8:27 PM Sunday28 - February 2021
ಬ್ರೇಕಿಂಗ್ ನ್ಯೂಸ್
ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ ಸಚಿವ ಅಂಗಾರ ತವರಿನಲ್ಲಿ ಭಿನ್ನಮತ ಸ್ಫೋಟ: 3 ಮಂದಿ ಹಿರಿಯ ನಾಯಕರು ಬಿಜೆಪಿಯಿಂದ… ಅಥಣಿ ತಾಲೂಕಿನ ರಡೇರಹಟ್ಟಿ ಗ್ರಾಮದಲ್ಲಿ  ಆಕಸ್ಮಿಕವಾಗಿ ಬೆಂಕಿ ತಗುಲಿ ಗುಡಿಸಲು ಭಸ್ಮ: 4… ಒಂದೂವರೆ ತಿಂಗಳ ಅವಧಿಯಲ್ಲಿ 10 ಬಾರಿ ಇಂಧನ ದರ ಏರಿಕೆ: ಕೆಪಿಸಿಸಿ ಅಧ್ಯಕ್ಷ… ವೈದ್ಯಕೀಯ ಸೀಟುಗಳ ಬ್ಲಾಕಿಂಗ್ ದಂಧೆ: ಮಿನಿ ವಿಧಾನ ಸೌಧದ ಎದುರು ಎಬಿವಿಪಿ ಪ್ರತಿಭಟನೆ;… ಮಂಗಳೂರು ಮಹಾನಗರಪಾಲಿಕೆ  2020-21ನೇ  ಸಾಲಿನ ತೆರಿಗೆ ಪೂರ್ತಿ ಪಾವತಿಸಿದರೆ ಶೇ. 5% ವಿನಾಯಿತಿ ಮಹಿಳಾ ಸಿಬ್ಬಂದಿಗೆ ಮಾನಸಿಕ ಕಿರುಕುಳ ಪ್ರಕರಣ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ… ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ನೋಡಿ ಕಾನೂನಿನ ಸಮರ್ಪಕ ಜಾರಿಯಿಂದ ಮಾತ್ರ ಸಮಾಜದಲ್ಲಿ ಅಪರಾಧಗಳನ್ನು ನಿಯಂತ್ರಿಸಲು ಸಾಧ್ಯ: ಗಾಂವ್ಕರ್ ಪಂಚ ರಾಜ್ಯಗಳ ಎಲೆಕ್ಷನ್ ಘೋಷಣೆ: ಪಶ್ಚಿಮ ಬಂಗಾಳದಲ್ಲಿ 8 ಹಂತಗಳ ಚುನಾವಣೆ; ಮೇ…

ಇತ್ತೀಚಿನ ಸುದ್ದಿ

ಸರಕಾರಿ ಡೈರಿಗಳಿಗೆ ಹಾಲು ನೀಡಿದರೆ ವಿಮೆ, ವೈದ್ಯಕೀಯ ಚಿಕಿತ್ಸೆ ಲಭ್ಯ: ರಮೇಶ್ ಕುಮಾರ್

November 19, 2020, 8:41 PM

ಮಂಗಳೂರು(reporterkarnataka news) : ಯಲ್ದೂರು ಹಾಲು ಉತ್ಪಾದಕರು ಯಾವುದೇ ಕಾರಣಕ್ಕೂ ತಮ್ಮ ಹಾಲನ್ನು ಖಾಸಗಿ ಡೈರಿಗಳಿಗೆ ಕಳುಹಿಸಬೇಡಿ. ಬದಲಾಗಿ ಸರ‍್ಕಾರಿ ಹಾಲು ಡೈರಿಗಳಿಗೆ ಹಾಲನ್ನು ನೀಡುವುದರಿಂದ ರೈತರಿಗೆ ವಿಮೆ, ತಮ್ಮ ಹಸುಗಳಿಗೆ ವೈದ್ಯಕೀಯ ಚಿಕಿತ್ಸೆ ಮತ್ತು ಸರ‍್ಕಾರದಿಂದ ದೊರೆಯುವ ಪ್ರೋತ್ಸಾಹ ಧನವನ್ನು ಪಡೆಯಲು ಸಾದ್ಯವಾಗುತ್ತದೆ ಎಂದು ಮಾಜಿ ವಿಧಾನ ಸಭಾಧ್ಯಕ್ಷ ಹಾಗೂ ಶಾಸಕ ಕೆ.ಆರ್ . ರಮೇಶ್ ಕುಮಾರ್ ಹೇಳಿದರು.

ಅವರು ಗುರುವಾರ ಯಲ್ದೂರು ಹೋಬಳಿ ಶೆಟ್ಟಿಹಳ್ಳಿಗ್ರಾಮದಲ್ಲಿ ಹಮ್ಮಿಕೊಂಡಿದ್ದ ಶೆಟ್ಟಿಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.

ಹೈನುಗಾರಿಕೆಯಿಂದ ಇಂದು ಗ್ರಾಮೀಣ ಭಾಗದ ಜನರು ಆರ್ಥಿಕವಾಗಿ ಸಬಲಗಾಗುತ್ತಿದ್ದಾರೆ. ಆದ್ದರಿಂದ ಗ್ರಾಮ ಪ್ರತಿಯೊಂದು ಕುಟುಂಬವು ಸ್ತ್ರೀ ಶಕ್ತಿ ಸಂಘಗಳಿಂದ ಮತ್ತು ರೈತರ ಸೇವ ಸಹಕಾರ ಸಂಘಗಳಿಂದ ದೊರೆಯುವ ಸಾಲ ಸೌಲಭ್ಯವನ್ನು ಬಳಸಿಕೊಂಡು ಹಸುಗಳನ್ನು ಖರೀದಿಸಿ ಸ್ವಾವಲಂಬಿ ಜೀವನವನ್ನು ನಡೆಸಬೇಕು. ಸಹಕಾರ ಸಂಘದ ಆಡಳಿತ ಮಂಡಳಿಯವರು ಖಾಸಗಿ ಡೈರಿಗಳಿಗೆ ಹಾಲು ಒದಗಿಸುವ ಹಾಲು ಉತ್ಪಾದಕರ ಮನೆಗಳಿಗೆ ಬೇಟಿ ನೀಡಿ ಅವರ ಮನವೊಲಿಸಿ ಹಾಲನ್ನು ರ‍್ಕಾರಿ ಡೈರಿಗಳಿಗೆ ಒದಗಿಸುವಂತೆ ಮಾಡಬೇಕು ಎಂದು ತಿಳಿಸಿದರು .

ಯಲ್ದೂರು ಜಿಲ್ಲಾಪಂಚಾಯಿತಿ ಸದಸ್ಯ ಗೋವಿಂದ ಸ್ವಾಮಿ ಮಾತನಾಡುತ್ತ ದಿವಂಗತ ಎಂ ವಿ ಕೃಷ್ಣಪ್ಪನವರ ಕನಸು ಇಂದು ನನಸಾಗುತ್ತಿದೆ. ಕೋಲಾರ ಚಿಕ್ಕಬಳ್ಳಾಪುರ ಅವಳಿ ಜಿಲ್ಲೆಗಳ ಎಲ್ಲಾ ಗ್ರಾಮಗಳಲ್ಲಿ ಹಾಲ ಉತ್ಪಾದಕರ ಸಹಕಾರ ಸಂಘಗಳು ಸ್ಥಾಪನೆಯಾಗಿ ಜನರು ನೆಮ್ಮದಿಯಿಂದ ಜೀವನ ನಡೆಸುವಂತಾಗಿದೆ. ಜೊತೆಗೆ ಆಧುನಿಕ ಭಗೀರಥ ಕೆ. ಆರ್ ರಮೇಶ್ ಕುಮಾರ್ ರವರ ಪ್ರಯತ್ನದ ಫಲವಾಗಿ ಕೆ. ಸಿ ವ್ಯಾಲಿ ನೀರು ಕೋಲಾರ ಜಿಲ್ಲೆಯ ಕೆರೆಗಳಲ್ಲಿ ಹರಿಯುತ್ತಿದ್ದು ಹೈನುಗಾರಿಕೆ ಹಾಗೂ ಇತರೆ ವ್ಯವಸಾಯ ಚಟುವಟಿಕೆಗಳಿಗೆ ಅನುಕೂಲವಾಗಿದೆ ಎಂದು ತಿಳಿಸಿದರು.

ಈ ಸಂರ‍್ಭದಲ್ಲಿ ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂದ ನರ‍್ದೇಶಕ ಹನುಮೇಶ್ ,ಮಾಜಿ ಅಧ್ಯಕ್ಷ ಕೊಂಡಸಂದ್ರ ವೆಂಕಟಶಿವಾರೆಡ್ಡಿ , ಆಧಿಕಾರಿ ಶ್ರೀಕಾಂತ್ , ಶೆಟ್ಟಿಹಳ್ಳಿ ಹಾಲು ಉತ್ಪಾದಕಸಹಕಾರ ಸಂಘದ ಅಧ್ಯಕ್ಷ ವಿ ನಾಗಪ್ಪ , ತಾಲ್ಲೂಕು ಪಂಚಾಯ್ತಿ ಸದಸ್ಯ ಶ್ರೀರಾಮಪ್ಪ, ಎ.ಪಿ.ಎಂ.ಸಿ ನರ‍್ದೇಶಕ ಯೋಗೀಂದ್ರ ಗೌಡ ವೈ ಎಸ್. ಎಪ್. ಸಿ. ಎಸ್ ಅಧ್ಯಕ್ಷ ನಾರಾಯಣಸ್ವಾಮಿ, ಮುಖಂಡರಾದ ಇ. ದೇವರಾಜ್ , ಕೆ.ಟಿ. ಜಯಣ್ಣ , ಗೌರಮ್ಮ, ಗಾಜುಲಪಲ್ಲಿ ಚಂದ್ರಪ್ಪ , ಬೈಚಪ್ಪ, ಲಕ್ಷ್ಮೀಸಾಗರ ಅಶೋಕ್ ಇನ್ನೂ ಮುಂತಾದವರು ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು