4:47 AM Wednesday27 - January 2021
ಬ್ರೇಕಿಂಗ್ ನ್ಯೂಸ್
ಬಂಧನ ಭೀತಿಯಿಂದ ಸಿಎಂ ಯಡಿಯೂರಪ್ಪ, ನಿರಾಣಿ ಬಚಾವ್: ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು… ಪದ್ಮವಿಭೂಷಣ ಪ್ರಶಸ್ತಿಗೆ ಆಯ್ಕೆಯಾದ ಡಾ. ಬಿ.ಎಂ. ಹೆಗ್ಡೆ ಅವರಿಗೆ ಸಂಸದ ನಳಿನ್, ಶಾಸಕ ಕಾಮತ್… ಖ್ಯಾತ ಕ್ರಿಕೆಟಿಗ ಸೌರವ್ ಗಂಗೂಲಿ ಮತ್ತೆ ಆಸ್ಪತ್ರೆಗೆ ದಾಖಲು: ಪುನಃ ಕಾಣಿಸಿಕೊಂಡ ಎದೆನೋವು ಅಕ್ರಮ ಆಸ್ತಿ ಪ್ರಕರಣದಲ್ಲಿ ಶಿಕ್ಷೆಗೀಡಾದ ಜಯಲಲಿತಾ ಆಪ್ತೆ ಶಶಿಕಲಾ ಇಂದು ಜೈಲಿನಿಂದ ಬಿಡುಗಡೆ  ರೇಡಿಯೋ ಸಾರಂಗ್ ಮತ್ತು ಎನ್.ಎಸ್.ಎಸ್. ವಿದ್ಯಾರ್ಥಿಗಳಿಂದ ಬೆಂಗ್ರೆ ಬೀಚ್ ಸ್ವಚ್ಛತೆ ಜಾನಪದ ಕ್ರೀಡೆ ಕಂಬಳ ಜನವರಿ ಅಂತ್ಯದಿಂದ ಪ್ರಾರಂಭ: ಸಂಸದ ನಳಿನ್ ಕುಮಾರ್ ಕಟೀಲ್ ಎಸ್‌ಡಿಪಿಐ ವತಿಯಿಂದ ಗಣರಾಜ್ಯೋತ್ಸವ ಪ್ರಯುಕ್ತ ರೈತ ಐಕ್ಯತಾ ಸಂಗಮ ಬಿಗ್ ಬಾಸ್ ಖ್ಯಾತಿಯ ನಟಿ ಜಯಶ್ರೀ ರಾಮಯ್ಯ ಆತ್ಮಹತ್ಯೆ: ಕುಟುಂಬದ ಸಮಸ್ಯೆ ಕಾರಣ? ಮಂಗಳೂರಿನ ನರ್ಸಿಂಗ್ ಕಾಲೇಜಿನ 4 ಮಂದಿ ವಿದ್ಯಾರ್ಥಿನಿಯರಿಗೆ ಕೊರೊನಾ: ಪಾಲಕರಲ್ಲಿ ಮತ್ತೆ ಭೀತಿ… ಗಣರಾಜ್ಯೋತ್ಸವ ಪರೇಡ್ ಗೆ ಆಯ್ಕೆಯಾದ ಕರ್ನಾಟಕದ ಟ್ಲಾಬ್ಲೊದಲ್ಲಿ ಕನ್ನಡ ಧ್ವಜ ನಾಪತ್ತೆ

ಇತ್ತೀಚಿನ ಸುದ್ದಿ

ಸಚಿವರ ಮಾತು ಕೇಳಿ ಸಂಪಾದಕರೇ ಸಹೋದ್ಯೋಗಿ ಪತ್ರಕರ್ತನಿಗೆ ಮಾನಸಿಕ ಹಿಂಸೆ, ಕಿರುಕುಳ ನೀಡಿದರೆ? ಡೆತ್ ನೋಟ್ ಏನು ಹೇಳುತ್ತದೆ? 

December 28, 2020, 6:12 PM

ಬೆಂಗಳೂರು(reporterkarnataka news): ರಾಜ್ಯಮಟ್ಟದ ಪತ್ರಿಕೆಯೊಂದರ ಸಂಪಾದಕರೊಬ್ಬರು ಸಚಿವರು ಹಾಗೂ ಪೊಲೀಸ್ ಇಲಾಖೆಯೊಂದಿಗೆ ಸೇರಿಕೊಂಡು ಬಡಪಾಯಿ ಪತ್ರಕರ್ತ ಸಹೋದ್ಯೋಗಿಯೊಬ್ಬರಿಗೆ ಮಾನಸಿಕ ಹಿಂಸೆ, ಕಿರುಕುಳ ನೀಡಿದ್ದರು ಎಂದು ಆರೋಪಿಸಲಾದ ಪ್ರಕರಣ ಇದೀಗ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ತನಗೆ ಯಾವ ರೀತಿಯಲೆಲ್ಲ ಕಿರುಕುಳ, ಹಿಂಸೆ ನೀಡಲಾಯಿತು ಎನ್ನುವುದನ್ನು ಪತ್ರಕರ್ತ ಆಶ್ವಥ್ ನಾರಾಯಣ್ ಡೆತ್ ನೋಟ್ ನಲ್ಲಿ ವಿಶದಪಡಿಸಿದ್ದಾರೆ.

ವೈದ್ಯಕೀಯ ಸಚಿವ ಡಾ. ಸುಧಾಕರ್‌ ಹಾಗೂ ಕನ್ನಡ ಪ್ರಭ ಸಂಪಾದಕ ರವಿ ಹಗೆಡೆ ಸೇರಿದಂತೆ ಇನ್ನು ಹಲವರ ಕಿರುಕುಳ ನೀಡಿದ್ದಾಗಿ ಆರೋಪಿಸಿ ಕನ್ನಡ ಪ್ರಭ ಚಿಕ್ಕಬಳ್ಳಾಪುರ ಜಿಲ್ಲಾ ವರದಿಗಾರ ಕಳೆದ ಶನಿವಾರ ಸುದೀರ್ಘ ಡೆತ್‌ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದರು. ಈ ನಡುವೆ ಆತ್ಮಹತ್ಯೆಗೆ ಯತ್ನಿಸಿದ ಅಶ್ವಥ್ ನಾರಾಯಣ್ ಚೇತರಿಸಿಕೊಳ್ಳುತ್ತಿದ್ದು, ಪ್ರಕರಣ ನಿಷ್ಪಕ್ಷಪಾತ ತನಿಖೆಗೆ ಕರ್ನಾಟಕ ರಾಜ್ಯ ಪತ್ರಕರ್ತರ ಸಂಘ ಸೇರಿದಂತೆ ಹಲವು ಸಂಘಟನೆಗಳು ಒತ್ತಾಯಿಸಿವೆ. ಸಾಮಾಜಿಕ ಜಾಲತಾಣಗಳಲ್ಲಿ ಬಿಸಿಬಿಸಿ ವಾದ ವಿವಾದಗಳು ಆರಂಭವಾಗಿವೆ.

ಅಶ್ವಥ್‌ ನಾರಾಯಣ ಅವರು ಶನಿವಾರದಂದು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಸುದೀರ್ಘ ಡೆತ್‌‌ನೋಟ್ ಬರೆದಿದ್ದು, ತಮ್ಮ ಸಾವಿಗೆ ಸಚಿವ ಡಾ. ಕೆ. ಸುಧಾಕರ್, ಕನ್ನಡ ಪ್ರಭ ಸಂಪಾದಕ ರವಿ ಹೆಗಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಕೆ. ಮಿಥುನ್ ಕುಮಾರ್, ಸಹ ಸಂಪಾದಕ ಬಿ. ವಿ. ಮಲ್ಲಿಕಾರ್ಜುನಯ್ಯ, ಪಿಎಸ್ಐ ಪಾಪಣ್ಣ ಸೇರಿದಂತೆ ಜಿಲ್ಲೆಯ ಇತರ ಐದು ಪತ್ರಕರ್ತರು ಕಾರಣ, ಅವರ ಪಿತೂರಿಯಿಂದಲೇ ನನ್ನ ಬದುಕು ಈ ಹಂತಕ್ಕೆ ತಲುಪಿದೆ ಎಂದು ಆರೋಪಿಸಿದ್ದರು.

ಡೆತ್‌ನೋಟ್ ಅನ್ನು ಒಂದು ತಿಂಗಳಿನಿಂದ ಬರೆಯುತ್ತಿದ್ದೇನೆ, ಆದರೆ ಕುಟುಂಬದವರ ಮುಖನೋಡಿಕೊಂಡು ತನ್ನ ಆತ್ಮಹತ್ಯೆಯನ್ನು ಮುಂದೂಡಿರುವುದಾಗಿ ಅಶ್ವಥ್ ನಾರಾಯಣ  ಹೇಳಿಕೊಂಡಿದ್ದಾರೆ. ಮುಂಬಡ್ತಿಯನ್ನು ಹಾಗೂ ಸಂಬಳ ತೆಡೆಹಿಡಿದಿದ್ದನ್ನು ಡೆತ್ ನೋಟ್ ನಲ್ಲಿ ತಿಳಿಸಿದ್ದಾರೆ. ಅವರು ತಮ್ಮ ಪತ್ರವನ್ನು ಫೇಸ್‌‌ಬುಕ್‌‌ನಲ್ಲಿ ಅಪ್ಲೋಡ್ ಮಾಡಿದ ತಕ್ಷಣ ಅವರ ಲೊಕೇಶನ್ ಅನ್ನು ಪೊಲೀಸರು ಟ್ಯ್ರಾಕ್ ಮಾಡಿದ್ದರು. ನಂತರ ದೇವಾಲಯವೊಂದರ ಬಳಿ ಪ್ರಜ್ಞೆ ತಪ್ಪಿ ಬಿದ್ದಿದ್ದನ್ನು ಪತ್ತೆ ಹಚ್ಚಿ ಆಸ್ಪತ್ರೆಗೆ ದಾಖಲಿಸಿದ್ದರು.

ಈ ಮಧ್ಯೆಪತ್ರಕರ್ತ ಅಶ್ವಥ್‌ ನಾರಾಯಣ ಅವರ ಆತ್ಮಹತ್ಯೆ ಯತ್ನ ಪ್ರಕರಣದ ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.

ಹಿರಿಯ ಪತ್ರಕರ್ತ ಖಿನ್ನತೆಗೊಳಗಾಗಿ ಆತ್ಮಹತ್ಯೆ ಯತ್ನ ಮಾಡಿರುವುದು ಆತಂಕಕಾರಿ ಮತ್ತು ನೋವಿನ ಸಂಗತಿಯಾಗಿದೆ.

ಅವರನ್ನು ಸ್ಥಳೀಯ ಪೊಲೀಸ್ ಪ್ರಕರಣದಲ್ಲಿ ಸಿಲುಕಿಸಲು ಮತ್ತು ಆಗಿಂದಾಗ್ಗೆ ಉದ್ದೇಶಪೂರ್ವಕವಾಗಿ ಕಿರುಕುಳ ನೀಡುವ ಪ್ರಯತ್ನ ನಡೆದಿದೆ. ಪತ್ರಕರ್ತನ ಮಾನಸಿಕ ಸ್ಥಿಮಿತ ತಗ್ಗಿಸುವ ಮಟ್ಟಿಗೆ ಪೊಲೀಸ್ ಒತ್ತಡ ಮತ್ತು ಕಿರುಕುಳ ಮಾಡುವುದು ಅತ್ಯಂತ ಖಂಡನೀಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾಗಾದರೆ ಪತ್ರಕರ್ತ ಅಶ್ವಥ್ ನಾರಾಯಣ್ ಅವರು ತನ್ನ ಡೆತ್ ನೋಟ್ ನಲ್ಲಿ ಮಾಡಿರುವ ಆರೋಪ ನಿಜವೇ?  ಅವರು ಬರೆದುಕೊಂಡದ್ದೆಲ್ಲ ಸತ್ಯವೇ? ಸಚಿವರು, ಸಂಪಾದಕರು ಹಾಗೂ ಪೊಲೀಸ್ ಇಲಾಖೆ ಅವರಿಗೆ ಕಿರುಕುಳ ನೀಡಿದೆಯೇ?  ಇದೆಲ್ಲ ನಿಪ್ಷಕ್ಷಪಾತ, ಪಾರದರ್ಶಕ ತನಿಖೆಯಿಂದ ಮಾತ್ರ ಹೊರಬರಲು ಸಾಧ್ಯ.

ಇತ್ತೀಚಿನ ಸುದ್ದಿ

ಜಾಹೀರಾತು