು- ಬೊಲೆರೋ ಅಪಘಾತ:  ಒಬ್ಬ ಸಾವು, 4 ಮಂದಿ ತೀವ್ರ… ಕಾಸರಗೋಡು: ಮೆಡಿಕಲ್ ಶಾಪ್ ಗೆ ಔಷಧ ಖರೀದಿಸಲು ಬಂದ ವ್ಯಕ್ತಿಯನ್ನು ಗುಂಪೊಂದು ಥಳಿಸಿ… ಕಾಳು ಹಾಕಿ ಕೋಳಿ ಕದಿಯುವ ಭಿಕ್ಷುಕರಿದ್ದಾರೆ ಎಚ್ಚರಿಕೆ: ನಿಮ್ಮ ಮನೆಗೂ ಬಂದಾರು ಜೋಕೆ!…

ಇತ್ತೀಚಿನ ಸುದ್ದಿ

ಸಂಪ್ರದಾಯದಂತೆ ನಡೆದ ಒಂಭತ್ತು ಮಾಗಣೆಯ ಮೂಲ್ಕಿ ಸೀಮೆಯ ಅರಸು ಕಂಬಳ 

December 27, 2020, 4:36 PM

ಮುಲ್ಕಿ(reporterkarnataka news):

ಒಂಭತ್ತು ಮಾಗಣೆಯ ಮೂಲ್ಕಿ ಸೀಮೆಯ ಅರಸು ಕಂಬಳ ಭಾನುವಾರ ಸಾಂಪ್ರದಾಯಿಕ ರೀತಿಯಲ್ಲಿ ಎಲ್ಲಾ ವಿಧಿ ವಿಧಾನವನ್ನು ಪೂರೈಸಿ ಕಂಬಳ ನಡೆಯಿತು.

ಮುಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು ಪಡುಪಣಂಬೂರು ಅರಮನೆಯ ಮೂಲ್ಕಿ ಸೀಮೆಯ ಅರಸು ಕಂಬಳವನ್ನು ಸಾಂಪ್ರದಾಯಿಕ ರೀತಿಯಲ್ಲಿ ಅರಮನೆಯ ಚಂದ್ರನಾಥ ಬಸದಿಯಲ್ಲಿ ವಿಧಿ ವಿಧಾನಕ್ಕೆ ಚಾಲನೆ ನೀಡಿ ಆಶೀರ್ವಚಿಸಿದರು.

ಈ ಸಂದರ್ಭ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಿಗೆ, ಅರಮನೆಯ ಚಂದ್ರನಾಥ ಸ್ವಾಮಿ ಬಸದಿ, ಪದ್ಮಾವತಿ ಅಮ್ಮನವರ ಬಸದಿ, ಪಕ್ಕದ ನಾಗಬನಕ್ಕೆ ವಿಶೇಷ ಪ್ರಾರ್ಥನೆ ನಡೆಸಿ ಕಂಬಳದ ಕರೆಗೆ ದೈವದ ಆರಾಧನೆ ಮೂಲಕ ಬಾಕಿಮಾರು ಗದ್ದೆಯಲ್ಲಿಳಿದು, ಕಂಬಳ ಮಂಜೊಟ್ಟಿಯಲ್ಲಿ ದೀಪವನ್ನು ಬೆಳಗಿಸಿ, ಬಪ್ಪನಾಡು ಬಡುಗುಹಿತ್ಲುವಿನ ದಿ.ಕಾಂತು ಪೂಜಾರಿ ಮತ್ತು ಅರಮನೆಯ ಜೋಡಿ ಕೋಣಗಳ ಸಂಚರಿಸುವಿಕೆಯೊಂದಿಗೆ ಕಂಬಳದ ಸಂಪ್ರದಾಯವನ್ನು ನಡೆಸಲಾಯಿತು.

ಯಾವುದೇ ಸ್ಪರ್ಧೆ ಇಲ್ಲದೆ ಸೀಮೆಯ ಗೌರವವಾಗಿ ಕಂಬಳಕೋಣಗಳ ಮಾಲೀಕರು ಭಾಗವಹಿಸಿದರು. ಹಗ್ಗ ಕಿರಿಯ ಹಾಗೂ ನೇಗಿಲು ಕಿರಿಯ ವಿಭಾಗದ ಕೋಣಗಳನ್ನು ಇಳಿಸಲಾಗಿತ್ತು.

ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಎಂ., ದ.ಕ. ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಮನೋಹರ ಶೆಟ್ಟಿ, ಅರಸು ಕಂಬಳದ ಮುಂಬಯಿ ಸಮಿತಿಯ ಕೊಲ್ನಾಡು ಉತ್ತುಂಜೆಯ ಭುಜಂಗ ಎಂ. ಶೆಟ್ಟಿ, ಬಂಕೀ ನಾಯ್ಗರು, ಅರಮನೆಯ ಗೌತಮ್ ಜೈನ್, ಕಂಬಳ ಸಮಿತಿಯ ಗೌರವಾಧ್ಯಕ್ಷ ಎಂ.ಎಚ್.ಅರವಿಂದ ಪೂಂಜಾ, ಅರಸು ಕಂಬಳ ಸಮಿತಿಯ ಅಧ್ಯಕ್ಷ ರಾಮಚಂದ್ರ ನಾಯ್ಕ, ನವೀನ್ ಶೆಟ್ಟಿ ಎಡ್ಮೆಮಾರ್, ವಿನೋದ್ ಎಸ್.ಸಾಲ್ಯಾನ್ ಬೆಳ್ಳಾಯರು, ಚಂದ್ರಶೇಖರ್, ವಿಜಯ್‌ಕುಮಾರ್ ಶೆಟ್ಟಿ ಕೊಲ್ನಾಡು, ಜಿಲ್ಲಾ ಪಂಚಾಯತ್ ಸದಸ್ಯ ವಿನೋದ್ ಬೊಳ್ಳೂರು, ಈಶ್ವರ ಕಟೀಲ್, ಸುನಿಲ್, ವಸಂತ್ ಬರ್ನಾಡ್ ಮತ್ತಿತರರು ಉಪಸ್ಥಿತರಿದ್ದರು.

ಕಂಬಳದಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಜೋಡಿ ಕೋಣಗಳು ಭಾಗವಹಿಸಿದ್ದವು

ಇತ್ತೀಚಿನ ಸುದ್ದಿ

ಜಾಹೀರಾತು