8:30 PM Saturday23 - January 2021
ಬ್ರೇಕಿಂಗ್ ನ್ಯೂಸ್
ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ನೋಡಿ ಬೆಳಗಾವಿ ಲೋಕಸಭೆ ಉಪ ಚುನಾವಣೆ: ಬಿಜೆಪಿ ಟಿಕೆಟ್ ಗೆ ಪ್ರಮೋದ್ ಮುತಾಲಿಕ್ ಹಕ್ಕೊತ್ತಾಯ ಮಹಿಳಾ ಪೊಲೀಸ್ ಮೇಲೆ ಹಲ್ಲೆ ಆರೋಪ: ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ವಿರುದ್ಧ… ಕಾಳ ಸಂತೆಯಲ್ಲಿ ಆಹಾರ ದಾಸ್ತಾನು ಹೆಚ್ಚಾಗುವ ಭೀತಿಯಿದೆ: ಮಾಜಿ ಸಚಿವ ಯು.ಟಿ ಖಾದರ್ ಅರ್ನಾಬ್ ಗೋಸ್ವಾಮಿ ವಾಟ್ಸಾಪ್ ಚಾಟ್ ಬಗ್ಗೆ ಕೇಂದ್ರ ಯಾಕೆ ಮಾತನಾಡುತ್ತಿಲ್ಲ: ಸೋನಿಯಾ ಪ್ರಶ್ನೆ  ಒತ್ತಡ ರಾಜಕೀಯಕ್ಕೆ ಮಣಿದು ಖಾತೆ ಮರು ಹಂಚಿಕೆ  ಮಾಡಿದ ಮುಖ್ಯಮಂತ್ರಿ ಬಿಎಸ್ ವೈ ಶಿವಮೊಗ್ಗದಲ್ಲಿ ನಡೆದದ್ದು ಭೂ ಕಂಪನವಲ್ಲ, ರೈಲ್ವೆ ಕ್ರಷರ್ ಸ್ಫೋಟ: 10ಕ್ಕೂ ಅಧಿಕ ಸಾವು… ಸಾಲು ಮರದ ತಿಮ್ಮಕ್ಕ ವೃಕ್ಷೋದ್ಯಾನವನ ಇಂದು ಸುಬ್ರಹ್ಮಣ್ಯದಲ್ಲಿ ಉದ್ಘಾಟನೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಇಂದು ರಾಜ್ಯ ಧಾರ್ಮಿಕ ಪರಿಷತ್ ವಿಶೇಷ… ಶಿವಮೊಗ್ಗ, ಭದ್ರಾವತಿ, ಚಿಕ್ಕಮಗಳೂರಿನಲ್ಲಿ ಭೂ ಕಂಪನದ ಅನುಭವ: ಮನೆಯಿಂದ ಬೀದಿಗೆ ಓಡಿದ ಜನರು

ಇತ್ತೀಚಿನ ಸುದ್ದಿ

ರಾಜ್ಯದಲ್ಲಿರುವುದು ಹಿಂಬಾಗಿಲ ಮೂಲಕ ಆಡಳಿತಕ್ಕೆ ಬಂದ ಬಿಜೆಪಿ ಸರಕಾರ: ಮಾಜಿ ಸಚಿವ ರಮಾನಾಥ ರೈ ಕಿಡಿ

January 12, 2021, 12:26 PM

ಮಂಗಳೂರು(reporterkarnataka news): ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರ ಹಿಂಬಾಗಿಲ ಮೂಲಕ

ಬಂದ ಸರಕಾರ. ಆಪರೇಶನ್ ಕಮಲವನ್ನು ಇಡೀ ಜಗತ್ತಿಗೆ ಪರಿಚಯಿಸಿದ್ದಾರೆ. ಪಕ್ಷಾಂತರ ನಿಷೇಧ ಕಾನೂನನ್ನು ವಿಫಲಗೊಳಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.

ಮಂಗಳೂರು ಮಹಾನಗರ ಪಾಲಿಕೆಯ ಆಡಳಿತ ವೈಫಲ್ಯ, ದುರ್ಬಳಕೆ, ಸ್ಮಾರ್ಟ್ ಸಿಟಿ ಕಾಮಗಾರಿ ಸ್ಥಗಿತ ವಿರುದ್ಧ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪಾಲಿಕೆ ಕೇಂದ್ರ ಕಚೇರಿ ಎದುರು ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ನಮ್ಮ ನಗರಕ್ಕೆ ಸ್ಮಾರ್ಟ್ ಸೋಡಿಯನ್ನು ತಂದ ಕೀರ್ತಿ ಹಿಂದಿನ ಕಾಂಗ್ರೆಸ್ ಸರಕಾರಕ್ಕೆ ಸಲ್ಲುತ್ತದೆ. ಅಂದಿನ ಜನಪ್ರತಿನಿಧಿಗಳ ಶ್ರಮ ಇದರಲ್ಲಿ ಅಡಕವಾಗಿದೆ. ಆದರೆ ಇಂದು ಬಿಜೆಪಿ ಆಡಳಿತ ಸ್ಮಾರ್ಟ್ ಸಿಟಿ ಕಾಮಗಾರಿಯನ್ನೇ ಸ್ಥಗಿತಗೊಳಿಸಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಮಾಜಿ ಶಾಸಕ ಜೆ. ಆರ್. ಲೋಬೊ, ಮಾಜಿ ಮೇಯರ್ ಶಶಿಧರ ಹೆಗ್ಡೆ ಮುಂತಾದವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು