ಇತ್ತೀಚಿನ ಸುದ್ದಿ
ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕ ಚುನಾವಣೆ: ಶೇ.96 ಮತದಾನ
December 15, 2020, 7:03 PM

ಶ್ರೀನಿವಾಸಪುರ(reporterkarnataka news): ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಶೇ.96 ರಷ್ಟು ಮತದಾನವಾಗಿದೆ.
ಮತದಾರರ ಒಟ್ಟು ಸಂಖ್ಯೆ 811 ಆಗಿದ್ದು, 775 ಮತಗಳು ಚಲಾವಣೆಯಾಗಿವೆ. ಆ ಪೈಕಿ 439 ಪುರುಷರು ಹಾಗೂ 336 ಮಹಿಳೆಯರು ಮತ ಚಲಾಯಿಸಿದ್ದಾರೆ. 12 ಪುರುಷರು ಹಾಗೂ 5 ಮಹಿಳೆಯರು ಚುನಾವಣೆಯಲ್ಲಿ ಸ್ಪರ್ಧಿಸಿದ್ದರು ಎಂದು ಮತಗಟ್ಟೆ ಅಧಿಕಾರಿ ಮುರಳಿ ಬಾಬು ತಿಳಿಸಿದರು.
ಬೆಳಿಗ್ಗೆ ನಿಧಾನ ಗತಿಯಲ್ಲಿ ನಡೆದ ಮತದಾನ, ಮಧ್ಯಾಹ್ನದ ಹೊತ್ತಿಗೆ ಚುರುಕು ಪಡೆದುಕೊಂಡಿತು. ಪ್ರಾಥಮಿಕ ಶಾಲಾ ಶಿಕ್ಷಕರು ಹಾಗೂ ಶಿಕ್ಷಕಿಯರು ಮತಗಟ್ಟೆಯ ಮುಂದೆ ಪ್ರತ್ಯೇಕ ಸಾಲುಗಳಲ್ಲಿ ನಿಂತು ಮತದಾನ ಮಾಡಿದರು.