ಇತ್ತೀಚಿನ ಸುದ್ದಿ
ಖ್ಯಾತ ನಟ ರಜನಿಕಾಂತ್ ರಾಜಕೀಯ ಪ್ರವೇಶಕ್ಕೆ ಅಭಿಮಾನಿಗಳ ಆಗ್ರಹ
October 27, 2020, 8:04 AM

ಚೆನ್ನೈ(reporterkarnataka news): ಖ್ಯಾತ ನಟ ರಜನಿಕಾಂತ್ ಶೀಘ್ರ ರಾಜಕೀಯ ಪಕ್ಷ ಘೋಷಿಸಬೇಕು. ಇನ್ನು ಕಾಯಲು ಸಾಧ್ಯವಿಲ್ಲ ಎಂದು ಅವರ ಅಭಿಮಾನಿಗಳು ಘೋಷಿಸಿದ್ದಾರೆ. ಈ ಸಂಬಂಧ ಚೆನ್ನೈ ಸೇರಿದಂತೆ ಹಲವೆಡೆ ಪೋಸ್ಟ್ ರ್ ಗಳನ್ನು ಅಂಟಿಸಲಾಗಿದೆ.
ತಮಿಳುನಾಡು ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಈ ಬೇಡಿಕೆ ಮಹತ್ವ ಪಡೆದುಕೊಂಡಿದೆ. ರಜನಿಕಾಂತ್ ರಾಜಕೀಯ ಪಕ್ಷ ಘೋಷಣೆ ಮಾಡಿದರೆ ಅದು ಇಡೀ ಚಿತ್ರಣ ಬದಲಾಯಿಸುವ ಸಾಧ್ಯತೆಯಿದೆ.