10:20 PM Thursday21 - January 2021
ಬ್ರೇಕಿಂಗ್ ನ್ಯೂಸ್
ಮಂಗಳೂರಿನಲ್ಲಿ  ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರ 5ನೇ ಪುಣ್ಯತಿಥಿ ಆಚರಣೆ ಮಡಿಕೇರಿ ತಾಲೂಕು ಅಕ್ರಮ- ಸಕ್ರಮ ಸಮಿತಿ ಸಭೆಯಲ್ಲಿ ಹಲವು ಅರ್ಜಿಗಳ ವಿಲೇವಾರಿ  … ನಟಿ ರಾಗಿಣಿ ದ್ವಿವೇದಿಗೆ ಕೊನೆಗೂ ಸಿಕ್ಕಿತು ಜಾಮೀನು: 140 ದಿನಗಳ ಬಳಿಕ ಬಿಡುಗಡೆ… ಅಮೆರಿಕದ 46ನೇ ಅಧ್ಯಕ್ಷರಾಗಿ ಜೋ ಬಿಡನ್ ಪ್ರಮಾಣ ವಚನ ಸ್ವೀಕಾರ: ಕಣ್ಣೀರು ಸುರಿಸಿದ… ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ. ಎಸ್. ಈಶ್ವರಪ್ಪ 29ರಂದು ಮಂಗಳೂರಿಗೆ ಮಂಗಳೂರು ನಗರದ ಹಲವೆಡೆ ನಾಳೆ, ನಾಳಿದ್ದು ನೀರಿಲ್ಲ: ಯಾವೆಲ್ಲ ಪ್ರದೇಶವೆಂದು ನೀವೇ ಓದಿ ಬೈಕಿಗೆ ಸೈಡ್ ಕೊಡದ ನೆಪದಲ್ಲಿ ಸಿಟಿ ಬಸ್ ಚಾಲಕನಿಗೆ  ಪೆಟ್ರೋಲ್ ಸುರಿದು ಬೆಂಕಿ… ಬಿಲ್ಲವ ಮಹಿಳೆಯರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯಕ್ಕೆ ಬಜೆಟ್ ನಲ್ಲಿ 50… ಜನವರಿ 27, 28 ರಂದು ನಡೆಯಲಿರುವ ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಹ್ವಾನ… ಮಂಗಳೂರಿನಲ್ಲಿ ಮತ್ತೆ ಸದ್ದು ಮಾಡಿದ ಹನಿಟ್ರ್ಯಾಪ್ : ಇಬ್ಬರು ಯುವತಿಯರು ಸೇರಿದಂತೆ 4…

ಇತ್ತೀಚಿನ ಸುದ್ದಿ

ಸಾಮಾಜಿಕ ಬದ್ಧತೆ ಮೆರೆದ ಪತ್ರಕರ್ತರು: ತಾವೇ ಬೀದಿಗಿಳಿದು ರಸ್ತೆ ಬದಿ ಹೊಂಡಕ್ಕೆ ತಡೆ ಕಟ್ಟಿದರು !

January 10, 2021, 10:35 PM

ಮಂಗಳೂರು(reporterkarnataka news): ಜನಪ್ರತಿನಿಧಿಗಳ ಗಮನಕ್ಕೆ ತಂದು, ಪತ್ರಿಕೆಯಲ್ಲಿ ಸುದ್ದಿ ಬರೆದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳದೇ ಇದ್ದಾಗ ಸ್ವತಃ ಪತ್ರಕರ್ತರೇ ರಸ್ತೆಗಿಳಿದು ತಮ್ಮಿಂದಾದ ಅಳಿಲ ಸೇವೆ ಮಾಡಿದ್ದಾರೆ. 

ಕೆಪಿಟಿ ಬಳಿ ಕದ್ರಿ ಠಾಣೆ ಎದುರಿನಿಂದಾಗಿ ರಾಷ್ಟ್ರೀಯ ಹೆದ್ದಾರಿ 66ಕ್ಕೆ ಸೇರುವ ತಿರುವಿನಲ್ಲಿ ರಸ್ತೆಯ ಅಡಿ ಭಾಗ ಕುಸಿತವಾಗಿದೆ. ಮೇಲ್ಭಾಗದಲ್ಲಿ ರಸ್ತೆ ಸುಂದರವಾಗಿದ್ದು, ಒಳಗಡೆ ಟೊಳ್ಳಾಗಿದೆ. ಕಾರು ಬಿಡಿ, ದ್ವಿಚಕ್ರ ವಾಹನ ಬದಿಯಲ್ಲಿ ಚಲಿಸಿದರೂ ಸುಮಾರು 10 ಅಡಿಯ ಕೊಳಚೆ ನೀರು ಹರಿಯುವ ಚರಂಡಿಗೆ ಬೀಳುವುದು ಖಚಿತ. ಇದನ್ನು ಮನಗಂಡ

ವಿಜಯವಾಣಿಯ ಮಂಗಳೂರು ವರದಿಗಾರ ಹರೀಶ್ ಮೋಟುಕಾನ ಮತ್ತು ಛಾಯಾಚಿತ್ರಗ್ರಾಹಕ ಸಂದೇಶ್ ಜಾರ ಅವರು ದೊಡ್ಡ ಗಾತ್ರದ ಕಲ್ಲುಗಳನ್ನು ಜೋಡಿಸಿ ಸಣ್ಣಮಟ್ಟಿನ ತಡೆಗೋಡೆ ನಿರ್ಮಿಸಿದ್ದಾರೆ.

ಕೆಪಿಟಿ ಪರಿಸರದಲ್ಲಿ ಓಡಾಡಿ, ಹುಡುಕಾಡಿದ  ದೊಡ್ಡ ಗಾತ್ರದ ಕಲ್ಲುಗಳನ್ನು ತಂದು ವಾಹನಗಳು ರಸ್ತೆಯ ಅಂಚಿಗೆ ಬರದಂತೆ ಇಟ್ಟಿದ್ದಾರೆ. ಇಲ್ಲಿ ರಾತ್ರಿ ವೇಳೆಯಲ್ಲೂ ಉತ್ತಮ ಬೆಳಕಿನ ವ್ಯವಸ್ಥೆ ಇರುವುದರಿಂದ ಕಲ್ಲುಗಳು ದೂರದಿಂದಲೇ ಬದಿಗೆ ಬರದಂತೆ ಎಚ್ಚರಿಕೆ ನೀಡುತ್ತಿವೆ. ಪತ್ರಕರ್ತರ ಸಾಮಾಜಿಕ ಬದ್ಧತೆ ಎಲ್ಲರಿಂದಲೂ ಮೆಚ್ಚುಗೆಗೆ ಪಾತ್ರವಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು