ಇತ್ತೀಚಿನ ಸುದ್ದಿ
ರೈತರ ಜತೆ ಪ್ರಧಾನಿ ಸಂವಾದ ವೇಳೆ ನಿದ್ದೆಗೆ ಜಾರಿದ ಸಿಎಂ, ಡಿಸಿಎಂ, ಸೆಂಟ್ರಲ್ ಮಿನಿಸ್ಟರ್!
December 26, 2020, 9:18 AM

ಬೆಂಗಳೂರು(reporterkarnataka news):
ಸಭೆ- ಸಮಾರಂಭ ನಡೆಯುತ್ತಿದ್ದಂತೆ 60 ದಾಟಿದ ರಾಜಕಾರಣಿಗಳು ವೇದಿಕೆಯಲ್ಲೇ ನಿದ್ದೆಗೆ ಹಾರುವುದು ಮಾಮೂಲಿ. ಇಂತಹ ಘಟನೆ
ಪ್ರಧಾನಿ ನರೇಂದ್ರ ಮೋದಿ ಅವರು ರೈತರೊಂದಿಗೆ ಸಂವಾದ ನಡೆಸುವ ವೇಳೆ ನಡೆದಿದೆ.
ಪ್ರಧಾನಿ ಸಂವಾದ ನಡೆಯುತ್ತಿದ್ದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂಪ್ಪ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಕೇಂದ್ರ ಸಚಿವ ಸದಾನಂದ ಗೌಡ ಅವರು ನಿದ್ರೆಗೆ ಜಾರಿದ್ದರು. ನಿದ್ರೆಗೆ ಜಾರಿದರೋ ಅಥವಾ ಕಣ್ಮಚ್ಚಿ ದೇಶಕ್ಕಾಗಿ ಚಿಂತನೆ ನಡೆಸುತ್ತಿದ್ದರೋ(ಅವರ ಅಭಿಮಾನಿಗಳು ಹೇಳುವ ಪ್ರಕಾರ) ಗೊತ್ತಿಲ್ಲ. ಒಟ್ಟಿನಲ್ಲಿ ಸಾಲಾಗಿ ಕುಳಿತಿದ್ದ ಅಧಿಕಾರಸ್ಥರು ಮೇಲ್ನೋಟಕ್ಕೆ ನಿದ್ದೆಗೆ ಹಾರಿದಂತೆ ಕಂಡು ಬರುತ್ತಿತ್ತು. ಈ ಕುರಿತ ವೀಡಿಯೋ ಇದೀಗ ಸಖತ್ ವೈರಲ್ ಆಗಿದೆ.
ಇವರನ್ನೆಲ್ಲ ದೂರಿಯೂ ಪ್ರಯೋಜನವಿಲ್ಲ. ಪ್ರಾಯ ಆದಂತೆ ವಯೋ ಸಹಜ ಕಾಯಿಲೆಗಳು ಬೇಡವೆಂದರೂ ಅಂಟಿಕೊಳ್ಳುತ್ತದೆ. ಬಿಪಿ, ಶುಗರ್ ಜತೆಗೆ ಇತರ ಕಾಯಿಲೆಗಳು ಇರುತ್ತದೆ. ಕೆಲವು ಮಾತ್ರೆಗಳು ಸೇವಿಸಿದರೆ ಅಮಲಾಗುವುದು ಸಹಜ.