ಇತ್ತೀಚಿನ ಸುದ್ದಿ
ರೌಡಿ ಶೀಟರ್ ಮೇಲೆ ಪೊಲೀಸ್ ಫೈರಿಂಗ್: ಕಾಲಿಗೆ ಗುಂಡು ತಗುಲಿ ಆಸ್ಪತ್ರೆಗೆ ದಾಖಲು
January 7, 2021, 10:53 AM

ಬೆಂಗಳೂರು(reporterkarnataka news): ರೌಡಿ ಶೀಟರ್ ನೊಬ್ಬನನ್ನು ಬಂಧಿಸಲು ಪೊಲೀಸರು ಫೈರಿಂಗ್ ಮಾಡಿದ್ದಾರೆ. ಬೆಂಗಳೂರಿನ ಓಕಳಿಪುರಂ ಬಳಿ ಈ ಘಟನೆ ನಡೆದಿದೆ.
ನಂದಿನಿ ಲೇ ಔಟ್ ಪೊಲೀಸರು ಆರೋಪಿ ಗುಂಡ ಯಾನೆ ಕಾರ್ತಿಕನ ಮೇಲೆ ಗುಂಡು ಹಾರಿಸಿದ್ದಾರೆ. ಬಂಧಿಸಲು ತೆರಳಿದ್ದ ವೇಳೆ ಆರೋಪಿ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ಎಂದು ಆರೋಪಿಸಲಾಗಿದೆ.
ಕಾರ್ತಿಕ್ 15ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ಸಬ್ ಇನ್ಸ್ ಪೆಕ್ಟರ್ ನಿತ್ಯಾನಂದ ನೇತೃತ್ವದಲ್ಲಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. ಆರೋಪಿ ಕಾರ್ತಿಕ್ ಕಾಲಿಗೆ ಗುಂಡು ತಗುಲಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.