ಇತ್ತೀಚಿನ ಸುದ್ದಿ
ಸಚಿವ ಅಂಗಾರ ತವರಿನಲ್ಲಿ ಕಮಲ ಕದನ: ಬಿಜೆಪಿ ಶಕ್ತಿ ಕೇಂದ್ರದಿಂದ ಸುಳ್ಯ ಮಂಡಲ ಸಮಿತಿಗೆ ದೂರು ರವಾನೆ
January 17, 2021, 11:17 AM

ಸುಳ್ಯ:(Reporterkarnatkanews): ಸಚಿವ ಎಸ್. ಅಂಗಾರ ಅವರ ತವರು ಕ್ಷೇತ್ರವಾದ ಸುಳ್ಯ ಬಿಜೆಪಿಯಲ್ಲಿ ಒಳ ಜಗಳ ಮತ್ತೆ ಗರಿಬಿಚ್ಚಿದೆ. ಪಕ್ಷ ವಿರೋಧಿ ಚಟುವಟಿಕೆ ಕುರಿತು ಕಾಣಿಯೂರು ಬಿಜೆಪಿ ಶಕ್ತಿಕೇಂದ್ರದಿಂದ ದೂರು ರವಾನೆಯಾಗಿದೆ. ಸುಳ್ಯ ಬಿಜೆಪಿ ಮಂಡಲ ಸಮಿತಿಗೆ ದೂರು ನೀಡಲಾಗಿದೆ.
ಚಾರ್ವಾಕ ಗ್ರಾಮದ ಗೋಪಾಲಕೃಷ್ಣ ಪಟೇಲ್, ಮಾಧವಿ ಕೋಡಂದೂರು ಹಾಗೂ ದಿನೇಶ್ ಇಡ್ಯಡ್ಕ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ಕುರಿತು ದೂರು ನೀಡಲಾಗಿದೆ.
ದೂರಿನಲ್ಲಿ ಏನಿದೆ?: ಈ ಮೂವರು ನಾಯಕರು ಪಕ್ಷದ ವಿವಿಧ ಹುದ್ದೆಯಲ್ಲಿದ್ದು, ಪಕ್ಷಕ್ಕೆ ವಿರುದ್ಧವಾಗಿ ಹಾಗೂ ವಿರೋಧ ಪಕ್ಷಕ್ಕೆ ಅನುಕೂಲವಾಗುವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ.