ಇತ್ತೀಚಿನ ಸುದ್ದಿ
ರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆ
September 25, 2020, 12:08 AM

ಮಂಗಳೂರು(reporterkarnataka news) ರಾಷ್ಟೀಯ ಸೇವಾ ಯೋಜನೆ ಮಂಗಳೂರು ವಿಶ್ವ ವಿದ್ಯಾನಿಲಯದ ವತಿಯಿಂದ ಯಿಂದ ರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಜರುಗಿತು. ರಾ.ಸೆ.ಯೋ ದಿನಾಚರಣೆ ಅಂಗವಾಗಿ ಕಾಲೇಜಿನ ಸ್ವಚ್ಛತಾ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿಗಳಿಗೆ ಸ್ಯಾನಿಟೈಸರ್, ಮಾಸ್ಕ್, ಹಣ್ಣು ಹಂಪಲು ಹಾಗೂ ಇಮ್ಯೂನಿಟಿ ಬೂಸ್ಟರ್ಗಳನ್ನು ವಿತರಿಸಲಾಯಿತು. ಸಸಿಗಳನ್ನು ಕಾಲೇಜಿನ ಹೂ ದೋಟ ದಲ್ಲಿ ನೆಡಲಾಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿಶ್ವ ವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲ ಡಾ. ಉದಯ ಕುಮಾರ್ ಎಂ.ಎ ಮಾತನಾಡಿ ಸ್ವಚ್ಛತೆ ಮತ್ತು ಅರೋಗ್ಯ ಜೀವನದಲ್ಲಿ ತುಂಬಾ ಮಹತ್ವ ವಾದದ್ದು.ಯಾವುದೇ ಕೆಲಸದಲ್ಲಿ ಮೇಲುಕೀಳು ಎಂಬುದ್ದಿಲ್ಲ. ಪ್ರತಿ ಕೆಲಸಕ್ಕೂ ಅದರದ್ದೇ ಆದ ಮಹತ್ವ ಇದೆ. ನಾವು ಅದನ್ನು ಪ್ರೀತಿಸಬೇಕು. ಈ ನಿಟ್ಟಿನಲ್ಲಿ ಇಂತಹ ಉತ್ತಮ ಕಾರ್ಯ ಕ್ರಮ ಅಭಿನಂದನೆಗೆ ಅರ್ಹವಾದದ್ದು. ಇಂತಹ ಕಾರ್ಯಗಳನ್ನು ಇತರರು ಮೈಗೂಡಿಸಿಕೊಳ್ಳಬೇಕು ಎಂದರು.

ಮುಖ್ಯ ಅತಿಯಾಗಿ ಆಗಮಿಸಿದ್ದ ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ. ರಾಮಕೃಷ್ಣ ಬಿ.ಎಂ ಮಾತನಾಡಿ ರಾ.ಸೆ.ಯೋ ಧ್ಯೇಯ ಸೇವಾ ಮನೋಭಾವನೆ ಅರಳಿಸುವಂತಹುದು. ವಿದ್ಯಾರ್ಥಿಗಳ ಜೀವನ ಮೌಲ್ಯಗಳನ್ನು ತಿಳಿಸುವ ಪರಿ ಅನನ್ಯ ಎಂದರು. ಎನ್. ಎಸ್ ಎಸ್ ಈ ಕಾರ್ಯ ಸಮಾಜಮುಖಿಯಾಗಿ ಬೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಮುಂದಿನ ದಿನಗಳಲ್ಲಿ ಇನ್ನಷ್ಟು ಅರ್ಥ ಪೂರ್ಣ ಕಾರ್ಯಕ್ರಮ ನಡೆಯಲಿ. ಕೋವಿಡ್ ಸಂದರ್ಭದಲ್ಲಿ ಸಂಯೋಜನಾಧಿಕಾರಿ ಡಾ. ನಾಗರತ್ನ ಮೇಡಂ ರವರು ಸಮಾಜಕ್ಕೆ ಧೈರ್ಯ ನೀಡುವ ಅನೇಕ ಆನ್ ಲೈನ್ ವೆಬಿನಾರ್ ಮೂಲಕ ಕೋವಿಡ್ ಬಗ್ಗೆ ಜಾಗೃತಿ ಮೂಡಲು ಶ್ರಮಿಸಿದ್ದಾರೆ. ಎಂದರು. ಈ ಇಂತಹ ಕಾರ್ಯಕ್ರಮ ಪ್ರಶಂಸನೀಯ ಎಂದರು.

ಇನ್ನೋರ್ವಅತಿಥಿ ಮಂಗಳೂರು ವಿಶ್ವ ವಿದ್ಯಾನಿಲಯದ ಯೂತ್ ರೆಡ್ ಕ್ರಾಸ್ ನ ನೋಡಲ್ ಆಫಿಸರ್ ಡಾ. ಗಣಪತಿ ಗೌಡ ಮಾತನಾಡಿ ರಾ.ಸೆ.ಯೋ ದಿನದ ಮಹತ್ವವನ್ನು ತಿಳಿಸಿದರು.ಹಾಗೂ ಸ್ವಾಮಿ ವಿವೇಕಾನಂದರ ತತ್ವಗಳು ಇಂದಿಗೂ ಪ್ರಸ್ತುತ ಎಂದರು.




ಈ ಕಾರ್ಯಕ್ರಮದಲ್ಲಿ ಈ ಕಾಲೇಜಿನಲ್ಲಿ ಈ ಹಿಂದೆ ರಾ.ಸೆ.ಯೋ ಯೋಜನಾಧಿಕಾರಿಗಳಾಗಿ ಸೇವೆ ಸಲ್ಲಿಸಿದ ಉಪನ್ಯಾಸಕರನ್ನು ಗೌರವಿಸಲಾಯಿತು.ವಿಶ್ವ ವಿದ್ಯಾನಿಲಯ ಕಾಲೇಜಿನ ರಾ.ಸೆ.ಯೋ ಯೋಜನಾಧಿಕಾರಿಗಳಾದ ಡಾ. ಗಾಯತ್ರಿ ವಂದಿಸಿ, ಡಾ.ಸುರೇಶ್ ನಿರೂಪಿಸಿದರು.
ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು.

ಮಂಗಳೂರು ವಿಶ್ವವಿದ್ಯಾನಿಲಯ ಸಂಯೋಜನಾಧಿಕಾರಿ ಡಾ. ನಾಗರತ್ನ ಕೆ.ಎ ಕಾರ್ಯಕ್ರಮದ ಆಯೋಜಕರಾಗಿದ್ದರು.