ಇತ್ತೀಚಿನ ಸುದ್ದಿ
ರಾಜ್ಯದ ಮಾದಕ ದ್ರವ್ಯ ಜಾಲಕ್ಕೆ ಭೂಗತ ಲೋಕದ ನಂಟು
September 11, 2020, 3:38 AM

ಬೆಂಗಳೂರು(reporterkarnataka news): ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಮಾದಕ ದ್ರವ್ಯ ಜಾಲದ ತನಿಖೆ ನಿರ್ಣಾಯಕ ಹಂತ ತಲುಪಿದೆ. ಇದರೊಂದಿಗೆ ಸ್ಫೋಟಕ ಮಾಹಿತಿ ಕೂಡ ಹೊರಬಿದ್ದಿದೆ. ಇದೀಗ ಬಂಧನದಲ್ಲಿರುವ ಕೆಲವು ಆರೋಪಿಗಳು ಮುಂಬೈನ ಪಾತಕ ಲೋಕದ ಸದಸ್ಯರ ಜತೆ ಸಂಪರ್ಕ ಹೊಂದಿರುವ ಮಾಹಿತಿ
ಇದೆ. ಇದು ತನಿಖಾಧಿಕಾರಿಗಳನ್ನು ಬೆರಗುಗೊಳಿಸಿದೆ ಎಂದು ವರದಿಯಾಗಿದೆ.
ಮುಂಬೈ ಪಾತಕ ಲೋಕದ ಸೂಚನೆಯಂತೆ ಒಬ್ಬ ನಿರ್ದಿಷ್ಟ ವ್ಯಕ್ತಿಯಿಂದ ಮಾತ್ರ ಆರೋಪಿಗಳು ಮಾದಕ ದ್ರವ್ಯ ಖರೀದಿಸುತ್ತಿದ್ದರು ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಇದು ಪ್ರಕರಣದ ತನಿಖೆಯನ್ನು ಇನ್ನಷ್ಟು ಸಂಕೀರ್ಣಗೊಳಿಸಿದೆ. ಇದೇ ವೇಳೆ ತನಿಖೆಯ ಯಾವುದೇ ಮಾಹಿತಿ ಸೋರಿಕೆಯಾಗದಂತೆ ಕೂಡ ಸಿಸಿಬಿ ಮುನ್ನೆಚ್ಚರಿಕೆ ವಹಿಸಿದೆ.