10:28 AM Thursday28 - January 2021
ಬ್ರೇಕಿಂಗ್ ನ್ಯೂಸ್
ರಾಜ್ಯ ವಿಧಾನ ಮಂಡಲ ಅಧಿವೇಶನ ಇಂದಿನಿಂದ ಆರಂಭ: ರಾಜ್ಯಪಾಲರ ಭಾಷಣ ಬಂಧನ ಭೀತಿಯಿಂದ ಸಿಎಂ ಯಡಿಯೂರಪ್ಪ, ನಿರಾಣಿ ಬಚಾವ್: ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು… ಪದ್ಮವಿಭೂಷಣ ಪ್ರಶಸ್ತಿಗೆ ಆಯ್ಕೆಯಾದ ಡಾ. ಬಿ.ಎಂ. ಹೆಗ್ಡೆ ಅವರಿಗೆ ಸಂಸದ ನಳಿನ್, ಶಾಸಕ ಕಾಮತ್… ಖ್ಯಾತ ಕ್ರಿಕೆಟಿಗ ಸೌರವ್ ಗಂಗೂಲಿ ಮತ್ತೆ ಆಸ್ಪತ್ರೆಗೆ ದಾಖಲು: ಪುನಃ ಕಾಣಿಸಿಕೊಂಡ ಎದೆನೋವು ಅಕ್ರಮ ಆಸ್ತಿ ಪ್ರಕರಣದಲ್ಲಿ ಶಿಕ್ಷೆಗೀಡಾದ ಜಯಲಲಿತಾ ಆಪ್ತೆ ಶಶಿಕಲಾ ಇಂದು ಜೈಲಿನಿಂದ ಬಿಡುಗಡೆ  ರೇಡಿಯೋ ಸಾರಂಗ್ ಮತ್ತು ಎನ್.ಎಸ್.ಎಸ್. ವಿದ್ಯಾರ್ಥಿಗಳಿಂದ ಬೆಂಗ್ರೆ ಬೀಚ್ ಸ್ವಚ್ಛತೆ ಜಾನಪದ ಕ್ರೀಡೆ ಕಂಬಳ ಜನವರಿ ಅಂತ್ಯದಿಂದ ಪ್ರಾರಂಭ: ಸಂಸದ ನಳಿನ್ ಕುಮಾರ್ ಕಟೀಲ್ ಎಸ್‌ಡಿಪಿಐ ವತಿಯಿಂದ ಗಣರಾಜ್ಯೋತ್ಸವ ಪ್ರಯುಕ್ತ ರೈತ ಐಕ್ಯತಾ ಸಂಗಮ ಬಿಗ್ ಬಾಸ್ ಖ್ಯಾತಿಯ ನಟಿ ಜಯಶ್ರೀ ರಾಮಯ್ಯ ಆತ್ಮಹತ್ಯೆ: ಕುಟುಂಬದ ಸಮಸ್ಯೆ ಕಾರಣ? ಮಂಗಳೂರಿನ ನರ್ಸಿಂಗ್ ಕಾಲೇಜಿನ 4 ಮಂದಿ ವಿದ್ಯಾರ್ಥಿನಿಯರಿಗೆ ಕೊರೊನಾ: ಪಾಲಕರಲ್ಲಿ ಮತ್ತೆ ಭೀತಿ…

ಇತ್ತೀಚಿನ ಸುದ್ದಿ

ರನ್ ವೇ ಬದಲಾಯಿಸಿದ್ದೇ ವಿಮಾನ ದುರಂತಕ್ಕೆ ಹೇತುವಾಯಿತೇ?: ಎಟಿಸಿ ವರದಿ ಏನು ಹೇಳುತ್ತದೆ?

August 8, 2020, 6:27 AM

ಕಾಸರಗೋಡು(reporterkarnataka news): ಕೊಯಿಕೋಡ್ ಕರಿಪುರಂ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸಂಭವಿಸಿದ ಭೀಕರ ವಿಮಾನ ದುರಂತಕ್ಕೆ ರನ್ ವೇ ಬದಲಾಯಿಸಿದ್ದೇ ಕಾರಣ ಎನ್ನಲಾಗಿದೆ.

ವಾಸ್ತವದಲ್ಲಿ ಮೊದಲ ರನ್ ವೇಯಲ್ಲಿ ವಿಮಾನ ಇಳಿಯಬೇಕಿತ್ತು. ಆದರೆ ದುಬೈಯಿಂದ ಆಗಮಿಸಿದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದ ಪೈಲಟ್ ಗೆ ಎರಡನೇ ರನ್ ವೇಯಲ್ಲಿ ಇಳಿಯುವಂತೆ ಸೂಚಿಸಲಾಯಿತು ಎಂದು ವಾಯು ಸಂಚಾರ ನಿಯಂತ್ರಣ(ಎಟಿಸಿ) ವರದಿ ತಿಳಿಸಿದೆ ಎಂದು ಮಾಹಿತಿ ಲಭ್ಯವಾಗಿದೆ.

ಪ್ರಾಥಮಿಕ ವರದಿ ಪ್ರಕಾರ ವಿಮಾನ ರನ್ ವೇ ಮಧ್ಯದಲ್ಲಿ ಲ್ಯಾಂಡ್ ಆಯಿತು. ತಾಂತ್ರಿಕ ಕಾರಣದಿಂದ ರನ್ ವೇ ಜಾರಿದ ವಿಮಾನ ವೇಗವಾಗಿ 35 ಆಡಿ ಆಳದ ಕಂದಕಕ್ಕೆ ಉರುಳಿ ಎರಡು ಹೋಳಾಯಿತು. ಇದರ ಪರಿಣಾಮ ವಿಮಾನದ ಮೂತಿ ಭಾಗದಲ್ಲಿ ಆಸೀನರಾದ ಪ್ರಯಾಣಿಕರಲ್ಲಿ ಹೆಚ್ಚಿನವರು ಸಾವನ್ಬಪ್ಪಿದರು. ಉಳಿದವರು ಗಂಭೀರ ಗಾಯಗೊಂಡರು. ವಿಮಾನದ ಮಧ್ಯಭಾಗದ ನಂತರ ಆಸೀನರಾದವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದರು ಎಂಬ ಮಾಹಿತಿ ಲಭಿಸಿದೆ.

ಇತ್ತೀಚಿನ ಸುದ್ದಿ

ಜಾಹೀರಾತು