ಇತ್ತೀಚಿನ ಸುದ್ದಿ
ರಾಜಸ್ಥಾನ ಸ್ಥಳೀಯ ನಗರ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ
December 14, 2020, 9:15 PM

ಜೈಪುರ್ (reporterkarnataka news):
ರಾಜಸ್ಥಾನದಲ್ಲಿ ಸ್ಥಳೀಯ ನಗರ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅತ್ಯಧಿಕ ಸ್ಥಾನಗಳನ್ನು ಗೆಲ್ಲುವ ಮೂಲಕ ಮುನ್ನಡೆ ಸಾಧಿಸಿದೆ.
ಡಿಸೆಂಬರ್ 13 ರಂದು ನಡೆದ ಸ್ಥಳೀಯ ಸಂಸ್ಥೆ (ಯುಎಲ್ಬಿ) ಚುನಾವಣೆಯಲ್ಲಿ 619 ವಾರ್ಡ್ಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ.
ಫಲಿತಾಂಶದ ಪ್ರಕಾರ 12 ಜಿಲ್ಲೆಗಳ 50 ಸ್ಥಳೀಯ ನಗರ ಸಂಸ್ಥೆಯ 1,775 ವಾರ್ಡ್ಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 619 ವಾರ್ಡ್ಗಳಲ್ಲಿ ಮತ್ತು ಬಿಜೆಪಿ 548 ವಾರ್ಡ್ಗಳಲ್ಲಿ ಜಯ ಗಳಿಸಿದೆ.
ಇನ್ನು 596 ವಾರ್ಡ್ಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಜಯಗಳಿಸಿದ್ದು, ಬಹುಜನ್ ಸಮಾಜ ಪಕ್ಷದ ಸದಸ್ಯರು 7 ವಾರ್ಡ್ಗಳಲ್ಲಿ ಗೆಲುವು ಸಾಧಿಸಿರುವುದಾಗಿ ವರದಿ ತಿಳಿಸಿದೆ.