ಇತ್ತೀಚಿನ ಸುದ್ದಿ
ಸಜೀಪಮುನ್ನೂರು ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರ್ಷಿಕ ಪಂಚಮಿ, ಷಷ್ಠಿ, ಜಾತ್ರಾ ಮಹೋತ್ಸವ
December 20, 2020, 8:22 AM

ಬಂಟ್ವಾಳ(reporterkarnataka news):
ಸಜೀಪಮುನ್ನೂರು ಮುಗುಳಿಯ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರ್ಷಿಕ ಪಂಚಮಿ ಹಾಗೂ ಷಷ್ಠಿ ಹಾಗೂ ವರ್ಷಾವಧಿ ಜಾತ್ರಾ ಮಹೋತ್ಸವ ಅಂಗವಾಗಿ ಪುಣ್ಯ ಪಂಚಗವ್ಯ ಗಣಯಾಗ, ಫಲಪಂಚಾಮೃತ ಅಭಿಷೇಕ, ಪವಮಾನ ಸೂಕ್ತ, ಅಭಿಷೇಕ ನಾಗದೇವರಿಗೆ ಕಲ್ಪೋಕ್ತ ಪೂಜೆ ನಡೆಯಿತು.
ವಿವಿಧ ಭಜನಾ ತಂಡಗಳಿಂದ ನಾಮಸಂಕೀರ್ತನೆ, ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಇವರಿಂದ ಕಾಲಮಿತಿ ಯಕ್ಷಗಾನ ಬಯಲಾಟ, ಕಾರ್ತಿಕ ಪೂಜೆ, ರಂಗ ಪೂಜೆ ವಿಧ್ಯುಕ್ತವಾಗಿ ಜರುಗಿತು.