8:35 AM Wednesday27 - January 2021
ಬ್ರೇಕಿಂಗ್ ನ್ಯೂಸ್
ರೇಡಿಯೋ ಸಾರಂಗ್ ಮತ್ತು ಎನ್.ಎಸ್.ಎಸ್. ವಿದ್ಯಾರ್ಥಿಗಳಿಂದ ಬೆಂಗ್ರೆ ಬೀಚ್ ಸ್ವಚ್ಛತೆ ಜಾನಪದ ಕ್ರೀಡೆ ಕಂಬಳ ಜನವರಿ ಅಂತ್ಯದಿಂದ ಪ್ರಾರಂಭ: ಸಂಸದ ನಳಿನ್ ಕುಮಾರ್ ಕಟೀಲ್ ಎಸ್‌ಡಿಪಿಐ ವತಿಯಿಂದ ಗಣರಾಜ್ಯೋತ್ಸವ ಪ್ರಯುಕ್ತ ರೈತ ಐಕ್ಯತಾ ಸಂಗಮ ಬಿಗ್ ಬಾಸ್ ಖ್ಯಾತಿಯ ನಟಿ ಜಯಶ್ರೀ ರಾಮಯ್ಯ ಆತ್ಮಹತ್ಯೆ: ಕುಟುಂಬದ ಸಮಸ್ಯೆ ಕಾರಣ? ಮಂಗಳೂರಿನ ನರ್ಸಿಂಗ್ ಕಾಲೇಜಿನ 4 ಮಂದಿ ವಿದ್ಯಾರ್ಥಿನಿಯರಿಗೆ ಕೊರೊನಾ: ಪಾಲಕರಲ್ಲಿ ಮತ್ತೆ ಭೀತಿ… ಗಣರಾಜ್ಯೋತ್ಸವ ಪರೇಡ್ ಗೆ ಆಯ್ಕೆಯಾದ ಕರ್ನಾಟಕದ ಟ್ಲಾಬ್ಲೊದಲ್ಲಿ ಕನ್ನಡ ಧ್ವಜ ನಾಪತ್ತೆ ಕಟೀಲು ಮೇಳ ಸೇವೆ ಆಟಗಳು:  ಇಂದು ಎಲ್ಲೆಲ್ಲಿ?  ನೀವೇ ನೋಡಿ ಬಡವರನ್ನು ಬೀದಿ ಪಾಲು ಮಾಡಿದರೆ ಜೋಕೆ: ಪಾಲಿಕೆಗೆ ಇಂಟಕ್ ರಾಷ್ಟ್ರೀಯ ಕಾರ್ಯದರ್ಶಿ ರಾಕೇಶ್… ವಿ.ವಿ ಕಾಲೇಜಿನಲ್ಲಿ ಪ್ರೌಢ ಶಾಲಾ ರಾಷ್ಟ್ರೀಯ ಸೇವಾಯೋಜನೆಯ ಯೋಜನಾಧಿಕಾರಿಗಳಿಗೆ ರಾಜ್ಯ ಮಟ್ಟದ ಕಾರ್ಯಾಗಾರ ಬಲ್ಯ ಸಮೀಪ ಕಾರು- ಬೊಲೆರೋ ಅಪಘಾತ:  ಒಬ್ಬ ಸಾವು, 4 ಮಂದಿ ತೀವ್ರ…

ಇತ್ತೀಚಿನ ಸುದ್ದಿ

ಕೊರೊನಾ 2ನೇ ಅಲೆ: ರಾಜ್ಯದಲ್ಲಿ ಕ್ರಿಸ್ಮಸ್, ಹೊಸ ವರ್ಷಾಚರಣೆಗೆ ನಿರ್ಬಂಧ ? ರಾತ್ರಿ ಕರ್ಫ್ಯೂ? 

December 3, 2020, 12:19 PM

ಬೆಂಗಳೂರು(reporterkarnataka news):

ರಾಜ್ಯದಲ್ಲಿ ಮುಂದಿನ ಜನವರಿ ಮತ್ತು ಫೆಬ್ರವರಿ ತಿಂಗಳಿನಲ್ಲಿ ಕೊರೊನಾ ಎರಡನೇ ಅಲೆ ಹರಡುವ ಸಾಧ್ಯತೆ ಇರುವುದರಿಂದ ರಾಜಧಾನಿ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಕ್ರಿಸ್ಮಸ್ ಹಾಗೂ ಹೊಸ ವರ್ಷ ಆಚರಣೆಗೆ ನಿರ್ಬಂಧ ಹೇರುವ ಕುರಿತು ಸರಕಾರ ಚಿಂತನೆ ನಡೆಸಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಕೋವಿಡ್-19 ಸೋಂಕು ಹೆಚ್ಚಾಗಿರುವ ಜಿಲ್ಲೆಗಳಲ್ಲಿ ರಾತ್ರಿ ಕಫ್ರ್ಯೂ ಜಾರಿಗೆ ಕ್ರಮ, ಕ್ರಿಸ್‍ಮಸ್ ಹಾಗೂ ಹೊಸ ವರ್ಷಾಚರಣೆಗೆ ನಿರ್ಬಂಧ ಹಾಕಬೇಕೆಂದು ತಜ್ಞರ ಸಲಹಾ ಸಮಿತಿ ಈಗಾಗಲೇ ಸರಕಾರಕ್ಕೆ

 ಶಿಫಾರಸು ಮಾಡಿದೆ.

ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಮುಖ್ಯಸ್ಥ ಡಾ.ಸುದರ್ಶನ್ ನೇತೃತ್ವದ ಸಮಿತಿಯು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ 8 ಪುಟ ಹಾಗೂ 14 ಅಂಶಗಳನ್ನೊಳಗೊಂಡ ವರದಿ ನೀಡಿದೆ. ಈ ವರದಿಯಲ್ಲಿ ಪ್ರಮುಖವಾಗಿ ಜನವರಿ ಮತ್ತು ಫೆಬ್ರವರಿ ತಿಂಗಳಿನಲ್ಲಿ ಕೋವಿಡ್ 2ನೇ ಅಲೆ ಹರಡುವ ಸಾಧ್ಯತೆ ಇರುವುದರಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಕುರಿತು ಸರಕಾರಕ್ಕೆ ಸಲಹೆ ಮಾಡಿದೆ. ಡಿಸೆಂಬರ್ 26 ರಿಂದ ಜನವರಿ 1ರ ವರೆಗೆ ರಾತ್ರಿ 8 ಗಂಟೆಯಿಂದ ಮುಂಜಾನೆ 5 ಗಂಟೆವರೆಗೆ ರಾತ್ರಿ ಕಫ್ರ್ಯೂ ವಿಧಿಸುವಂತೆ ವರದಿಯಲ್ಲಿ

ಶಿಫಾರಸು ಮಾಡಿದೆ.

ಬೆಂಗಳೂರು, ದಕ್ಷಿಣ ಕನ್ನಡ ಮುಂತಾದ ಕಡೆಗಳಲ್ಲಿ ಕೋವಿಡ್ ಸೋಂಕು ಇನ್ನೂ ಸಹಜ ಸ್ಥಿತಿಗೆ ಬಾರದೆ ಇರುವ ಕಾರಣ ರಾತ್ರಿ ಕಫ್ರ್ಯೂ ವಿಧಿಸಬೇಕಾದ ಅನಿವಾರ್ಯತೆ ಇದೆ. ಹೊಸ ವರ್ಷಾಚರಣೆ ಸಂದರ್ಭದಲ್ಲಿ ಜನಸಂದಣಿ ಹೆಚ್ಚಾಗುವ ಸಾಧ್ಯತೆ ಇದ್ದು, ಇದರಿಂದ ಕೊರೊನಾ ಸೋಂಕು ಒಬ್ಬರಿಂದ ಒಬ್ಬರಿಗೆ ಹೆಚ್ಚಾಗಿ ಹರಡುತ್ತದೆ. ಹೀಗಾಗಿ ಸರಕಾರ

ಬಿಗಿಯಾದ ಕ್ರಮವನ್ನೇ ತೆಗೆದುಕೊಳ್ಳಬೇಕೆಂದು ಸಮಿತಿ ಸಲಹೆ ಮಾಡಿದೆ.

ಜನವರಿ ಹಾಗೂ ಫೆಬ್ರವರಿ ತಿಂಗಳಲ್ಲಿ ರಾಜ್ಯಾದ್ಯಂತ ಧಾರ್ಮಿಕ ಉತ್ಸವಗಳು, ಜಾತ್ರೆ, ಹಬ್ಬ-ಹರಿದಿನಗಳು ಬರುತ್ತವೆ. ಇದೇ ಡಿಸೆಂಬರ್ 25ರಂದು ಕ್ರಿಸ್‍ಮಸ್ ಇರುವುದರಿಂದ ಹೆಚ್ಚು ಜನಸಂದಣಿ ಸೇರುವ ಸಾಧ್ಯತೆ ಇರುತ್ತದೆ. ಹಾಗಾಗಿ ಇಂತಹ ಎಲ್ಲ ಧಾರ್ಮಿಕ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಬೇಕೆಂದು ಸಮಿತಿ ಶಿಫಾರಸು ಮಾಡಿದೆ.  ಮುಚ್ಚಲ್ಪಟ್ಟಿರುವ ಶಾಲಾ-ಕಾಲೇಜುಗಳನ್ನು ಪಾಳಿ ಸರದಿಯಲ್ಲಿ ಆರಂಭಿಸಬೇಕು. ಯಾವುದೇ ಮುಂಜಾಗ್ರತೆ ಇಲ್ಲದೆ ಆತುರವಾಗಿ ಸರ್ಕಾರ ಕ್ರಮ ಕೈಗೊಳ್ಳಬಾರದು. ಈಗ ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರ ತೆಗೆದುಕೊಂಡಿರುವ ಮುಂಜಾಗ್ರತಾ ಕ್ರಮಗಳನ್ನು ಮುಂದುವರಿಸಬೇಕು ಎಂದು ಸಲಹಾ ಸಮಿತಿ ಸಲಹೆ ಮಾಡಿದೆ.

ಇತ್ತೀಚಿನ ಸುದ್ದಿ

ಜಾಹೀರಾತು