ಇತ್ತೀಚಿನ ಸುದ್ದಿ
ರೈತರ ಪ್ರತಿಭಟನೆಯಲ್ಲಿ ಸಮವಸ್ತ್ರ ಧರಿಸಿ ಯೋಧ ಭಾಗಿ: ಶಿಸ್ತು ಕ್ರಮ ಸಾಧ್ಯತೆ
December 8, 2020, 11:22 AM

ಹುಬ್ಬಳ್ಳಿ(reporterkarnataka news): ಕೇಂದ್ರ ಸರ್ಕಾರದ ರೈತ ನೀತಿ ಖಂಡಿಸಿ ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಯೋಧರೊಬ್ಬರು ಭಾಗವಹಿಸಿದ್ದಾರೆ. ರಜೆ ಮೇಲೆ ಊರಿಗೆ ಬಂದಿರುವ ಕುಂದಗೋಳ ತಾಲೂಕಿನ ಯೋಧ, ಈ ಧರಣಿಯಲ್ಲಿ ಭಾಗವಹಿಸಿ ರೈತರಿಗೆ ನೈತಿಕ ಬೆಂಬಲ ಘೋಷಿಸಿದ್ದಾರೆ.
ಸಮವಸ್ತ್ರ ಧರಿಸಿ ಯೋಧ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಇದು ಸೇವಾ ನಿಯಮಗಳಿಗೆ ವಿರುದ್ದವಾಗಿದೆ. ಮುಂದಿನ ದಿನಗಳಲ್ಲಿ ಯೋಧನ ವಿರುದ್ದ ಸೇನೆ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆ ಕೂಡ ಇದೆ.