ಇತ್ತೀಚಿನ ಸುದ್ದಿ
ರೈತರಿಗೆ ಪ್ರತಿಭಟಿಸುವ ಹಕ್ಕಿದೆ, ದೆಹಲಿಯಿಂದ ತೆರವು ಆದೇಶ ಸಾಧ್ಯವಿಲ್ಲ: ಸುಪ್ರೀಂಕೋರ್ಟ್
December 17, 2020, 7:58 PM

ನವದೆಹಲಿ(reporterkarnataka news):
ರೈತರು ಪ್ರತಿಭಟಿಸುವ ಸಾಂವಿಧಾನಿಕ ಹಕ್ಕು ಹೊಂದಿದ್ದಾರೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಎಸ್.ಎ ಬೋಬ್ಡೆ ಹೇಳಿದ್ದಾರೆ.
ಕೇಂದ್ರ ಸರಕಾರದ ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯ ಗಡಿಗಳಲ್ಲಿ ಕಳೆದ 22 ದಿನಗಳಿಂದ ನಡೆಯುತ್ತಿರುವ ರೈತರ ಹೋರಾಟ ಶಾಂತಿಯುತವಾಗಿ ಮುಂದುವರೆಯಲಿ, ಪೊಲೀಸರು ಏನು ಮಾಡಲಾಗುವುದಿಲ್ಲ ಎಂದಿದ್ದಾರೆ.
ರೈತರು ದೆಹಲಿ ತಲುಪುವು ಎಲ್ಲ ರಸ್ತೆಗಳನ್ನು ಬಂದ್ ಮಾಡಿರುವುದರಿಂದ ಔಷಧ ಪೂರೈಕೆಗೆ ತಡೆಯಾಗಿದೆ. ಹಾಗಾಗಿ ದೆಹಲಿ ಗಡಿಗಳಲ್ಲಿ ಹೋರಾಟ ನಿರತರನ್ನು ರೈತರನ್ನು ಇಲ್ಲಿಂದ ಹೊರಗೆ ಕಳಿಸಬೇಕೆಂದು ಸುಪ್ರೀಂನಲ್ಲಿ ದಾಖಲಾದ ಸರಣಿ ಪಿಐಎಲ್ಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ , ದೆಹಲಿಯ ರಸ್ತೆಗಳನ್ನು ಮುಚ್ಚದೆ ರೈತರು ಪ್ರತಿಭಟನೆ ಮುಂದುವರೆಸಬಹುದು ಎಂದಿದೆ.
ಸಮಾಜದಲ್ಲಿ ಪ್ರತಿಯೊಬ್ಬರಿಗೂ ಪ್ರತಿಭಟಿಸುವ ಹಕ್ಕಿದೆ. ರೈತರಿಗೂ ಪ್ರತಿಭಟಿಸುವ ಹಕ್ಕಿದ್ದು, ಅವರ ಹೋರಾಟ ಮುಂದುವರೆಯಬೇಕು. ಅಲ್ಲದೆ, ಯಾವುದೇ ಕಾರಣಕ್ಕೂ ರೈತರನ್ನು ಹೋರಾಟದ ಕಣದಿಂದ ತೆರವುಗೊಳಿಸುವಂತೆ ಆದೇಶ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಖಡಕ್ ಉತ್ತರ ನೀಡಿದೆ.