ಇತ್ತೀಚಿನ ಸುದ್ದಿ
ಶಾಸಕ ರಾಮದಾಸ್ ಅಸ್ವಸ್ಥ: ಮೈಸೂರಿನಲ್ಲಿ ಆಸ್ಪತ್ರೆಗೆ ದಾಖಲು
October 19, 2020, 10:39 AM

ಮೈಸೂರು(reporterkarnataka news): ಬಿಜೆಪಿ ಶಾಸಕ ಎಸ್ ಎ ರಾಮದಾಸ್ ಅಸ್ವಸ್ಥರಾಗಿದ್ದಾರೆ. ಇಂದು ಮುಂಜಾನೆ ಉಸಿರಾಟದ ಸಮಸ್ಯೆಗೆ ರಾಮದಾಸ್ ಅವರು ತುತ್ತಾಗಿದ್ದಾರೆ. ರಾಮದಾಸ್ ಅವರನ್ನು ಮೈಸೂರಿನ ಜಯದೇವ ಆಸ್ಪತ್ರೆಗೆ ಇದೀಗ ಸೇರಿಸಲಾಗಿದೆ.
ರಾಮದಾಸ್ ಅವರು . ಮೈಸೂರಿನ ಕೆ. ಆರ್. ಕ್ಷೇತ್ರದ ಶಾಸಕರಾಗಿದ್ದಾರೆ. ಶಾಸಕರಿಗೆ ಕೋವಿಡ್ ಪರೀಕ್ಷೆಯನ್ನು ನಡೆಸಲು ತೀರ್ಮಾನಿಸಲಾಗಿದೆ.