ಇತ್ತೀಚಿನ ಸುದ್ದಿ
ಸಖರಾಯಪಟ್ಟಣ ತೋಟದ ಮನೆಯಲ್ಲಿ ನಡೆಯಲಿದೆ ಧರ್ಮೇಗೌಡರ ಅಂತ್ಯಕ್ರಿಯೆ
December 29, 2020, 1:58 PM

ಚಿಕ್ಕಮಗಳೂರು(reporterkarnataka news):
ವಿಧಾನ ಪರಿಷತ್ ಉಪ ಸಭಾಪತಿ ಎಸ್.ಎಲ್. ಧರ್ಮೇಗೌಡ (65) ಅವರ ಅಂತ್ಯಕ್ರಿಯೆ ಸಖರಾಯಪಟ್ಟಣದ ತೋಟದ ಮನೆಯಲ್ಲಿ ನಡೆಯಲಿದೆ.
ಕಡೂರು ತಾಲೂಕು ಮಂಗೇನಹಳ್ಳಿ ಗ್ರಾಮದಲ್ಲಿ ಧರ್ಮೇಗೌಡ ಅವರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದರು.
ಧರ್ಮೇಗೌಡರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ. ಪೋಸ್ಟ್ ಮಾರ್ಟನ್ ಮುಗಿದ ಬಳಿಕ ಪಾರ್ಥೀವ ಶರೀರವನ್ನು ಸಖರಾಯಪಟ್ಟಣಕ್ಕೆ ತರಲಾಗುತ್ತದೆ.