ಇತ್ತೀಚಿನ ಸುದ್ದಿ
ಟಿವಿ ರಿಮೋಟ್ ಬ್ಯಾಟರಿ ನುಂಗಿ ಮಗು ದಾರುಣ ಸಾವು
September 4, 2020, 9:11 AM

ಮೈಸೂರು(reporterkarnataka news): ಮೈಸೂರಿನಲ್ಲಿ ದಾರುಣ ಘಟನೆಯೊಂದು ಸಂಭವಿಸಿದೆ. ಮನೆಯಲ್ಲಿ ಟಿವಿ ರಿಮೋಟ್ ನಲ್ಲಿದ್ದ ಬ್ಯಾಟರಿ ನುಂಗಿದ ಮಗು ಸಾವನ್ನಪ್ಪಿದೆ. ಮೈಸೂರಿನ ಇಟ್ಟಿಗೆಗೂಡಿನಲ್ಲಿ ಈ ದುರ್ಘಟನೆ ನಡೆದಿದೆ.
ಹೇಮಂತ್ ಎಂಬ ಮಗು ಈ ಮೂಲಕ ಪ್ರಾಣ ಕಳೆದುಕೊಂಡಿದ್ದಾನೆ. ಆಟವಾಡುತ್ತಿದ್ದ ವೇಳೆ ಪಕ್ಕದಲ್ಲಿದ್ದ ಟಿ ವಿ ರಿಮೋಟ್ ಬ್ಯಾಟರಿ ನುಂಗಿದ್ದ. ಮಗುವನ್ನು ತಕ್ಷಣವೇ ಮೈಸೂರಿನ ಕೆ. ಆರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇದೀಗ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ. ಆಗಸ್ಟ್ 31ರಂದು ಈ ಘಟನೆ ನಡೆದಿತ್ತು. ಮೈಸೂರಿನ ನಜಾರಾಬಾದ್ ಪೊಲೀಸ್ ಠಾಣೆಯಲ್ಲಿ ಈ ಸಂಬಂದ ಪ್ರಕರಣ ದಾಖಲಿಸಲಾಗಿದೆ.