ಇತ್ತೀಚಿನ ಸುದ್ದಿ
ರಾಜಕೀಯ ಒತ್ತಡದಿಂದ ಸಂತೋಷ್ ಆತ್ಮಹತ್ಯೆಗೆ ಯತ್ನ: ಪತ್ನಿ ಜಾಹ್ನವಿ ಆರೋಪ
November 28, 2020, 8:46 AM

ಬೆಂಗಳೂರು(reporterkarnataka news): ರಾಜಕೀಯ ಒತ್ತಡದಿಂದಾಗಿ ತಮ್ಮ ಪತಿ ಎನ್ ಆರ್ ಸಂತೋಷ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಅವರ ಪತ್ನಿ ಜಾಹ್ನವಿ ಆರೋಪಿಸಿದ್ದಾರೆ. ಸಂತೋಷ್ , ಸಿಎಂ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿಯಾಗಿದ್ದಾರೆ.
ಶುಕ್ರವಾರ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಬದುಕೇ ಸಾಕಾಗಿದೆ ಎಂದು ನನ್ನ ಬಳಿ ಹೇಳಿದ್ದರು ಎಂದು ಜಾಹ್ನವಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.