9:03 AM Tuesday26 - January 2021
ಬ್ರೇಕಿಂಗ್ ನ್ಯೂಸ್
ಬಿಗ್ ಬಾಸ್ ಖ್ಯಾತಿಯ ನಟಿ ಜಯಶ್ರೀ ರಾಮಯ್ಯ ಆತ್ಮಹತ್ಯೆ: ಕುಟುಂಬದ ಸಮಸ್ಯೆ ಕಾರಣ? ಮಂಗಳೂರಿನ ನರ್ಸಿಂಗ್ ಕಾಲೇಜಿನ 4 ಮಂದಿ ವಿದ್ಯಾರ್ಥಿನಿಯರಿಗೆ ಕೊರೊನಾ: ಪಾಲಕರಲ್ಲಿ ಮತ್ತೆ ಭೀತಿ… ಗಣರಾಜ್ಯೋತ್ಸವ ಪರೇಡ್ ಗೆ ಆಯ್ಕೆಯಾದ ಕರ್ನಾಟಕದ ಟ್ಲಾಬ್ಲೊದಲ್ಲಿ ಕನ್ನಡ ಧ್ವಜ ನಾಪತ್ತೆ ಕಟೀಲು ಮೇಳ ಸೇವೆ ಆಟಗಳು:  ಇಂದು ಎಲ್ಲೆಲ್ಲಿ?  ನೀವೇ ನೋಡಿ ಬಡವರನ್ನು ಬೀದಿ ಪಾಲು ಮಾಡಿದರೆ ಜೋಕೆ: ಪಾಲಿಕೆಗೆ ಇಂಟಕ್ ರಾಷ್ಟ್ರೀಯ ಕಾರ್ಯದರ್ಶಿ ರಾಕೇಶ್… ವಿ.ವಿ ಕಾಲೇಜಿನಲ್ಲಿ ಪ್ರೌಢ ಶಾಲಾ ರಾಷ್ಟ್ರೀಯ ಸೇವಾಯೋಜನೆಯ ಯೋಜನಾಧಿಕಾರಿಗಳಿಗೆ ರಾಜ್ಯ ಮಟ್ಟದ ಕಾರ್ಯಾಗಾರ ಬಲ್ಯ ಸಮೀಪ ಕಾರು- ಬೊಲೆರೋ ಅಪಘಾತ:  ಒಬ್ಬ ಸಾವು, 4 ಮಂದಿ ತೀವ್ರ… ಕಾಸರಗೋಡು: ಮೆಡಿಕಲ್ ಶಾಪ್ ಗೆ ಔಷಧ ಖರೀದಿಸಲು ಬಂದ ವ್ಯಕ್ತಿಯನ್ನು ಗುಂಪೊಂದು ಥಳಿಸಿ… ಕಾಳು ಹಾಕಿ ಕೋಳಿ ಕದಿಯುವ ಭಿಕ್ಷುಕರಿದ್ದಾರೆ ಎಚ್ಚರಿಕೆ: ನಿಮ್ಮ ಮನೆಗೂ ಬಂದಾರು ಜೋಕೆ!… ವಿವಾದಾತ್ಮಕ ವಾಟ್ಸಾಪ್ ಚಾಟ್ : ಮಹಾರಾಷ್ಟ್ರ ಸರಕಾರದಿಂದ ಅರ್ನಾಬ್ ಮತ್ತೆ ಬಂಧನ ಸಾಧ್ಯತೆ

ಇತ್ತೀಚಿನ ಸುದ್ದಿ

ರಾತ್ರಿ ತಿರುಗುವುದು, ಮದ್ಯಪಾನ ಮಾಡುವುದು ಜೋಕೆ: ಹೊಸ ಪೊಲೀಸ್ ಕಮಿಷನರ್ ಬಂದಿದ್ದಾರೆ!

January 4, 2021, 12:51 PM

ಮಂಗಳೂರು(reporterkarnataka news): ಮಂಗಳೂರಿಗೆ ಬಂದ ದಿನದಿಂದಲೇ ನೂತನ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಪೊಲೀಸ್ ಇಲಾಖೆಯನ್ನು ಚುರುಕುಗೊಳಿದ್ದಾರೆ. ಕಮಿಷನರ್  ಆಗಿ ಚಾರ್ಜ್ ವಹಿಸಿಕೊಂಡ ದಿನದಿಂದಲೇ ರಾತ್ರಿ ವೇಳೆ ಕಡಲನಗರಿಯನ್ನು ಸುತ್ತಿ ಕಾನೂನು ಸುವ್ಯವಸ್ಥೆ ಕುರಿತು ಪರಿಶೀಲನೆ ನಡೆಸಲಾರಂಭಿಸಿದ್ದಾರೆ. ಕುಡಿದು ಅನಗತ್ಯವಾಗಿ ಸಿಟಿ ಸುತ್ತುವ ಮಂದಿಗೆ ಬಿಸಿ ಮುಟ್ಟಿಸಿದ್ದಾರೆ.

ಕಮಿಷನರ್ ಎರಡನೇ ದಿನದ ಕಾರ್ಯಾಚರಣೆಯಲ್ಲಿ ಒಂದು ಡಜನಿಗೂ ಅಧಿಕ ಮಂದಿ ಅಮಲುಕೋರರ ವಶಕ್ಕೆ ಪಡೆದುಕೊಂಡು ಕ್ಲಾಸ್ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಮೊದಲ ದಿನ ಅಂತ ಬಿಟ್ಟು ಬಿಡುತ್ತೇನೆ ಎಂಬ ಎಚ್ಚರಿಕೆ ಮಾತು ಹೇಳಿ ಮನೆಗೆ ಕಳುಹಿಸಿ ಕೊಟ್ಟಿದ್ದಾರೆ.

ಇನ್ನು ರಾತ್ರಿ ವೇಳೆ ಅಮಲುಕೋರರ ಬೇಟೆಗೆ ರಾತ್ರಿ ಕಾರ್ಯಾಚರಣೆ ನಡೆಯಲಿದೆ. ಮೊದಲಿಗೆ ಬರ್ಕೆ ಹಾಗೂ ಪಾಂಡೇಶ್ವರ ಠಾಣೆ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಯಲಿದೆ. ಇಬ್ಬರು ಡಿಸಿಪಿ ಸೇರಿದಂತೆ ತಂಡದಲ್ಲಿ 50 ಮಂದಿ ಪೊಲೀಸ್ ಸಿಬ್ಬಂದಿಗಳಿರುತ್ತಾರೆ. ಪೊಲೀಸ್ ಕಾರ್ಯಾಚರಣೆ ವೇಳೆ ಸಿಕ್ಕಿ ಬಿದ್ದವರ ಮೇಲೆ ಕೇಸು ದಾಖಲಿಸುವುದು ಕಾನೂನಿಗೆ ಗುರಿಪಡಿಸಲಾಗುತ್ತದೆ. ಮೈದಾನ, ಪಾರ್ಕ್, ಬಸ್ ನಿಲ್ದಾಣ, ಪಬ್ , ಹೋಟೆಲ್ ಎದುರುಗಡೆ  ಹಾಗೂ ಆಯಕಟ್ಟಿನ ಸ್ಥಳದಲ್ಲಿ ಕಾರ್ಯಾಚರಣೆ ನಡೆಸಲಾಗುವುದು.

ಇತ್ತೀಚಿನ ಸುದ್ದಿ

ಜಾಹೀರಾತು