1:52 PM Saturday6 - March 2021
ಬ್ರೇಕಿಂಗ್ ನ್ಯೂಸ್
ತಮಿಳುನಾಡು ವಿಧಾನಸಭೆ ಚುನಾವಣೆ: 243 ಸ್ಥಾನಗಳ ಪೈಕಿ ಬಿಜೆಪಿ 20 ಸ್ಥಾನಗಳಲ್ಲಿ ಸ್ಪರ್ಧೆ?… ಅಸ್ಸಾಂ: 126 ಸ್ಥಾನಗಳಲ್ಲಿ ಬಿಜೆಪಿ 92ರಲ್ಲಿ ಸ್ಪರ್ಧೆ?: ಮಿಕ್ಕ ಸೀಟುಗಳು ಮಿತ್ರ ಪಕ್ಷಕ್ಕೆ? ಹೊರ ದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಮೂಡುಗೆರೆಯ ಕುಮಾರ್: ನೆರವಿಗೆ ಬಂದ ಕೆಸಿಎಫ್ ಸೌದಿ… ಕೇರಳ ಬಿಜೆಪಿ ಸಿಎಂ ಕ್ಯಾಂಡಿಡೇಟ್: ಬಿಜೆಪಿ ಹೈಕಮಾಂಡ್ ಇನ್ನೂ ಘೋಷಣೆ ಮಾಡಿಲ್ವಂತೆ! ಸೆಕ್ಸ್ ಸಿಡಿ ಬಳಿಕ ಸಂಕಟದಲ್ಲಿ ಸಾಲು ಸಾಲು ಸಚಿವರು: ಮಾನಹಾನಿ ವರದಿ ತಡೆಯುವಂತೆ… ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ ಡಾ. ಎಂ. ಮೋಹನ್ ಆಳ್ವರಿಗೆ ಕವಿ, ಸಜ್ಜನ ರಾಜಕಾರಣಿ ಬಿ.ಎಂ.ಇದಿನಬ್ಬ ಗೌರವ ಪ್ರಶಸ್ತಿ ಪ್ರದಾನ  ಶ್ಲಾಘ್ಯದಲ್ಲಿ 10ನೇ ತರಗತಿ ಸಿಬಿಎಸ್ ಇ ಗಣಿತ, ವಿಜ್ಞಾನ ಟ್ಯೂಶನ್ ತರಗತಿಗೆ ಪ್ರವೇಶ… ಮಂಗಳೂರಿನಲ್ಲಿ ಹಸುಗೂಸುಗಳ ಬೃಹತ್ ಮಾರಾಟ ಜಾಲ ಪತ್ತೆ: ಗಂಡು ಮಗುವಿಗೆ 6 ಲಕ್ಷ,… ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಪಾಲಿಕೆಗೆ ದೂರು ರವಾನೆಗೆ ಬರೋಬ್ಬರಿ 8…

ಇತ್ತೀಚಿನ ಸುದ್ದಿ

ರೈತರ ಹೋರಾಟವನ್ನು ಬೆಂಬಲಿಸಿ ಐಕ್ಯ ವೇದಿಕೆಯಿಂದ ಹೆದ್ದಾರಿ ತಡೆ ಚಳುವಳಿ

September 25, 2020, 4:55 PM

ಮಂಗಳೂರು(reporterkarnataka news):

ರೈತ ಕಾರ್ಮಿಕ ವಿರೋಧಿ ಸುಗ್ರೀವಾಜ್ಞೆಗಳ ವಾಪಸಾತಿ ಒತ್ತಾಯಿಸಿ ಹಾಗೂ ಸಂಸದರನ್ನು ಅಮಾನತುಗೊಳಿಸಿದ ನರೇಂದ್ರ ಮೋದಿ ಸರಕಾರದ ಫ್ಯಾಸಿಸ್ಟ್ ನಡೆಯನ್ನು ಖಂಡಿಸಿ ರೈತ ಕಾರ್ಮಿಕ ದಲಿತ ವಿಧ್ಯಾರ್ಥಿ ಯುವಜನ ಮಹಿಳಾ ಸಂಘಟನೆಗಳು ಹಾಗೂ ವಿವಿಧ ಜಾತ್ಯತೀತ ಪಕ್ಷಗಳ ಐಕ್ಯ ವೇದಿಕೆ ವತಿಯಿಂದ ನಗರದ ನಂತೂರು ಜಂಕ್ಷನ್ ಬಳಿಯಲ್ಲಿ ಬೃಹತ್ ಹೆದ್ದಾರಿ ತಡೆ ಚಳುವಳಿ ನಡೆಯಿತು.

ರೈತ ಕಾರ್ಮಿಕರ ವಿರೋಧಿಯಾದ ನರೇಂದ್ರ ಮೋದಿ ಸರಕಾರದ ವಿರುದ್ದ ಪ್ರತಿಭಟನಾಕಾರರು 

ಘೋಷಣೆ ಕೂಗಿದರು. ಬಳಿಕ ನಡೆದ ಪ್ರತಿಭಟನಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ, ಕರ್ನಾಟಕ ಪ್ರಾಂತ ರೈತ ಸಂಘದ ದ.ಕ.ಜಿಲ್ಲಾಧ್ಯಕ್ಷ ಕೃಷ್ಣಪ್ಪ ಸಾಲ್ಯಾನ್ , ಕೃಷಿ ಮತ್ತು ಮಾರಾಟಕ್ಕೆ ಸಂಬಂಧಿಸಿದ ಮೂರು ಸುಗ್ರೀವಾಜ್ಞೆಗಳು, ಆಹಾರಧಾನ್ಯಗಳು ಮತ್ತು ಇತರ ಕ್ರಷಿ ಸರಕುಗಳನ್ನು ಅವಶ್ಯಕ ಸರಕುಗಳ ಪಟ್ಟಿಯಿಂದ ತೆಗೆಯುತ್ತವೆ ಹಾಗೂ ದಾಸ್ತಾನು ಮಿತಿಗಳನ್ನು ಏರಿಸಿವೆ. ರಾಜ್ಯಗಳ ಎಪಿಎಂಸಿಗಳನ್ನು ಸರ್ವನಾಶಗೊಳಿಸುವ ಮೂಲಕ ಆಹಾರ ಭದ್ರತೆಯ ಶಕ್ತಿಯನ್ನೂ ಕೂಡ ಕುಂದಿಸುತ್ತದೆ ಎಂದು ಹೇಳಿದರು.

ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾ ನಾಯಕರಾದ ಓಸ್ವಾಲ್ಡ್ ಪ್ರಕಾಶ್ ಫೆರ್ನಾಂಡೀಸ್ ರವರು ಮಾತನಾಡಿ, ಆತ್ಮನಿರ್ಭರದ ಹೆಸರಿನಲ್ಲಿ ಮೋದಿ ಸರಕಾರವು ನವ ಉದಾರವಾದಿ ನೀತಿಗಳನ್ನು ಅನುಸರಿಸುವ ಮೂಲಕ ಕೃಷಿ ಕ್ಷೇತ್ರವನ್ನು ಸಂಪೂರ್ಣವಾಗಿ ಕಾರ್ಪೋರೇಟ್ ಕಂಪೆನಿಗಳಿಗೆ ಒಪ್ಪಿಸಲು ಸಜ್ಜಾಗಿದೆ ಎಂದು ನುಡಿದರು.

ದೇಶಾದ್ಯಂತ ನಡೆಯುತ್ತಿರುವ ರೈತರ ಹೋರಾಟವನ್ನು ಬೆಂಬಲಿಸಿ ಮಾಜಿ ಶಾಸಕರಾದ ಜೆ.ಆರ್.ಲೋಬೋ, ಡಿವೈಎಫ್ ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಸಿಪಿಐ ಜಿಲ್ಲಾ ನಾಯಕರಾದ ಬಿ.ಶೇಖರ್, ಯುವ ಕಾಂಗ್ರೆಸ್ ನ ಜಿಲ್ಲಾಧ್ಯಕ್ಷ ಮಿಥುನ್ ರೈ, ಜೆಡಿಎಸ್ ರಾಜ್ಯ ನಾಯಕರಾದ ಎಂ.ಬಿ.ಸದಾಶಿವ, ದಲಿತ ನಾಯಕರಾದ ಎಂ.ದೇವದಾಸ್, ಸಿಐಟಿಯು ಜಿಲ್ಲಾಧ್ಯಕ್ಷ.  ಜೆ. ಬಾಲಕೃಷ್ಣ ಶೆಟ್ಟಿ, ಸಾಮಾಜಿಕ ಹೋರಾಟಗಾರರಾದ ಪಿ.ವಿ.ಮೋಹನ್ ಮುಂತಾದವರು ಮಾತನಾಡಿದರು.

ಪ್ರತಿಭಟನೆಯಲ್ಲಿ ರೈತ ಸಂಘಟನೆಯ ನಾಯಕರಾದ ವಾಸುದೇವ ಉಚ್ಚಿಲ್, ರಾಮಣ್ಣ ವಿಟ್ಲ, ಪ್ರೇಮನಾಥ ಶೆಟ್ಟಿ, ಸುಧಾಕರ ಜೈನ್, ವಿವಿಯನ್ ಪಿಂಟೋ, ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರಾದ ಎಚ್. ವಿ. ರಾವ್, ಸೀತಾರಾಮ ಬೇರಿಂಜ, ಸುನಿಲ್ ಕುಮಾರ್ ಬಜಾಲ್, ಸುರೇಶ್ ಬಂಟ್ವಾಳ, ಪದ್ಮಾವತಿ ಶೆಟ್ಟಿ, ಬೊಂಡಾಲ ಚಿತ್ತರಂಜನ್ ಶೆಟ್ಟಿ, ಧೀರಜ್ ಪಾಲ್, ದಿನೇಶ್ ಕುಂಪಲ, ಜಗದೀಶ್, ಕಾಂಗ್ರೆಸ್ ಜಿಲ್ಲಾ ನಾಯಕರಾದ ಸದಾಶಿವ ಉಳ್ಳಾಲ, ಸಂತೋಷ್ ಕುಮಾರ್ ಶೆಟ್ಟಿ, ಮಹಮ್ಮದ್ ಸಲೀಂ, ಕಾರ್ಪೋರೇಟರ್ ಗಳಾದ ಪ್ರವೀಣ್ ಚಂದ್ರ ಆಳ್ವ, ಅನಿಲ್ ಕುಮಾರ್, ಎ.ಸಿ.ವಿನಯರಾಜ್, ನವೀನ್ ಡಿಸೋಜ, ಶಂಶುದ್ದೀನ್, ಅಶ್ರಫ್, ಜೆಡಿಎಸ್ ನಾಯಕರಾದ ದಿನಕರ ಉಳ್ಳಾಲ, ರವೀಂದ್ರನಾಥ ಶೆಟ್ಟಿ, ಸಿಪಿಐ ನಾಯಕರಾದ ವಿ.ಕುಕ್ಯಾನ್, ಮಹಿಳಾ ಸಂಘಟನೆಯ ನಾಯಕರಾದ ಜಯಂತಿ ಶೆಟ್ಟಿ, ಭಾರತಿ ಬೋಳಾರ, ಶಾಲೆಟ್ ಪಿಂಟೋ, ಭಾರತಿ ಪ್ರಶಾಂತ್, ಶೋಭಾ ಕೇಶವ್, ಶಶಿಕಲಾ ಸುರತ್ಕಲ್, ಅಪ್ಪಿ,ದಲಿತ ಸಂಘಟನೆಯ ಮುಖಂಡರಾದ ರಘು ಎಕ್ಕಾರ್, ತಿಮ್ಮಯ್ಯ ಕೊಂಚಾಡಿ, ಸಾಮಾಜಿಕ ಚಿಂತಕರಾದ ಪ್ರಮೀಳಾ ದೇವಾಡಿಗ, ರಾಜೇಂದ್ರ ಚಿಲಿಂಬಿ, ಯುವಜನ ನಾಯಕರಾದ ಬಿ.ಕೆ. ಇಮ್ತಿಯಾಜ್, ಸಂತೋಷ್ ಬಜಾಲ್, ಅಶ್ರಪ್ ಕೆ.ಸಿ.ರೋಡ್, ಸುನಿಲ್ ತೇವುಲ, ಜಗತ್, ಸುಧಾಕರ್ ಕಲ್ಲೂರು, ಹರ್ಷಿತ್ ಮುಂತಾದವರು ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು