ಇತ್ತೀಚಿನ ಸುದ್ದಿ
ಡ್ರಗ್ಸ್ ಜಾಲದಲ್ಲಿ ಎ ಗ್ರೇಡ್ ನಟರು?: ಪ್ರಶಾಂತ್ ಸಂಬರಗಿ ಏನು ಹೇಳ್ ತ್ತಾರೆ ಮುಂದಕ್ಕೆ ಓದಿ
September 19, 2020, 12:43 PM

ಬೆಂಗಳೂರು(reporterkarnataka news): ಡ್ರಗ್ಸ್ ಜಾಲದಲ್ಲಿ ಎ ಗ್ರೇಡ್ ನ ನಟರೂ ಇದ್ದಾರೆ ಎಂದು ಪ್ರಶಾಂತ್ ಸಂಬರಗಿ ಹೊಸ ಬಾಂಬ್ ಸಿಡಿಸಿದ್ದಾರೆ.
ಇಬ್ಬರು ಎ ಗ್ರೇಡ್ ನಟರು ಮಾದಕ ದ್ರವ್ಯ ಜಾಲದಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಸರು ಬಹಿರಂಗಪಡಿಸುವುದಾಗಿ ಅವರು ಹೇಳಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಸಂಬರಗಿ ಈ ಆರೋಪ ಮಾಡಿದ್ದಾರೆ.
ಈ ನಡುವೆ ಮಾದಕ ದ್ರವ್ಯ ಜಾಲದ ಜತೆ ಸಂಬಂಧದ ಆರೋಪ ಎದುರಿಸುತ್ತಿರುವ ನಟಿಯರಾದ ರಾಗಿಣಿ ಮತ್ತು ಸಂಜನಾ ಜಾಮೀನು ಅರ್ಜಿ ವಿಚಾರಣೆಯನ್ನು ಮುಂದೂಡಲಾಗಿದೆ. ಸೆಪ್ಟೆಂಬರ್ 21ರಂದು ಮುಂದಿನ ವಿಚಾರಣೆ ನಡೆಯಲಿದೆ. ಇಬ್ಬರು ಆರೋಪಿಗಳು ಸದ್ಯ ಪರಪ್ಪನ ಅಗ್ರಹಾರ ಜೈಲ್ಲಿನಲ್ಲಿದ್ದಾರೆ.