ಇತ್ತೀಚಿನ ಸುದ್ದಿ
ಪ್ರಸಾದ್ ಅತ್ತಾವರ ನೇತೃತ್ವದ ರಾಮ್ ಸೇನಾ ಸಂಘಟನೆಯ ದಾವಣಗೆರೆ ಶಾಖೆಗೆ ಚಾಲನೆ
October 6, 2020, 9:15 AM

ದಾವಣಗೆರೆ(reporterkarnataka.com): ಪ್ರಸಾದ್ ಅತ್ತಾವರ್ ನೇತೃತ್ವದ ರಾಮ್ ಸೇನಾ ಸಂಘಟನೆಯ ರಾಜ್ಯಾದ್ಯಂತ ಹೆಚ್ಚಿನ ಜಿಲ್ಲೆಗಳಲ್ಲಿ ಈಗಾಗಲೇ ಪ್ರಾರಂಭಗೊಂಡಿದ್ದು ದಾವಣಗೆರೆ ಮಹಾನಗರ ಶಾಖೆಯ ಉದ್ಘಾಟನಾ ಸಮಾರಂಭ ಇತ್ತೀಚೆಗೆ ನಡೆಯಿತು.
ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಮ್ ಸೇನಾ ರಾಜ್ಯ ಕಾರ್ಯದರ್ಶಿ ಮಂಜುನಾಥ್ ಕುಂದರ್, ದಕ್ಷಿಣ ಕನ್ನಡ ಜಿಲ್ಲಾ ಗೌರವಧ್ಯಕ್ಷ ಎಂ.ಪಿ.ದಿನೇಶ್, ರಾಜ್ಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಶೆಟ್ಟಿ ಓದೂರು, ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮನೀಷ್ ಸಾಲ್ಯಾನ್, ಶಿವಮೊಗ್ಗ ಜಿಲ್ಲಾ ಅಧ್ಯಕ್ಷ ಉಮೇಶ್ ಗೌಡ ಹಾಗೂ ಮೂಡಬಿದ್ರೆಯ ತಾಲೂಕು ಅಧ್ಯಕ್ಷ ಅಶೋಕ್ ಆಳ್ವ ಸ್ಥಳೀಯ ಮುಖಂಡರಾದ ಎಸ್.ಟಿ ವಿರೇಶ್, ಸತೀಶ್ ಪೂಜಾರಿ, ನಾಗರಾಜ್ ಶೆಟ್ಟಿ ಡಿ.ಎ, ಉಪಸ್ಥಿತರಿದ್ದರು.


ದಾವಣಗೆರೆ ಮಹಾನಗರದ ಅಧ್ಯಕ್ಷರಾಗಿ ಲೋಹಿತ್ ಟಿ, ಉಪಾಧ್ಯಕ್ಷರಾಗಿ ನಾಗರಾಜ್ ವಿ,
ಪ್ರಧಾನ ಕಾರ್ಯದರ್ಶಿಯಾಗಿ ಮನುಷ್ಯ ಎಸ್, ಕಾರ್ಯದರ್ಶಿಯಾಗಿ
ರುದ್ರೇಶ್ ಪಾಟೀಲ್, ಜತೆ ಕಾರ್ಯದರ್ಶಿಗಳಾಗಿ
ಪುನೀತ್,ಕಾರ್ತಿಕ್, ಸಂ.ಕಾರ್ಯದರ್ಶಿಯಾಗಿ
ಮೋಹನ್ ಕುಮಾರ್, ಗೋ ರಕ್ಷಾ ಪ್ರಮುಖ್ ಆಗಿ
ವೆಂಕಟೇಶ್, ಸಾಮಾಜಿಕ ಜಾಲತಾಣ ಪ್ರಮುಖ್ ಆಗಿ
ಸಂತೋಷ್, ಶ್ರೀಧರ್, ವಿದ್ಯಾರ್ಥಿ ಪ್ರಮುಖ್ ಆಗಿ
ರಾಜು ನೇಮಕಗೊಂಡರು