ಇತ್ತೀಚಿನ ಸುದ್ದಿ
ರೈತರ ಪ್ರತಿಭಟನೆ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹುಟ್ಟು ಹಬ್ಬ ಆಚರಣೆ ರದ್ದು
December 8, 2020, 9:26 AM

ನವದೆಹಲಿ(reporterkarnataka news): ಕೇಂದ್ರದ ಕೃಷಿ ನೀತಿ ವಿರೋಧಿಸಿ ರೈತರು ಪ್ರತಿಭಟನೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ತಮ್ಮ ಹುಟ್ಟು ಹಬ್ಬ ಆಚರಣೆ ರದ್ದುಪಡಿಸಿದ್ದಾರೆ.
ಬುಧವಾರ ಡಿಸೆಂಬರ್ 9 ಸೋನಿಯಾಗಾಂಧಿ ಅವರ ಹುಟ್ಟು ಹಬ್ಬ. ರೈತರು ಹೋರಾಟ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಹುಟ್ಟು ಹಬ್ಬ ಆಚರಣೆ ಸೂಕ್ತವಲ್ಲ ಎಂದು ಸೋನಿಯಾ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.