12:14 AM Wednesday21 - October 2020
ಬ್ರೇಕಿಂಗ್ ನ್ಯೂಸ್

ಇತ್ತೀಚಿನ ಸುದ್ದಿ

ಬಿಜೆಪಿ ಶಾಸಕರ ಸಂಬಂಧಿಕರಿಂದ ಅಕ್ರಮ ಕೆಂಪು ಮಣ್ಣು ಗಣಿಗಾರಿಕೆ: ಮಾಜಿ ಸಚಿವ ರಮಾನಾಥ ರೈ ಆರೋಪ

October 17, 2020, 10:32 PM

ಮಂಗಳೂರು(reporterkarnataka news): ಬಿಜೆಪಿಯ ಹಾಲಿ ಶಾಸಕರೊಬ್ಬರ ಸಂಬಂಧಿಕರು ಜಿಲ್ಲೆಯಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ನಡೆಸುತ್ತಿದ್ದಾರೆ. ನಕಲಿ ಪರ್ಮಿಟ್ ತೋರಿಸಿ ಗಣಿಗಾರಿಕೆ ನಡೆಸಲಾಗುತ್ತಿದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಆರೋಪಿಸಿದರು.

ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಟ್ವಾಳ ತಾಲೂಕಿನ ಮುಡಿಪು ಗ್ರಾಮದಲ್ಲಿ ಹೇರಳವಾಗಿರುವ ರೆಡ್ ಪಾಕ್ಸೈಡ್ ಮಣ್ಣಿನ ಗಣಿಗಾರಿಕೆಯನ್ನು ಶಾಸಕರ ಸಂಬಂಧಿಕರು ನಡೆಸುತ್ತಿದ್ದಾರೆ. ಈ ಅಕ್ರಮ ಗಣಿಗಾರಿಕೆಯಿಂದ ರಾಜ್ಯ ಸರಕಾರದ ಖಜಾನೆಗೆ ಭಾರಿ ನಷ್ಟವಾಗುತ್ತಿದೆ. ಕಡಿಮೆ ಪರ್ಮಿಟ್ ನಲ್ಲಿ ಹೆಚ್ಚು ಮಣ್ಣಿನ ಗಣಿಗಾರಿಕೆ ನಡೆಯುತ್ತಿದೆ. ಭಾರಿ ಪ್ರಮಾಣದಲ್ಲಿ ಮಣ್ಣು ಸಾಗಾಟ ನಡೆಸಲಾಗುತ್ತಿದೆ ಎಂದರು.

ಅಕ್ರಮ ಮಣ್ಣು ಗಣಿಗಾರಿಕೆ ದಂಧೆಯಲ್ಲಿ ತಮಿಳುನಾಡು, ಕೇರಳ ಹಾಗೂ ಆಂಧ್ರದ ಜನರು ಕೂಡ ಶಾಮೀಲಾಗಿದ್ದಾರೆ. ಗಂಜಿ ಮಠದಲ್ಲಿ ಗಣಿಗಾರಿಕೆ ಪರವಾನಿಗೆ ಪಡೆದು ಬೇರೆ ಕಡೆ ಗಣಿಗಾರಿಕೆ ನಡೆಸುತ್ತಿದ್ದಾರೆ. ಹಿಂದಿನ ಎಸಿ ಮದನ್ ಕುಮಾರ್ ಅವರು ಈ ಪ್ರದೇಶಕ್ಕೆ ದಾಳಿ ಮಾಡಿದ ಹಿನ್ನೆಲೆಯಲ್ಲಿ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು