4:22 PM Friday4 - December 2020
ಬ್ರೇಕಿಂಗ್ ನ್ಯೂಸ್
ದೇಶದ ಜನರಿಗೆ ಶೀಘ್ರವೇ ಕೊರೊನಾ ಲಸಿಕೆ ಸಿದ್ಧ:  ಸರ್ವಪಕ್ಷಗಳ ಸಭೆಯಲ್ಲಿ ಪ್ರಧಾನಿ ಮೋದಿ… ಕನಕ ದಾಸರ ಸಂದೇಶ ಸಮಾಜದ ಕಣ್ಣು ತೆರೆಸುವಂತಿದೆ: ತಹಶೀಲ್ದಾರ್‌ ಎಸ್‌.ಎಂ.ಶ್ರೀನಿವಾಸ್‌ ಅನಾಥ ಮಕ್ಕಳ್ಳನ್ನು ಸ್ವಂತ ಮಕ್ಕಳಂತೆ ಕಾಣುವ ಮೂಲಕ ಉತ್ತಮ ಭವಿಷ್ಯ ರೂಪಿಸಿ: ಡಾ.ಶಾಂತ ಜಾತಿಯ ಹೆಸರಲ್ಲಿ ನಡೆಯುವ ಶೋಷಣೆ ಸಮಾಜ ಹಿತಕ್ಕೆ ಮಾರಕ: ಕುರುಬರ ಅಧ್ಯಕ್ಷ ಎಂ.ವೇಮಣ್ಣ  ಹಿಂಸಾಚಾರ: ಶಿವಮೊಗ್ಗದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿ, ಬಿಗಿ ಬಂದೋಬಸ್ತ್  ಮಾರಕ ಕೊರೊನಾಕ್ಕೆ ಒಂದೇ ದಿನ 540 ಮಂದಿ ಬಲಿ: 42, 916 ಮಂದಿ… ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ: 30 ವಾರ್ಡ್ ಗಳಲ್ಲಿ ಬಿಜೆಪಿ ಮುನ್ನಡೆ ದುರ್ಬಲವಾಗುತ್ತಿರುವ ಬುರೆವಿ ಚಂಡಮಾರುತ: ನಿಟ್ಟುಸಿರು ಬಿಟ್ಟ ಕೇರಳದ ಜನತೆ ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣ: ಇಂದು ಪ್ರಧಾನಿ ಸರ್ವ ಪಕ್ಷ ಸಭೆ ಪ್ರತಿಷ್ಠಿತ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ: ಬಿಗಿ ಭದ್ರತೆಯಲ್ಲಿ ಇಂದು ಮತ ಎಣಿಕೆ

ಇತ್ತೀಚಿನ ಸುದ್ದಿ

ಮತ್ತೆ ನಾಗೇಂದ್ರರನ್ನು ಕೂಡಿಕೊಂಡ ರಾಜನ್ !

October 12, 2020, 7:53 AM

(Reporter Karnataka News) ಬೆಂಗಳೂರು

ಕನ್ನಡ, ತೆಲುಗು ಸೇರಿದಂತೆ ವಿವಿಧ ಭಾಷೆಗಳ ಚಲನಚಿತ್ರಲೋಕದ ಖ್ಯಾತ ಸಂಗೀತ ನಿರ್ದೇಶಕ ರಾಜನ್ (87) ಭಾನುವಾರ ರಾತ್ರಿ ನಿಧನರಾಗಿದ್ದಾರೆ.

ಕನ್ನಡ ಚಿತ್ರರಂಗದ 200 ಕ್ಕೂ ಹೆಚ್ಚು ಸಿನಿಮಾಗಳು ಸೇರಿದಂತೆ ತಮಿಳು, ತೆಲುಗು, ಮಲಯಾಳಂ, ಹಿಂದಿ, ತುಳು ಹಾಗೂ ಶ್ರೀಲಂಕಾದ ಸಿಂಹಳ ಭಾಷೆ ಸೇರಿ ಒಟ್ಟು 375 ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದರು.

ಲಕ್ಷ್ಮೀ ಎಂಬ ಸಿನಿಮಾಕ್ಕೆ ಸಂಗೀತ ನಿರ್ದೇಶನ ಮಾಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ರಾಜನ್ ಪಾದರ್ಪಣೆ ಮಾಡಿದರು. ಗಂಧದ ಗುಡಿ ಸಿನಿಮಾ ಹೆಚ್ಚು ಜನಪ್ರಿಯತೆ ತಂದುಕೊಟ್ಟಿತು.
ಮೈಸೂರಿನ ಶಿವರಾಂಪೇಟೆಯ ಮಧ್ಯಮ ವರ್ಗದ ಸಂಗೀತ ಕುಟುಂಬದಲ್ಲಿ ರಾಜನ್ ಮತ್ತು ನಾಗೇಂದ್ರ ಜನಿಸಿದರು. ಅವರ ತಂದೆ ರಾಜಪ್ಪ ಹಾರ್ಮೋನಿಯಂ ಮತ್ತು ಕೊಳಲು ವಾದಕರಾಗಿದ್ದರು. ಮೂಕ ಚಲನಚಿತ್ರಗಳಿಗೆ ಅವರು ಹಿನ್ನೆಲೆ ಸಂಗೀತ ನೀಡುತ್ತಿದ್ದರು.
ರಾಜನ್ ನಾಗೇಂದ್ರ ಜೋಡಿ ಭಾರತ ಸಿನಿ ರಂಗದಲ್ಲಿ ಅತ್ಯಂತ ಯಶಸ್ವಿ ಸಂಗೀತ ನಿರ್ದೇಶಕ ಜೋಡಿ ಎನಿಸಿಕೊಂಡಿತ್ತು. ನಾಗೇಂದ್ರರು 2000ನೇ ಇಸವಿಯಲ್ಲಿ ಇಹಲೋಕ ತ್ಯಜಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು