5:24 AM Wednesday27 - January 2021
ಬ್ರೇಕಿಂಗ್ ನ್ಯೂಸ್
ಬಂಧನ ಭೀತಿಯಿಂದ ಸಿಎಂ ಯಡಿಯೂರಪ್ಪ, ನಿರಾಣಿ ಬಚಾವ್: ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು… ಪದ್ಮವಿಭೂಷಣ ಪ್ರಶಸ್ತಿಗೆ ಆಯ್ಕೆಯಾದ ಡಾ. ಬಿ.ಎಂ. ಹೆಗ್ಡೆ ಅವರಿಗೆ ಸಂಸದ ನಳಿನ್, ಶಾಸಕ ಕಾಮತ್… ಖ್ಯಾತ ಕ್ರಿಕೆಟಿಗ ಸೌರವ್ ಗಂಗೂಲಿ ಮತ್ತೆ ಆಸ್ಪತ್ರೆಗೆ ದಾಖಲು: ಪುನಃ ಕಾಣಿಸಿಕೊಂಡ ಎದೆನೋವು ಅಕ್ರಮ ಆಸ್ತಿ ಪ್ರಕರಣದಲ್ಲಿ ಶಿಕ್ಷೆಗೀಡಾದ ಜಯಲಲಿತಾ ಆಪ್ತೆ ಶಶಿಕಲಾ ಇಂದು ಜೈಲಿನಿಂದ ಬಿಡುಗಡೆ  ರೇಡಿಯೋ ಸಾರಂಗ್ ಮತ್ತು ಎನ್.ಎಸ್.ಎಸ್. ವಿದ್ಯಾರ್ಥಿಗಳಿಂದ ಬೆಂಗ್ರೆ ಬೀಚ್ ಸ್ವಚ್ಛತೆ ಜಾನಪದ ಕ್ರೀಡೆ ಕಂಬಳ ಜನವರಿ ಅಂತ್ಯದಿಂದ ಪ್ರಾರಂಭ: ಸಂಸದ ನಳಿನ್ ಕುಮಾರ್ ಕಟೀಲ್ ಎಸ್‌ಡಿಪಿಐ ವತಿಯಿಂದ ಗಣರಾಜ್ಯೋತ್ಸವ ಪ್ರಯುಕ್ತ ರೈತ ಐಕ್ಯತಾ ಸಂಗಮ ಬಿಗ್ ಬಾಸ್ ಖ್ಯಾತಿಯ ನಟಿ ಜಯಶ್ರೀ ರಾಮಯ್ಯ ಆತ್ಮಹತ್ಯೆ: ಕುಟುಂಬದ ಸಮಸ್ಯೆ ಕಾರಣ? ಮಂಗಳೂರಿನ ನರ್ಸಿಂಗ್ ಕಾಲೇಜಿನ 4 ಮಂದಿ ವಿದ್ಯಾರ್ಥಿನಿಯರಿಗೆ ಕೊರೊನಾ: ಪಾಲಕರಲ್ಲಿ ಮತ್ತೆ ಭೀತಿ… ಗಣರಾಜ್ಯೋತ್ಸವ ಪರೇಡ್ ಗೆ ಆಯ್ಕೆಯಾದ ಕರ್ನಾಟಕದ ಟ್ಲಾಬ್ಲೊದಲ್ಲಿ ಕನ್ನಡ ಧ್ವಜ ನಾಪತ್ತೆ

ಇತ್ತೀಚಿನ ಸುದ್ದಿ

ರೈತ ಕಾರ್ಮಿಕ ವಿರೋಧಿ ಕೇಂದ್ರ ಸರಕಾರದ ವಿರುದ್ಧ ಕಾರ್ಮಿಕರ ಪ್ರತಿಭಟನೆ

January 8, 2021, 2:31 PM

ಮಂಗಳೂರು(reporterkaranataka news):

ರೈತ ಕಾರ್ಮಿಕ ವಿರೋಧಿಯಾದ ಕ್ರಷಿ ಶಾಸನಗಳು, ಕಾರ್ಮಿಕ ಸಂಹಿತೆಗಳು,ವಿದ್ಯುತ್ ಮಸೂದೆಗಳ ವಾಪಸಾತಿಗಾಗಿ, ಎಲ್ಲಾ ರೀತಿಯ ಖಾಸಗೀಕರಣವನ್ನು ವಿರೋಧಿಸಿ,ನರೇಗಾ ಯೋಜನೆಯ ವಿಸ್ತರಣೆಗಾಗಿ ಮುಂತಾದ ಬೇಡಿಕೆಗಳನ್ನು ಮುಂದಿಟ್ಟು ದೇಶಾದ್ಯಂತ ಕಾರ್ಮಿಕರು ಪ್ರತಿಭಟನೆಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಇಂದು ಮಂಗಳೂರಿನ ಮಿನಿ ವಿಧಾನಸೌಧದ ಎದುರು ಸಿ.ಐ.ಟಿ.ಯು ದ.ಕ.ಜಿಲ್ಲಾ ಸಮಿತಿಯ ನೇತ್ರತ್ವದಲ್ಲಿ ಪ್ರತಿಭಟನಾ ಪ್ರದರ್ಶನ ಜರುಗಿತು.

ರೈತ ಕಾರ್ಮಿಕರ ಬದುಕನ್ನೇ ಸರ್ವನಾಶ ಮಾಡಲು ಪಣ ತೊಟ್ಟಿರುವ ನರೇಂದ್ರ ಮೋದಿ ಸರಕಾರದ ವಿರುದ್ದ ಆಕ್ರೋಶಭರಿತರಾಗಿ ಘೋಷಣೆ ಕೂಗಿದ ಪ್ರತಿಭಟನಾಕಾರರು, ದೇಶದ ಉಳಿವಿಗಾಗಿ ಪ್ರಬಲ ಹೋರಾಟವೊಂದೇ ಅಸ್ತ್ರ ಎಂದು ಕೇಂದ್ರ ಸರಕಾರಕ್ಕೆ ಎಚ್ಚರಿಕೆ ನೀಡಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಿ.ಐ.ಟಿ.ಯು ರಾಜ್ಯ ಉಪಾಧ್ಯಕ್ಷರಾದ ವಸಂತ ಅಚಾರಿಯವರು,ಜನರಲ್ಲಿದ್ದ ಆಕ್ರೋಶವನ್ನು ಬಂಡವಾಳವನ್ನಾಗಿಸಿದ ದೇಶದ ಆಳುವ ವರ್ಗ,ಎಲ್ಲಾ ಸಮಸ್ಯೆಗಳಿಗೆ ನರೇಂದ್ರ ಮೋದಿ ಉತ್ತರ ಎಂಬಂತೆ ಭ್ರಮೆ ಸ್ರಷ್ಟಿಸಿ,ಒಳ್ಳೆಯ ದಿನಗಳು ಬರಲಿದೆ ಎಂಬ ಸುಳ್ಳಿನ ಕಂತೆಯನ್ನೇ ಸ್ರಷ್ಟಿಸಿತು.ನಂತರ ಅಧಿಕಾರಕ್ಕೇರಿದ ನರೇಂದ್ರ ಮೋದಿ ಸರಕಾರವು ಕಳೆದ 6 ವರ್ಷಗಳಲ್ಲಿ ರೈತ ಕಾರ್ಮಿಕರು ಸೇರಿದಂತೆ ಜನಸಾಮಾನ್ಯರ ಬದುಕನ್ನೇ ನರಕವನ್ನಾಗಿಸಿತು. ಜೊತೆಗೆ ಅಂಬಾನಿ ಅಧಾನಿಗಳ ಹಿತ ಕಾಯುವ ಮೂಲಕ ತಾನು ಕಾರ್ಪೊರೇಟ್ ಕಂಪೆನಿಗಳ ಏಜೆಂಟ್ ಎಂಬುದನ್ನು ಸಾಬೀತುಪಡಿಸಿತು* ಎಂದು ಕಿಡಿ ಕಾರಿದರು.

ಸಿ.ಐ.ಟಿ.ಯು ದ.ಕ.ಜಿಲ್ಲಾಧ್ಯಕ್ಷರಾದ ಜೆ.ಬಾಲಕ್ರಷ್ಣ ಶೆಟ್ಟಿಯವರು ಮಾತನಾಡುತ್ತಾ, *ದೇಶಕ್ಕೆ ಅನ್ನ ನೀಡುವ ರೈತರು ಕಳೆದ 45 ದಿನಗಳಿಂದ ಹೋರಾಟದ ಪಥದಲ್ಲಿದ್ದರೂ,ಅವರ ಬೇಡಿಕೆಗಳಿಗೆ ಸ್ಪಂದಿಸುವ ಎದೆಗಾರಿಕೆ ವಿಶ್ವಗುರು ಎಂದು ತನ್ನನ್ನು ತಾನು ಕರೆಸಿಕೊಳ್ಳುವ ನರೇಂದ್ರ ಮೋದಿಗೆ ಇಲ್ಲವಾಯಿತು.ದೇಶದ ಸಂಸತ್ತಿನಲ್ಲಿ ಚರ್ಚೆ ನಡೆಸದೆ ಸುಗ್ರಿವಾಜ್ಞೆಗಳ ಮೂಲಕ ಕ್ರಷಿ ಶಾಸನಗಳನ್ನು ಜಾರಿಗೆ ತರಲು ಹೊರಟ ಕೇಂದ್ರ ಸರಕಾರ ನಿಜಕ್ಕೂ ದೇಶದ್ರೋಹಿಯಾಗಿದೆ* ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿ.ಐ.ಟಿ.ಯು ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು ಮಾತನಾಡುತ್ತಾ, *ದೇಶವನ್ನು ಮುನ್ನಡೆಸುವ ತಾಕತ್ತು ಇರುವುದು ಹಾಗೂ ದೇಶದ ನಿಜವಾದ ಆಧಾರಸ್ತಂಭಗಳು ರೈತ ಕಾರ್ಮಿಕರು ಎಂಬುದನ್ನು ಇಡೀ ಸಮಾಜ ಒಪ್ಪಿಕೊಂಡರೆ, ದೇಶವನ್ನಾಳುವ ನರೇಂದ್ರ ಮೋದಿ ಹಾಗೂ ಅವರ ಅಂಧಭಕ್ತರು ಮಾತ್ರ ಅದಾನಿ ಅಂಬಾನಿಯೇ ದೇಶದ ಸರ್ವಸ್ವ ಎಂದು ಬೊಗಳೆ ಬಿಡುತ್ತಿದ್ದಾರೆ. ದೇಶದ ಜನರ ಬದುಕನ್ನು ಬಲಿ ಕೊಟ್ಟು,ಅದಾನಿ ಅಂಬಾನಿಗಳಿಗಾಗಿ ದೇಶದ ಸರ್ವ ಸಂಪತ್ತನ್ನು ಧಾರೆ ಎರೆದು ಕೊಡುವ ದೇಶದ್ರೋಹಿ ಸರಕಾರವನ್ನು ಅತೀ ಶೀಘ್ರದಲ್ಲೇ ಕಿತ್ತೆಸೆಯಬೇಕಾಗಿದೆ. ಎಂದು ಹೇಳಿದರು.

ಪ್ರತಿಭಟನೆಯಲ್ಲಿ ರೈತ ಸಂಘಟನೆಯ ಜಿಲ್ಲಾ ನಾಯಕರಾದ ವಾಸುದೇವ ಉಚ್ವಿಲ್,ಸಿ.ಐ.ಟಿ.ಯು ಜಿಲ್ಲಾ ನಾಯಕರಾದ ಪದ್ಮಾವತಿ ಶೆಟ್ಟಿ, ಜಯಂತ ನಾಯಕ್,ಜಯಂತಿ ಶೆಟ್ಟಿ, ಭಾರತಿ ಬೋಳಾರ,ಬಾಬು ದೇವಾಡಿಗ,ಜಯಲಕ್ಷ್ಮಿ,ದಿನೇಶ್ ಶೆಟ್ಟಿ, ವಿಲಾಸಿನಿ,ಜನಾರ್ದನ ಕುತ್ತಾರ್ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು