ಇತ್ತೀಚಿನ ಸುದ್ದಿ
ಬೆಂಗಳೂರು ಗಲಭೆ: ಮಾಜಿ ಮೇಯರ್ ಸಂಪತ್ ರಾಜ್ ಗೆ ಪೊಲೀಸ್ ನೋಟಿಸ್
August 18, 2020, 4:06 AM

ಬೆಂಗಳೂರು(reporterkarnataka news): ಬೆಂಗಳೂರನ್ನು ಬೆಚ್ಚಿ ಬೀಳಿಸಿದ್ದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮೇಯರ್ ಸೇರಿದಂತೆ ಇಬ್ಬರು ಕಾರ್ಪೋರೇಟರ್ ಗಳಿಗೆ ಸಿಸಿಬಿ ಪೊಲೀಸರು ನೋಟಿಸ್ ಜಾರಿ ಗೊಳಿಸಿದ್ದಾರೆ. ಇಂದು ಅಧಿಕಾರಿಗಳ ಮುಂದೆ ಹಾಜರಾಗಿ ಹೇಳಿಕೆ ನೀಡುವಂತೆ ಇಬ್ಬರು ಕಾರ್ಪೋರೇಟ್ ರ್ ಗಳಿಗೆ ಈ ನೋಟಿಸ್ ನಲ್ಲಿ ಸೂಚಿಸಲಾಗಿದೆ.
ಸಂಪತ್ ರಾಜ್ ಮತ್ತು ಝಾಕೀರ್ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಸಂಪತ್ ರಾಜ್ ಅವರು ಡಿ ಜೆ ಹಳ್ಳಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಈ ಹಿಂದೆ ಬೆಂಗಳೂರು ಮೇಯರ್ ಪದವಿ ಅಲಂಕರಿಸಿದ್ದರು.