6:30 AM Monday30 - November 2020
ಬ್ರೇಕಿಂಗ್ ನ್ಯೂಸ್
ಕಲಬುರ್ಗಿಯಲ್ಲಿ ಭೂಮಿ ಕಂಪಿಸಿದ ಅನುಭವ: ಭಯಭೀತರಾದ ಜನ ದಿಕ್ಕೆಟ್ಟು ಓಡಿದರು ಭಾರೀ ಹಿಂಸಾಚಾರ, ವಾಹನಗಳಿಗೆ ಬೆಂಕಿ ಬಂಗಾಳ ಕೊಲ್ಲಿಯಲ್ಲಿ ಮತ್ತೊಂದು ವಾಯುಭಾರ ಕುಸಿತ: ರಾಜ್ಯದ ವಿವಿಧಡೆ ಡಿಸೆಂಬರ್ 1ರಿಂದ ಮಳೆ? ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಗೆಲ್ಲಲು ಕದ್ರಿ ಮಂಜುನಾಥನಿಗೆ ಬಿಜೆಪಿ ಮೊರೆ ಬಿ.ಸಿ.ರೋಡ್ ನಲ್ಲಿ ಗ್ರಾಮ ಸ್ವರಾಜ್ಯ ಸಮಾವೇಶ ಉದ್ಘಾಟನೆಯಲ್ಲಿ ಡಿಸಿಎಂ ಡಾ. ಅಶ್ವಥ್ ನಾರಾಯಣ್ ಬಜಾಲ್ ಆದರ್ಶನಗರದ ಹದಗೆಟ್ಟ ಮುಖ್ಯ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ ಕೊಂಚಾಡಿ ಕಾಶೀ ಮಠದಲ್ಲಿ ತುಳಸಿ ಪೂಜೆ: ಪಂಚಾಮೃತ, ಕ್ಷೀರಾಭಿಷೇಕ ಸಂಪನ್ನ ಜಾಮೀನು ಕೋರಿ ಹೈಕೋರ್ಟ್ ಗೆ ಮತ್ತೆ ಅರ್ಜಿ ಸಲ್ಲಿಸಿದ ಸ್ಯಾಂಡಲ್ ವುಡ್ ನಟಿ… ಜಾಮೀನು ಕೋರಿ ಹೈಕೋರ್ಟ್ ಗೆ ಮತ್ತೆ ಅರ್ಜಿ ಸಲ್ಲಿಸಿದ ಸ್ಯಾಂಡಲ್ ವುಡ್ ನಟಿ… ಹೈದರಾಬಾದ್ ತಲುಪಿದ ಪ್ರಧಾನಿ ಮೋದಿ: ಬಯೋಟೆಕೆ ಸಂಸ್ಥೆಗೆ ಭೇಟಿ, ವಿಜ್ಞಾನಿಗಳ ಜತೆ ಸಮಾಲೋಚನೆ 

ಇತ್ತೀಚಿನ ಸುದ್ದಿ

ಸೇಲ್ ಆಯಿತು, ಅದಾನಿ ಗ್ರೂಪ್ ಪಾಲಾಯಿತು  ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

October 31, 2020, 5:22 PM

ಮಂಗಳೂರು(reporterkarnataka news):

ಕೇಂದ್ರ ಸರಕಾರದ ಮೊದಲ ಹಂತದ ಖಾಸಗಿಕರಣ ಭಾಗವಾಗಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅದಾನಿ ಗ್ರೂಪ್ ಆಫ್ ಕಂಪನಿಯ ತೆಕ್ಕೆಗೆ ಸೇರಿದ್ದು, ಶನಿವಾರದಿಂದ ಕಂಪನಿಯಡಿ ವಿಮಾನ ನಿಲ್ದಾಣದ ಕಾರ್ಯಭಾರ ಆರಂಭವಾಗಿದೆ. 

ಅದಾನಿ ಕಂಪನಿಯು ಬಿಡ್ ಮೂಲಕ ವಿಮಾನ ನಿಲ್ದಾಣದ ಪಾರಮ್ಯ ಪಡೆದಿದೆ. ಮಂಗಳೂರು ವಿಮಾನ ನಿಲ್ದಾಣದ ಖಾಸಗೀಕರಣದ ಬಗ್ಗೆ ಆಡಳಿತ ಪಕ್ಷಕ್ಕೆ ಸೇರಿದ

ಜಿಲ್ಲೆಯ ಯಾವುದೇ ಜನಪ್ರತಿನಿಧಿಗಳು ವಿರೋಧ ವ್ಯಕ್ತಪಡಿಸಿಲ್ಲ. ಪ್ರತಿಪಕ್ಷದ ಕಡೆಯಿಂದಲೂ ಪ್ರಬಲವಾದ ವಿರೋಧ, ಪ್ರತಿಭಟನೆ ನಡೆದಿಲ್ಲ. ಎತ್ತಿನಹೊಳೆ ವಿರುದ್ಧ ಹೋರಾಟದಲ್ಲೇ ಭಾಗವಹಿಸದ ಇಲ್ಲಿನ ನಾಗರಿಕರು ವಿಮಾನ ನಿಲ್ದಾಣ ಖಾಸಗೀಕರಣ ಬಗ್ಗೆ ಸೊಲ್ಲೆತ್ತಲಿಲ್ಲ. ಇದೆಲ್ಲ ಆಡಳಿತ ನಡೆಸುವವರ ಹಾದಿಯನ್ನು ಸುಗಮಗೊಳಿಸಿತು. 

ಕರಾವಳಿಯಲ್ಲಿ ಇದುವರೆಗೆ ಯಾವುದೇ ಜನಪರ ಚಳವಳಿ ನಡೆದಿಲ್ಲ. ನಮಗೇಕೆ ಉಸಾಬರಿ ಎನ್ನುವುದೇ ಕರಾವಳಿಗರ ನೀತಿ. ಇದರ ಪರಿಣಾಮ ಮಂಗಳೂರು ವಿಮಾನ ನಿಲ್ದಾಣ ಆದಾನಿ ಪಾಲಾಗಿದೆ ಎಂದು ಇಲ್ಲಿನ ಪ್ರಜ್ಞಾವಂತ ನಾಗರಿಕರು ಹೇಳುತ್ತಾರೆ.

ಮಂಗಳೂರು ವಿಮಾನ ನಿಲ್ದಾಣ ಖಾಸಗೀಕರಣಗೊಂಡ 6ನೇ ವಿಮಾನ ನಿಲ್ದಾಣವಾಗಿದೆ. ನವೆಂಬರ್ 2ರಂದು ಲಕ್ನೋ ವಿಮಾನ ನಿಲ್ದಾಣ ಹಾಗೂ ನವೆಂಬರ್ 6ರಂದು ಅಹಮ್ಮದಾಬಾದ್ ವಿಮಾನ ನಿಲ್ದಾಣ ಅದಾನಿಗೆ ಗ್ರೂಪ್ ಒಡೆತನಕ್ಕೆ ಸೇರುವ ನಿರೀಕ್ಷೆಯಿದೆ.

ಇತ್ತೀಚಿನ ಸುದ್ದಿ

ಜಾಹೀರಾತು