ಇತ್ತೀಚಿನ ಸುದ್ದಿ
ನಟಿ ರಾಕುಲ್ ಪ್ರೀತ್ ಸಿಂಗ್ ಎನ್ ಸಿ ಬಿ ವಿಚಾರಣೆಗೆ ಹಾಜರು: ಹೈದರಾಬಾದಿನಿಂದ ಆಗಮನ
September 25, 2020, 1:04 PM

ಮುಂಬೈ(reporterkarnataka news): ಮಾದಕ ದ್ರವ್ಯದ ಜಾಲದ ತನಿಖೆ ನಡೆಸುತ್ತಿರುವ ಎನ್ ಸಿ ಬಿ ಮುಂದೆ ನಟಿ ರಾಕುಲ್ ಪ್ರೀತ್ ಸಿಂಗ್ ಹಾಜರಾಗಿದ್ದಾರೆ. ಹೈದರಾಬಾದ್ ನಿಂದ ಅವರು ವಿಚಾರಣೆ ಎದುರಿಸಲು ಮುಂಬೈಗೆ ಆಗಮಿಸಿದ್ದಾರೆ. ನಟಿ ರಾಕುಲ್ ಪ್ರೀತ್ ಸಿಂಗ್ ಹೈದರಾಬಾದ್ ನಲ್ಲಿ ಸಿನೆಮಾ ಚಿತ್ರೀಕರಣದಲ್ಲಿ ನಿರತರಾಗಿದ್ದ ರು. ಅದನ್ನು ಮೊಟಕುಗೊಳಿಸಿ ಮುಂಬೈಗೆ ಆಗಮಿಸಿದ್ದಾರೆ.
ನಟಿ ದೀಪಿಕಾ ಪಡುಕೋಣೆ ಅವರ ಮ್ಯಾನೇಜರ್ ಕರಿಷ್ಮಾ ಪ್ರಕಾಶ್ ಅವರಿಗೂ ಎನ್ ಸಿ ಬಿ ನೋಟಿಸ್ ಜಾರಿ ಮಾಡಿದೆ. ಇಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.