2:41 PM Friday26 - February 2021
ಬ್ರೇಕಿಂಗ್ ನ್ಯೂಸ್
ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ನೋಡಿ ಎಸ್ಸೆಸ್ಸೆಲ್ಸಿ ಸ್ಟೇಟ್ ಸಿಲೆಬಸ್ ವಿದ್ಯಾರ್ಥಿಗಳಿಗೆ 3 ತಿಂಗಳ ಕ್ರ್ಯಾಶ್ ಕೋರ್ಸ್: ಶ್ಲಾಘ್ಯದಲ್ಲಿ ಅಡ್ಮಿಷನ್ ಆರಂಭ ಸಿದ್ದರಾಮಯ್ಯರಿಗೆ ತಲೆ ಸರಿ ಇಲ್ಲ, ವಕೀಲ ಅಂತ ಹೇಳಿಕೊಳ್ಳಲು ನಾಚಿಗೆಯಾಗಬೇಕು: ಈಶ್ವರಪ್ಪ ಅಡುಗೆ ಅನಿಲ ಸಿಲಿಂಡರ್ ಬೆಲೆ ಮತ್ತೆ ಹೆಚ್ಚಳ: ಒಂದೇ ತಿಂಗಳಲ್ಲಿ 3ನೇ ಬಾರಿ… ಇಂಧನ ಬೆಲೆಯೇರಿಕೆ, ಇ- ವೇ ಬಿಲ್ ಖಂಡಿಸಿ ನಾಳೆ ಭಾರತ ಬಂದ್ :… ಶ್ರೀನಿವಾಸಪುರ: ರಾಷ್ಟ್ರೀಯ ಶ್ರವಣ ದೋಷ ನಿಯಂತ್ರಣ ಮತ್ತು ನಿರ್ಮೂಲನೆ ಕಾರ್ಯಕ್ರಮ ರೋವರ್ ನಿಂದ ಮಂಗಳನ ಮಣ್ಣು ಹಾಗೂ ಕಲ್ಲಿನ  ಸ್ಯಾಂಪಲ್ ಸಂಗ್ರಹ: ಹಾಗಾದರೆ ಅದನ್ನು… ಕಟೀಲು ಮೇಳ ಸೇವೆ ಆಟಗಳು: ಎಲ್ಲಿ ಏನೇನು? ನೀವೇ ಓದಿ ನೋಡಿ ತಂಬಾಕು ಜಾಗೃತಿ ಮೂಡಿಸಲು ‘ಗುಲಾಬಿ ಅಭಿಯಾನ’:  ಬೆಳುವಾಯಿ ಶಾಲಾ ಮಕ್ಕಳಿಂದ ಜಾಥಾ ಪೇಜಾವರ ಶ್ರೀಗಳಿಗೆ ಗುರು ವಂದನೆ: ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ 1 ಕೋಟಿ…

ಇತ್ತೀಚಿನ ಸುದ್ದಿ

ರಸ್ತೆ ಅಪಘಾತಕ್ಕೆ ದೇಶದಲ್ಲಿ ವರ್ಷಕ್ಕೆ 1.5 ಲಕ್ಷ ಮಂದಿ ಸಾವು: ಕಡಲನಗರಿ ಮಂಗಳೂರಿನಲ್ಲೇ 100 ಬಲಿ !

November 15, 2020, 10:58 PM

ಮಂಗಳೂರು(reporterkarnataka news): ಅತ್ಯುತ್ತಮ ಪ್ರಾಮಾಣಿಕ ಬಸ್ ಚಾಲಕರ ಸೇವೆಯನ್ನು ಗುರುತಿಸಿ ಗೌರವ ಸಲ್ಲಿಸುವುದು ಮಾದರಿ ಕೆಲಸವಾಗಿದ್ದು, ಇದು ಇನ್ನಷ್ಟು ಯುವ ಚಾಲಕರಿಗೆ ಉತ್ತಮ ಸೇವೆ ನೀಡಲು ಪ್ರೇರಣೆ ನೀಡಿದಂತೆ ಎಂದು ಸಂತ ಅಲೋಶಿಯಸ್ ಕಾಲೇಜಿನ ಪ್ರಿನ್ಸಿಪಾಲ್ ಫಾದರ್ ಪ್ರವೀಣ್ ಮಾರ್ಟಿಸ್ ಹೇಳಿದರು.
ನಗರದ ಸಂತ ಅಲೋಶಿಯಸ್ ಕಾಲೇಜು ಸಭಾಂಗಣದಲ್ಲಿ ಭಾನುವಾರ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ದಕ ಜಿಲ್ಲಾ ಘಟಕ, ಸಂತ ಅಲೋಶಿಯಸ್ ಕಾಲೇಜು ಮತ್ತು ದ.ಕ. ಬಸ್ ಮಾಲೀಕರ ಸಂಘ ಹಾಗೂ ಕೆನರಾ ಬಸ್ ಮಾಲೀಕರ ಸಂಘದ ಸಹಯೋಗದಲ್ಲಿ ಖಾಸಗಿ ಬಸ್‍ನ ಅತ್ಯುತ್ತಮ ಹಿರಿಯ ಚಾಲಕರಿಗೆ ಗೌರವ ಬ್ಯಾಡ್ಜ್ ವಿತರಣೆ, ಅಪಘಾತ ಮತ್ತು ಕೊರೊನಾ ಜಾಗೃತಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮಂಗಳೂರಿನಲ್ಲಿ ಖಾಸಗಿ ಬಸ್ ಚಾಲಕರು ಬಹಳಷ್ಟು ಒತ್ತಡದ ನಡುವೆಯೂ ಉತ್ತಮ ಸೇವೆ ನೀಡುತ್ತಿದ್ದಾರೆ. ಅವರ ಸೇವೆಯಿಂದ ಮಾಲೀಕರಿಗೂ ಉತ್ತಮ ಹೆಸರು ಬಂದಿದೆ. ಮುಂದೆಯೂ ಚಾಲಕರು ಉತ್ತಮ ಸೇವೆ ನೀಡುವಂತಾಗಲಿ ಎಂದು ಅವರು ಹಾರೈಸಿದರು.
ಮಂಗಳೂರು ನಗರ ಪೊಲೀಸ್ ಟ್ರಾಫಿಕ್ ಉಪವಿಭಾಗದ ಎಸಿಪಿ ಎಂ.ಎ.ನಟರಾಜ್ ಮಾತನಾಡಿ, ಬೇರೆಲ್ಲಾ ಕ್ಷೇತ್ರದಲ್ಲಿ ಪ್ರತಿವರ್ಷ ಸಾಧಕರನ್ನು ಗುರುತಿಸಿ ಗೌರವಿಸಲಾಗುತ್ತದೆ. ಖಾಸಗಿ ಬಸ್ ಚಾಲಕರ ಜೀವಮಾನದಲ್ಲೇ ಪ್ರಥಮ ಬಾರಿ ಗುರುತಿಸಿದ್ದು, ಅದರಲ್ಲೂ ಅಪಘಾತವನ್ನೇ ಮಾಡದ ಚಾಲಕರು ಇದ್ದಾರೆ ಎಂಬುದು ಹೆಮ್ಮೆಯ ವಿಚಾರ ಎಂದರು.
ಕೆಟ್ಟ ರಸ್ತೆಗಳು, ಇನ್ನೊಬ್ಬರ ತಪ್ಪಿನಿಂದಲೂ ಅಪಘಾತಗಳು ಸಂಭವಿಸುತ್ತವೆ. ದೇಶದಲ್ಲಿ ಪ್ರತಿವರ್ಷ 1.5 ಲಕ್ಷ ಮಂದಿ ರಸ್ತೆ ಅಪಘಾತದಲ್ಲಿ ಸಾಯುತ್ತಿದ್ದರೆ, ಮಂಗಳೂರಿನಲ್ಲೇ 100 ಮಂದಿ ಮೃತಪಟ್ಟು, 800-1000 ಮಂದಿ ಗಾಯಗೊಳ್ಳುತ್ತಾರೆ. ಇದರಿಂದ ಅಷ್ಟು ಕುಟುಂಬಗಳು ನಲುಗಿ ಹೋಗುತ್ತವೆ. ಈ ಹಿನ್ನೆಲೆಯಲ್ಲಿ ಅಪಘಾತಗಳ ಪ್ರಮಾಣ ಕಡಿಮೆ ಮಾಡಲು ಸುಪ್ರೀಂ ಕೋರ್ಟ್ ಮಾರ್ಗಸೂಚಿ ನೀಡಿದ್ದು, ಈಗ ಅಪಘಾತ ನಡೆದ ಸ್ಥಳಕ್ಕೆ ಹಿರಿಯ ಅಕಾರಿಗಳು ಭೇಟಿ ನೀಡಿ, ರಸ್ತೆ ದುರಸ್ತಿ, ಸಂಚಾರ ಬದಲಾವಣೆಗೆ ನಿರ್ದೇಶನ ನೀಡುತ್ತಾರೆ. ಕಳೆದ ತಿಂಗಳು ತೊಕ್ಕೊಟ್ಟಿನಲ್ಲಿ ನವ ದಂಪತಿ ಮೃತಪಟ್ಟಿದ್ದ ಮರುದಿನ ಪೊಲೀಸ್ ಕಮೀಷನರ್ ತೆರಳಿ, ಸಂಚಾರ ಮಾರ್ಪಾಟು ಮಾಡಿದ್ದಾರೆ ಎಂದರು.
ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ದಕ ಜಿಲ್ಲಾ ಘಟಕದ ಚೇರ್ಮನ್ ಶಾಂತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಕೆನರಾ ಬಸ್ ಮಾಲೀಕರ ಸಂಘದ ಅಧ್ಯಕ್ಷ ಕೆ.ರಾಜವರ್ಮ ಬಲ್ಲಾಳ್ ಉಪಸ್ಥಿತರಿದ್ದರು.

ದಕ್ಷಿಣ ಕನ್ನಡ ಬಸ್ ಮಾಲೀಕರ ಸಂಘದ ಅಧ್ಯಕ್ಷ ದಿಲ್‍ರಾಜ್ ಆಳ್ವ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಪತ್ರಕರ್ತ ವಿಜಯ ಕೋಟ್ಯಾನ್ ಪಡು ಬಸ್ ಚಾಲಕರ ಪಟ್ಟಿ ವಾಚಿಸಿದರು. ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಪ್ರಚಾರ ಮತ್ತು ಸಾರ್ವಜನಿಕ ಸಂಪರ್ಕ ಸಮಿತಿ ಅಧ್ಯಕ್ಷ ಬಿ.ರವೀಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಗೌರವ ಕಾರ್ಯದರ್ಶಿ ಎಸ್.ಎ.ಪ್ರಭಾಕರ ಶರ್ಮಾ ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು