1:34 PM Tuesday26 - January 2021
ಬ್ರೇಕಿಂಗ್ ನ್ಯೂಸ್
ಎಸ್‌ಡಿಪಿಐ ವತಿಯಿಂದ ಗಣರಾಜ್ಯೋತ್ಸವ ಪ್ರಯುಕ್ತ ರೈತ ಐಕ್ಯತಾ ಸಂಗಮ ಬಿಗ್ ಬಾಸ್ ಖ್ಯಾತಿಯ ನಟಿ ಜಯಶ್ರೀ ರಾಮಯ್ಯ ಆತ್ಮಹತ್ಯೆ: ಕುಟುಂಬದ ಸಮಸ್ಯೆ ಕಾರಣ? ಮಂಗಳೂರಿನ ನರ್ಸಿಂಗ್ ಕಾಲೇಜಿನ 4 ಮಂದಿ ವಿದ್ಯಾರ್ಥಿನಿಯರಿಗೆ ಕೊರೊನಾ: ಪಾಲಕರಲ್ಲಿ ಮತ್ತೆ ಭೀತಿ… ಗಣರಾಜ್ಯೋತ್ಸವ ಪರೇಡ್ ಗೆ ಆಯ್ಕೆಯಾದ ಕರ್ನಾಟಕದ ಟ್ಲಾಬ್ಲೊದಲ್ಲಿ ಕನ್ನಡ ಧ್ವಜ ನಾಪತ್ತೆ ಕಟೀಲು ಮೇಳ ಸೇವೆ ಆಟಗಳು:  ಇಂದು ಎಲ್ಲೆಲ್ಲಿ?  ನೀವೇ ನೋಡಿ ಬಡವರನ್ನು ಬೀದಿ ಪಾಲು ಮಾಡಿದರೆ ಜೋಕೆ: ಪಾಲಿಕೆಗೆ ಇಂಟಕ್ ರಾಷ್ಟ್ರೀಯ ಕಾರ್ಯದರ್ಶಿ ರಾಕೇಶ್… ವಿ.ವಿ ಕಾಲೇಜಿನಲ್ಲಿ ಪ್ರೌಢ ಶಾಲಾ ರಾಷ್ಟ್ರೀಯ ಸೇವಾಯೋಜನೆಯ ಯೋಜನಾಧಿಕಾರಿಗಳಿಗೆ ರಾಜ್ಯ ಮಟ್ಟದ ಕಾರ್ಯಾಗಾರ ಬಲ್ಯ ಸಮೀಪ ಕಾರು- ಬೊಲೆರೋ ಅಪಘಾತ:  ಒಬ್ಬ ಸಾವು, 4 ಮಂದಿ ತೀವ್ರ… ಕಾಸರಗೋಡು: ಮೆಡಿಕಲ್ ಶಾಪ್ ಗೆ ಔಷಧ ಖರೀದಿಸಲು ಬಂದ ವ್ಯಕ್ತಿಯನ್ನು ಗುಂಪೊಂದು ಥಳಿಸಿ… ಕಾಳು ಹಾಕಿ ಕೋಳಿ ಕದಿಯುವ ಭಿಕ್ಷುಕರಿದ್ದಾರೆ ಎಚ್ಚರಿಕೆ: ನಿಮ್ಮ ಮನೆಗೂ ಬಂದಾರು ಜೋಕೆ!…

ಇತ್ತೀಚಿನ ಸುದ್ದಿ

ಸಾಮಾಜಿಕವಾಗಿ ತೊಡಗಿಸಿಕೊಳ್ಳಲು ಜೆಸಿಐ ಉತ್ತಮ ವೇದಿಕೆ : ಶಾಸಕ ಡಿ.ವೇದವ್ಯಾಸ ಕಾಮತ್

January 2, 2021, 3:16 PM

ಮಂಗಳೂರು(Reporter Karnataka News)

ಜೆಸಿಐ ಸಂಸ್ಥೆಯು ಸಾಮಾಜಿಕವಾಗಿ ತೊಡಗಿಸಿಕೊಂಡು ಅನೇಕ ಅಭಿವೃದ್ಧಿ ಕೆಲಸಗಳಲ್ಲಿ ಸಹಭಾಗಿತ್ವವನ್ನು ನೀಡಿದೆ. ಸರಕಾರದ ನಿಟ್ಟಿನಲ್ಲಿ ಕೂಡ ಜೆಸಿಐಯ ಜತೆಗೆ ಸಹಯೋಗವನ್ನು ಪಡೆದುಕೊಳ್ಳುತ್ತಾ ಕೆಲಸ ನಿರ್ವಹಿಸಲು ಬಯಸುತ್ತೇವೆ ಎಂದು ಮಂಗಳೂರು ದಕ್ಷಿಣ ಶಾಸಕ ಡಿ.ವೇದವ್ಯಾಸ ಕಾಮತ್ ಹೇಳಿದರು.

ಅವರು ಶುಕ್ರವಾರ ನಗರದ ಮಲ್ಲಿಕಟ್ಟೆಯ ಲಯನ್ಸ್ ಸೇವಾ ಸದನದಲ್ಲಿ ನಡೆದ ಜೆಸಿಐ ಇಂಪ್ಯಾಕ್ಟ್ ಮಂಗಳೂರಿನ ನೂತನ ಜೆಸಿಐ ಇನ್‌ಸ್ಪೈರ್ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.

 


ಹಿಡಿದ ಛಲವನ್ನು ಸಾಧಿಸುವಲ್ಲಿ ಮಹಿಳೆಯರು ಎತ್ತಿದ ಕೈ ಮಹಿಳೆಯರೇ ಹೆಚ್ಚಿರುವ ಜೆಸಿಐ ಇನ್ಸ್ಪೈರ್ ಹೆಚ್ಚಿನ ಯಶಸ್ಸು ಗಳಿಸಲಿ ಹಾಗೂ ಅವರಿಂದ ಒಳ್ಳೆಯ ಕೆಲಸ ಕಾರ್ಯಗಳು ನಡೆಯಲಿ ಎಂದು ಆಶಿಸಿದರು.
ನೂತನವಾಗಿ ಉದ್ಘಾಟನೆಗೊಂಡ ಜೆಸಿಐ ಇನ್ಸ್ಪೈರ್‌ನ ಅಧ್ಯಕ್ಷರಾಗಿ ಉದ್ಯಮಿ ಸಾರಿಕಾ ಪೂಜಾರಿ ಅವರು ಅಧಿಕಾರ ಸ್ವೀಕರಿಸಿದರು.

ಕಾರ್ಯದರ್ಶಿಯಾಗಿ ಕ್ಲೆಟಾ ಡಿಸೋಜಾ ಜವಾಬ್ದಾರಿ ವಹಿಸಿಕೊಂಡರು. ಮೇಯರ್ ದಿವಾಕರ ಪಾಂಡೇಶ್ವರ, ಕಾರ್ಪೋರೇಟರ್ ಕದ್ರಿ ಮನೋಹರ್ ಶೆಟ್ಟಿ, ಬಿಜೆವೈಎಮ್ ಜಿಲ್ಲಾ ಉಪಾಧ್ಯಕ್ಷ ಅಮಿತ್ ರಾಜ್,

ಜೆಸಿಐ ವಲಯ ಉಪಾಧ್ಯಕ್ಷ ಸತ್ಯನಾರಾಯಣ ಭಟ್, ವಲಯ ಅಧ್ಯಕ್ಷರಾದ ಸೌಜನ್ಯ ಹೆಗ್ಡೆ ಮುಖ್ಯ ಅತಿಥಿಯಾಗಿ ಭಾಗವಹಿದ್ದರು.

ಇದಕ್ಕೂ ಮೊದಲು ನಡೆದ ಸಮಾರಂಭದಲ್ಲಿ ಜೆಸಿಐ ಇಂಪ್ಯಾಕ್ಟ್‌ ಮಂಗಳೂರಿನ ಅಧ್ಯಕ್ಷರಾಗಿ ರವಿರಾಜ್ ಅಧಿಕಾರ ಸ್ವೀಕರಿಸಿದರು.

 

ನೂತನ ಕಾರ್ಯದರ್ಶಿಯಾಗಿ ಜವಾಬ್ದಾರಿ ವಹಿಸಿಕೊಂಡರು.

ಮಾಜಿ ಅಧ್ಯಕ್ಷರಾದ ಸೂರಜ್ ಆರ್.ಶೆಟ್ಟಿ, ಜೆಸಿಐ ಇಂಪ್ಯಾಕ್ಟ್ ಸ್ಥಾಪಕಾಧ್ಯಕ್ಷರಾದ ದೀಪಕ್ ಗಂಗೂಲಿ, ಪ್ರೋಜೆಕ್ಟ್ ಡೈರೆಕ್ಟರ್ ಚೇತನಾ ದತ್ತಾತ್ರೇಯ, ಮಾಜಿ ವಲಯ ಉಪಾಧ್ಯಕ್ಷರಾದ ದತ್ತಾತ್ರೇಯ, ಜೇಸಿರೇಟ್ ಖುಷಿ ಮತ್ತಿತರರು ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು