ಇತ್ತೀಚಿನ ಸುದ್ದಿ
ರಾಷ್ಟ್ರಮಟ್ಟದ ಫೋಟೋಗ್ರಫಿ ಸ್ಪರ್ಧೆ: 13ರ ಹರೆಯದ ಪರಂ ಜೈನ್ ಗೆ ಅವಳಿ ಚಿನ್ನ
August 17, 2020, 12:44 PM

ಮಂಗಳೂರು(reporterkarnataka news): ಬೆಂಗಳೂರಿನ ಫೋಟೋಗ್ರಫಿ ಸೊಸೈಟಿ ನಡೆಸಿದ ರಾಷ್ಟ್ರ ಮಟ್ಟದ ಫೋಟೋಗ್ರಫಿ ಸ್ಪರ್ಧೆಯ ಯೂತ್ ವಿಭಾಗದಲ್ಲಿ ಪರಂ ಜೈನ್ ಚಿನ್ನದ ಪದಕ ಪಡೆದಿದ್ದಾನೆ.
ಮೂಡುಬಿದಿರೆ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 8ನೇ ತರಗತಿಯಲ್ಲಿ ಶಿಕ್ಷಣ ಪಡೆಯುತ್ತಿರುವ ಈತ ಜಿನೇಶ್ ಪ್ರಸಾದ್ ಹಾಗೂ ರಮ್ಯಾ ಬಳ್ಳಾಲ್ ಅವರ ಪುತ್ರ.

ಬೆಂಗಳೂರಿನ ಯೂತ್ ಫೋಟೋಗ್ರಫಿಕ್ ಸೊಸೈಟಿ ಪ್ರತಿ ವರ್ಷ ಅಖಿಲ ಭಾರತ ಮಟ್ಟದಲ್ಲಿ ಸ್ಪರ್ಧೆ ನಡೆಸುತ್ತಿದೆ. ಈ ಬಾರಿ ರಾಷ್ಟ್ರಮಟ್ಟದಲ್ಲಿ 308 ಸ್ಪರ್ಧಿಗಳು ಭಾಗವಹಿಸಿದ್ದರು. 3377ಕ್ಕೂ ಅಧಿಕ ಫೋಟೋಗಳು ಸ್ಪರ್ಧೆಗೆ ಬಂದಿದ್ದವು. 18 ವರ್ಷ ಕೆಳಗಿನ ಯುವ ವಿಭಾಗದಲ್ಲಿ ಪರಂ ಭಾಗವಹಿಸಿ ಎರಡು ಚಿನ್ನದ ಪದಕ ಗೆದ್ದುಕೊಂಡಿದ್ದಾನೆ.