1:28 PM Monday1 - March 2021
ಬ್ರೇಕಿಂಗ್ ನ್ಯೂಸ್
ಬಿಜೆಪಿ ಯುವ ಮೋರ್ಚಾ ನರಗುಂದ ಮಂಡಲ ವತಿಯಿಂದ ಗ್ರಾಮದಲ್ಲಿ ಸ್ವಚ್ಚತಾ ಕಾರ್ಯಕ್ರಮ ಜಾತಿ, ಮತ, ಕಟ್ಟುಪಾಡುಗಳನ್ನು ಮೀರಿ ಜನಪದ ಜನಮಾನಸದಲ್ಲಿ ನೆಲೆಗೊಂಡಿದೆ: ಎಡನೀರು ಮಠಾಧೀಶರು ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ ಸಚಿವ ಅಂಗಾರ ತವರಿನಲ್ಲಿ ಭಿನ್ನಮತ ಸ್ಫೋಟ: 3 ಮಂದಿ ಹಿರಿಯ ನಾಯಕರು ಬಿಜೆಪಿಯಿಂದ… ಅಥಣಿ ತಾಲೂಕಿನ ರಡೇರಹಟ್ಟಿ ಗ್ರಾಮದಲ್ಲಿ  ಆಕಸ್ಮಿಕವಾಗಿ ಬೆಂಕಿ ತಗುಲಿ ಗುಡಿಸಲು ಭಸ್ಮ: 4… ಒಂದೂವರೆ ತಿಂಗಳ ಅವಧಿಯಲ್ಲಿ 10 ಬಾರಿ ಇಂಧನ ದರ ಏರಿಕೆ: ಕೆಪಿಸಿಸಿ ಅಧ್ಯಕ್ಷ… ವೈದ್ಯಕೀಯ ಸೀಟುಗಳ ಬ್ಲಾಕಿಂಗ್ ದಂಧೆ: ಮಿನಿ ವಿಧಾನ ಸೌಧದ ಎದುರು ಎಬಿವಿಪಿ ಪ್ರತಿಭಟನೆ;… ಮಂಗಳೂರು ಮಹಾನಗರಪಾಲಿಕೆ  2020-21ನೇ  ಸಾಲಿನ ತೆರಿಗೆ ಪೂರ್ತಿ ಪಾವತಿಸಿದರೆ ಶೇ. 5% ವಿನಾಯಿತಿ ಮಹಿಳಾ ಸಿಬ್ಬಂದಿಗೆ ಮಾನಸಿಕ ಕಿರುಕುಳ ಪ್ರಕರಣ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ… ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ನೋಡಿ

ಇತ್ತೀಚಿನ ಸುದ್ದಿ

ಸಮಾನ ಚಿಂತಕರು ಸಾಹಿತ್ಯ ಬಳಗದ ದ್ವಿತೀಯ ವಾರ್ಷಿಕೋತ್ಸವ ಆಚರಣೆ

September 28, 2020, 12:35 PM

ಬೆಂಗಳೂರು(reporter Karnataka News):

ಸಮಾನ ಚಿಂತಕರು ಸಾಹಿತ್ಯ ಬಳಗದ ದ್ವಿತೀಯ ವಾರ್ಷಿಕೋತ್ಸವ ಆಚರಣೆ ಆನ್ ಲೈನ್ ಮೂಲಕ ಭಾನುವಾರ ಸಂಭ್ರಮದಿಂದ ಜರಗಿತು.

ಹಿರಿಯ ಲೇಖಕಿ ಗಿರಿಜಾ ದೇಶಪಾಂಡೆ ಅವರು ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಉಪನ್ಯಾಸಕಿ ಪ್ರೊ.ಜಯಶೀಲಾ ಎಸ್.ಎನ್. ಅವರು ಬಳಗದ ಧ್ಯೇಯ ಗೀತೆ ಹಾಡಿ ತುಳಸಿ ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಗದ ಕಾರ್ಯ ನಿರ್ವಾಹಕ ಹನುಮಂತ ಮ.ದೇಶಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿ, ಸದ್ಯದ ಪರಿಸ್ಥಿತಿಯಲ್ಲಿ ಎಲ್ಲರೂ ಒಗ್ಗೂಡಿ ಕಾರ್ಯಕ್ರಮ ನಡೆಸಲು ಸಾಧ್ಯವಿಲ್ಲ ಅದಕ್ಕಾಗಿ ಆನ್ಲೈನ್ ಮೂಲಕ ಎಲ್ಲರೂ ಸೇರಿದ್ದು, ಕನ್ನಡ ಕಟ್ಟುವ ಕೆಲಸಕ್ಕೆ ಡಿಜಿಟಲ್ ಜಗತ್ತನ್ನು ಯಾವ ರೀತಿಯಾಗಿ ಪರಿಣಾಮಕಾರಿಯಾಗಿ ಬಳಸಬೇಕು ಹಾಗೂ ನಾಡಿನ ಉದ್ದಗಲಕ್ಕೂ ಇರುವ ಲೇಖಕ/ಕಿಯರು ಬಳಗದ ಬೆಳವಣಿಗೆಯ ಬಗ್ಗೆ ಯಾವ ರೀತಿ ಸಹಕಾರ ನೀಡಿದ್ದಾರೆ ಎಂಬ ಕುರಿತು ವಾರ್ಷಿಕ ವರದಿ ವಾಚಿಸಿದರು.


ಬಳಗ ನಡೆದು ಬಂದ ದಾರಿಯ ಬಗ್ಗೆ ಮುಂದೆ ಹಮ್ಮಿಕೊಳ್ಳುವ ಕಾರ್ಯಕ್ರಮದ ಬಗ್ಗೆ ಗಿರಿಜಾ ದೇಶಪಾಂಡೆ ವಿವರಿಸಿದರು. ಹೊ.ರಾ.ಪರಮೇಶ ಹಾಗೂ ಶ್ರೀಕಾಂತ ಪತ್ರೆಮರದ ಅವರು ಸಲಹೆ ಸೂಚನೆಗಳನ್ನು ನೀಡಿದರು.

ಬಳಗದ ಸದಸ್ಯರು ಕವನ ವಾಚನ ಮಾಡಿದರು. ಈ ಸಂದರ್ಭದಲ್ಲಿ ವಿಶೇಷವಾಗಿ ಹಿರಿಯ ವ್ಯಂಗ್ಯಚಿತ್ರಕಾರ ಏಕನಾಥ ಬೊಂಗಾಳೆ ಅವರಿಂದ ವ್ಯಂಗ್ಯಚಿತ್ರ ಪ್ರದರ್ಶನ ನಡೆಯಿತು. ಬಳಗದ ವೀಣಾ ರಮೇಶ ಅವರ ‘ಒಂದು ಮುಂಜಾನೆಯ ಬೆಳಗು’ ಚೊಚ್ಚಲ ಕವನ ಸಂಕಲನ, ಮಾನಸ ಕೆ.ಕೆ, ಅವರ ಚೊಚ್ಚಲ ಕಥಾಸಂಕಲನ ‘ ಮುಗ್ಧಮನ’ ಅನಾವರಣಗೊಂಡಿತು.

ಬಳಗದ ಹಿರಿಯರಾದ ರಾ.ಸು.ವೆಂಕಟೇಶ ಅವರು ದ್ವೀತಿಯ ವಾರ್ಷಿಕೋತ್ಸವದ ಅಂಗವಾಗಿ ನಡೆದ “ಸಾಮಾಜಿಕ ಜಾಲತಾಣಗಳು ನಾ ಕಂಡಂತೆ” ಎಂಬ ವಿಷಯದ ಕುರಿತು ಪ್ರಬಂಧ ಸ್ಪರ್ಧೆಯ ಫಲಿತಾಂಶ ಘೋಷಿಸಿದರು.

ಮಾಲತಿ ಮುದಕವಿ ಪ್ರಥಮ ಸ್ಥಾನ, ದ್ವೀತಿಯ ಸ್ಥಾನ ವಿಶಾಲ ಅಕ್ಕಿ ಅವರು ಪಡೆದಿದ್ದು ಅತ್ಯುತ್ತಮ ಹತ್ತು ಬತಹಗಳಿಗೆ ಪ್ರಶಂಸಾ ಪತ್ರ ನೀಡಲಾಯಿತು.


ಕಾರ್ಯಕ್ರಮದಲ್ಲಿ ಲೇಖಕರಾದ ಶ್ರೀಕಾಂತ ಪತ್ರೆಮರ, ಶ್ರೀರಂಗ ಪುರಾಣಿಕ, ಶ್ಯಾಮ್ ಜೋಶಿ, ಡಾ.ಆರ್.ಶೈಲಜಾ ಶರ್ಮ, ಲೀನಾ ಸಂದೇಶ, ಆರ್.ಡಿ.ಕುಲಕರ್ಣಿ, ಶ್ರೀವಲ್ಲಭ ಕುಲಕರ್ಣಿ, ವಿಶಾಲ ಅಕ್ಕಿ, ಪ್ರಿಯಾ ಹರಿದಾಸ್, ವಿಜಯಾ ನಾಡಗೇರ, ವೀಣಾ ರಮೇಶ, ಮಾನಸ ಕೆ.ಕೆ. ಮತ್ತಿತರರು ಭಾಗವಹಿಸಿದ್ದರು.

ಪ್ರೊ.ರಾಹುಲ್ ಮರಳಿ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಸುಜಾತಾ ವಿಶ್ವನಾಥ್ ಪ್ರಾರ್ಥಿಸಿದರು. ಪ್ರೊ.ಜಯಶೀಲಾ ಎಸ್.ಎನ್. ನಿರೂಪಿಸಿದರು. ಸವಿತಾ ಎಸ್.ಪಿ. ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು