10:04 PM Friday26 - February 2021
ಬ್ರೇಕಿಂಗ್ ನ್ಯೂಸ್
ಪಂಚ ರಾಜ್ಯಗಳ ಎಲೆಕ್ಷನ್ ಘೋಷಣೆ: ಪಶ್ಚಿಮ ಬಂಗಾಳದಲ್ಲಿ 8 ಹಂತಗಳ ಚುನಾವಣೆ; ಮೇ… ಮಂಗಳೂರಿನಲ್ಲಿ ಫೆ. 28ರಂದು ಕರಾವಳಿ ಜಾನಪದ ಜಾತ್ರೆ: ಸಚಿವ ಲಿಂಬಾವಳಿ ಉದ್ಘಾಟನೆ ಪಂಚ ರಾಜ್ಯಗಳ ಚುನಾವಣೆ: ಇಂದು ಸಂಜೆ 4.30ಕ್ಕೆ ಘೋಷಣೆ: ಎಲ್ಲೆಲ್ಲಿ ಎಲೆಕ್ಷನ್ ನಡೆಯಲಿ?… ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ನೋಡಿ ಎಸ್ಸೆಸ್ಸೆಲ್ಸಿ ಸ್ಟೇಟ್ ಸಿಲೆಬಸ್ ವಿದ್ಯಾರ್ಥಿಗಳಿಗೆ 3 ತಿಂಗಳ ಕ್ರ್ಯಾಶ್ ಕೋರ್ಸ್: ಶ್ಲಾಘ್ಯದಲ್ಲಿ ಅಡ್ಮಿಷನ್ ಆರಂಭ ಸಿದ್ದರಾಮಯ್ಯರಿಗೆ ತಲೆ ಸರಿ ಇಲ್ಲ, ವಕೀಲ ಅಂತ ಹೇಳಿಕೊಳ್ಳಲು ನಾಚಿಗೆಯಾಗಬೇಕು: ಈಶ್ವರಪ್ಪ ಅಡುಗೆ ಅನಿಲ ಸಿಲಿಂಡರ್ ಬೆಲೆ ಮತ್ತೆ ಹೆಚ್ಚಳ: ಒಂದೇ ತಿಂಗಳಲ್ಲಿ 3ನೇ ಬಾರಿ… ಇಂಧನ ಬೆಲೆಯೇರಿಕೆ, ಇ- ವೇ ಬಿಲ್ ಖಂಡಿಸಿ ನಾಳೆ ಭಾರತ ಬಂದ್ :… ಶ್ರೀನಿವಾಸಪುರ: ರಾಷ್ಟ್ರೀಯ ಶ್ರವಣ ದೋಷ ನಿಯಂತ್ರಣ ಮತ್ತು ನಿರ್ಮೂಲನೆ ಕಾರ್ಯಕ್ರಮ ರೋವರ್ ನಿಂದ ಮಂಗಳನ ಮಣ್ಣು ಹಾಗೂ ಕಲ್ಲಿನ  ಸ್ಯಾಂಪಲ್ ಸಂಗ್ರಹ: ಹಾಗಾದರೆ ಅದನ್ನು…

ಇತ್ತೀಚಿನ ಸುದ್ದಿ

ರಾಷ್ಟ ನಿರ್ಮಾಣದಲ್ಲಿ ಯುವ ಜನತೆ ವಿಷಯ ಕುರಿತು ಆನ್ ಲೈನ್ ಕಾರ್ಯಾಗಾರ 

September 3, 2020, 5:13 AM

ಮಂಗಳೂರು(reporterkarnataka news):

ಮಂಗಳೂರು ವಿಶ್ವ ವಿದ್ಯಾನಿಲಯದ  ರಾಷ್ಟೀಯ ಸೇವಾ ಯೋಜನೆ ಮತ್ತು ರಾಷ್ಟ್ರೀಯ ಸೇವಾ ಯೋಜನಾ ಕೋಶ ಬೆಂಗಳೂರು ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಮ್ಮಿಕೊಂಡಿದ್ದ  ರಾಷ್ಟ್ರ ನಿರ್ಮಾಣದಲ್ಲಿ ಯುವ ಜನತೆ ಎನ್ನುವ ವಿಷಯದ ಕುರಿತು  ಆನ್ ಲೈನ್ ಕಾರ್ಯಾಗಾರ ಜರುಗಿತು. 

ಕಾರ್ಯಕ್ರಮವನ್ನು ಕೇಂದ್ರ ಸರಕಾರದ  ರಾಷ್ಟ್ರೀಯ ಸೇವಾ ಯೋಜನೆ ಪ್ರಾದೇಶಿಕ ನಿರ್ದೇಶಕ ಕೆ. ವಿ. ಖಾದ್ರಿ ನರಸಿಂಹಯ್ಯ ಉದ್ಘಾಟಿಸಿದರು. 

ಅವರು ಮಾತನಾಡಿ ಯುವ ಜನಾಂಗವನ್ನುರಚನಾತ್ಮಕವಾಗಿ ಬಳಸಿಕೊಂಡರೆ ದೇಶವನ್ನು ಉನ್ನತಿಯತ್ತ ಕೊಂಡೊಯ್ಯಲು ಸಾಧ್ಯ ಎಂದರು. 

ರಾ.ಸೆ.ಯೋ ರಾಜ್ಯ ಕೋಶ ಅಧಿಕಾರಿ ಡಾ. ಗಣನಾಥ ಎಕ್ಕಾರು ಮಾತನಾಡಿ ಯುವ ಜನರಿಗೆ ಮನಸ್ಸಿಗೆ ಆಳದ ಅರಿವನ್ನು ಮೂಡಿಸುವ ಕೆಲಸ ಅಗತ್ಯ ಎಂದರು. ರಾ.ಸೆ.ಯೋ. ಅನುಷ್ಠಾನ ಅಧಿಕಾರಿ ಡಾ. ಪೂರ್ಣಿಮಾ ಜೋಗಿ ದಿಕ್ಸೂಚಿ ಭಾಷಣ ಮಾಡಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ತುಮಕೂರು   ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ  ಶ್ರೀ ವೀರೇಶಾನಂದ ಸರಸ್ವತೀ ಸ್ವಾಮೀಜಿ   ಆಶಿರ್ವಾದಿಸಿದರು. ಉತ್ತಮ ಶಿಕ್ಷಣದಿಂದ ವ್ಯಕ್ತಿತ್ವದ ನಿರ್ಮಾಣ, ವ್ಯಕ್ತಿತ್ವದಿಂದ ಚಾರಿತ್ಯದ ನಿರ್ಮಾಣ, ಚಾರಿತ್ಯವಂತ  ವ್ಯಕ್ತಿಗಳು ರಾಷ್ಟ್ರದ ಸಂಪತ್ತು ಎಂದರು.

ಯೋಜನಾಧಿಕಾರಿ ಶ್ರೀನಾಥ್ ವಂದಿಸಿದರು. ಕೋವಿಡ್ 19 ನೋಡಲ್ ಅಧಿಕಾರಿ ದೇವಿ ಪ್ರಸಾದ್ ನಿರೂಪಿಸಿದರು. ಯೋಜನಾಧಿಕಾರಿ ಮತ್ತು ರಾ.ಸೆ.ಯೋ ಸ್ವಯಂ ಸೇವಕರು  ಉಪಸ್ಥಿತರಿದ್ದರು.

 ಮಂಗಳೂರು ವಿಶ್ವ ವಿದ್ಯಾನಿಲಯದ ರಾಷ್ಟ್ರೀಯ ಸೇವಾಯೋಜನೆಯ ಸಂಯೋಜನಾಧಿಕಾರಿ ಡಾ. ನಾಗರತ್ನ ಕೆ.ಎ ಕಾರ್ಯಕ್ರಮದ  ಆಯೋಜಕರಾಗಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು