ಇತ್ತೀಚಿನ ಸುದ್ದಿ
ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ ಅಂತ್ಯ: ಬಸ್ ಸಂಚಾರ ಮತ್ತೆ ಆರಂಭ
December 14, 2020, 6:07 PM

ಬೆಂಗಳೂರು(reporterkarnataka news): ಕಳೆದ ನಾಲ್ಕು ದಿನಗಳಿಂದ ರಾಜ್ಯದಲ್ಲಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಕೊನೆಗೊಂಡಿದೆ. ಫ್ರೀಡಂ ಪಾರ್ಕ್ ನಲ್ಲಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಮುಷ್ಕರ ಕೊನೆಗೊಳಿಸಿರುವುದಾಗಿ ಪ್ರಕಟಿಸಿದ್ದಾರೆ. ಇದರೊಂದಿಗೆ ಸಾರಿಗೆ ಸಂಚಾರ ಆರಂಭವಾಗಿದೆ.
ಇದಕ್ಕೂ ಮೊದಲು ಭಾನುವಾರ ನಡೆದ ಮಾತುಕತೆ ಸಂದರ್ಭದಲ್ಲಿ ರೈತರು ಸಮ್ಮತಿ ಸೂಚಿಸಿರುವ 9 ಅಂಶಗಳ ಬಗ್ಗೆ ಲಿಖಿತ ಭರವಸೆ ಪತ್ರವನ್ನು ರಾಜ್ಯ ಸರ್ಕಾರ ಇಂದು ಪ್ರತಿಭಟನಾರರಿಗೆ ಹಸ್ತಾಂತರಿಸಿತ್ತು.