ಇತ್ತೀಚಿನ ಸುದ್ದಿ
ರಾಜ್ಯದಾದ್ಯಂತ ಇಂದಿನಿಂದಲೇ ನೈಟ್ ಕರ್ಫ್ಯೂ ಜಾರಿ: ಸಿಎಂ ಯಡಿಯೂರಪ್ಪ ಘೋಷಣೆ
December 23, 2020, 2:38 PM

ಬೆಂಗಳೂರು(reporterkarnataka news);
ಬ್ರಿಟನ್ ನಲ್ಲಿ ಪತ್ತೆಯಾಗಿರುವ ಹೊಸ ಮಾದರಿಯ ಕೊರೊನಾ ವೈರಸ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಬುಧವಾರ ರಾತ್ರಿಯಿಂದಲೇ ರಾಜ್ಯಾದ್ಯಂತ ರಾತ್ರಿ ಕರ್ಫ್ಯೂ ವಿಧಿಸಲಾಗಿದೆ.
ಭಾರೀ ವೇಗದಲ್ಲಿ ಹಬ್ಬುವ ಹೊಸ ಮಾದರಿಯ ಕೊರೋನಾ ವೈರಸ್ ಬ್ರಿಟನ್ ನಲ್ಲಿ ಪತ್ತೆಯಾದ ಬಳಿಕ ಸಾವಿರಾರು ಮಂದಿ ಭಾರತಕ್ಕೆ ಆಗಮಿಸಿದ್ದು, ಅವರಿಂದ ಸಂಭಾವ್ಯ ಸೋಂಕು ಹರಡುವಿಕೆ ತಡೆಯುವ ಸಲುವಾಗಿ ಬುಧವಾರ ರಾತ್ರಿಯಿಂದಲೇ
ಜಾರಿ ಮಾಡಲಾಗಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬುಧವಾರ ಮಾಧ್ಯಮ ಜತೆ ಮಾತನಾಡಿ, ಕೊರೊನಾ ರೂಪಾಂತರ ವೈರಸ್ ಆತಂಕದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಇಂದು ರಾತ್ರಿಯಿಂದಲೇ ನೈಟ್ ಕರ್ಫ್ಯೂ ಜಾರಿಯಾಗಲಿದೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ನೈಟ್ ಕರ್ಫ್ಯೂ ಇರಲಿದೆ ಎಂದು ಘೋಷಿಸಿದ್ದಾರೆ.
ಇಂದಿನಿಂದ 9 ದಿನಗಳ ಕಾಲ ನೈಟ್ ಕರ್ಫ್ಯೂ ಇರಲಿದ್ದು, ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ಇರಲಿದೆ. ಜನವರಿ 2ರವರೆಗೂ ರಾತ್ರಿ ಕರ್ಫ್ಯೂ ಇರುವುದರಿಂದ ಹೊಸವರ್ಷದ ಮಧ್ಯರಾತ್ರಿ ಆಚರಣೆಗೆ ಸಹಜವಾಗಿಯೇ ಕಡಿವಾಣ ಇರಲಿದೆ.