ಇತ್ತೀಚಿನ ಸುದ್ದಿ
ರೈತ ಹೋರಾಟಗಾರ ಮಾನ್ಪಡೆ ನಿಧನಕ್ಕೆ ಶಿಕ್ಷಣ ಸಚಿವ ಶ್ರದ್ಧಾಂಜಲಿ
October 20, 2020, 8:09 PM

ಮಂಗಳೂರು(reporterkarnatakanews):ಕಾಂ. ಮಾರುತಿ ಮಾನಪಡೆ ಯವರ ನಿಧನದ ಸುದ್ಧಿ ಬೇಸರ ತಂದಿದೆ ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ತಿಳಿಸಿದ್ದಾರೆ.
ಕಳೆದ ಸುಮಾರು ಒಂದು ದಶಕದಿಂದ ಪರಿಚಿತರಾಗಿದ್ದ ಮಾರುತಿ ಮಾನ್ಪಡೆಯವರು ಅನೇಕ ವಿಷಯ ಗಳ ಪರವಾಗಿ ಹೋರಾಟ ಮಾಡುತ್ತಿದ್ದದ್ದನ್ನು ನಾನು ನೋಡಿದ್ದೇನೆ.
ನಾನು ಈ ಹಿಂದೆ ಕಾನೂನು ಮತ್ತು ನಗರಾಭಿವೃದ್ಧಿ ಸಚಿವನಾಗಿದ್ದಾಗ ಬಹಳಷ್ಟು ವಿಷಯಗಳಿಗೆ ನನ್ನ ಬಳಿ ಬಂದು ಚರ್ಚೆ ಮಾಡಿ ಪರಿಹಾರಕ್ಕೆ ಯತ್ನಿಸುತ್ತಿದ್ದರು.
ಚರ್ಚೆ ಸಂದರ್ಭದಲ್ಲಿ ಎಂದೂ ತನ್ನ ಧ್ವನಿಯನ್ನು ಏರಿಸುತ್ತಿರಲಿಲ್ಲ. ಆದರೆ ತಾನು ಪ್ರತಿಪಾದಿಸುತ್ತಿದ್ದ ವಿಷಯದ ಬಗ್ಗೆ ಮಾತ್ರ ಬಹಳ ಗಟ್ಟಿ ನಿಲುವು ಅವರದಾಗಿರುತ್ತಿತ್ತು.
ಇತ್ತೀಚೆಗೆ ಕಲ್ಬುರ್ಗಿಗೆ ಹೋದಾಗಲೂ ಒಂದು ನಿಯೋಗದೊಂದಿಗೆ ನನ್ನನ್ನು ಭೇಟಿ ಮಾಡಿದ್ದರು.
ಅದೇ ಮಾಸಿದ ಬಿಳಿ ಪೈಜಾಮ ಮತ್ತು ಜುಬ್ಬಾ, ಮುಖ ತುಂಬ ಅರಳಿದ ನಗೆ….ಇದು ನಾನು ಸದಾ ಕಾಣುತ್ತಿದ್ದ ಮಾರುತಿ ಮಾನಪಡೆಯವರ ಮರೆಯದ ಚಿತ್ರ.
ನಮ್ಮಿಬ್ಬರದು ಸಂಪೂರ್ಣ
ವಿರುದ್ಧ ದಿಕ್ಕಿನ ಸೈದ್ಧಾಂತಿಕ ನಿಲುವುಗಳು. ಆದರೆ ಅದು ಎಂದೂ ನಮ್ಮ ಸ್ನೇಹಕ್ಕೆ ಅಡ್ಡಿ ಬಂದಿರಲಿಲ್ಲ.
ಅವರೊಬ್ಬ ನೈಜ ಕಾಮ್ರೇಡ್ ಆಗಿದ್ದರು ಎಂಬುದನ್ನು ನಾನು ಅರಿತಿದ್ದೆ.
ಅವರ ನಿಧನದಿಂದ ಶ್ರಮಿಕ ವರ್ಗ ಓರ್ವ ಪ್ರಾಮಾಣಿಕ ಹೋರಾಟಗಾರರನ್ನು ಕಳೆದುಕೊಂಡಿದೆ.
ಅವರ ನಿಧನಕ್ಕೆ ನನ್ನ ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ. ಶಿಕ್ಷಣ ಸಚಿವ ಸಂತಾಪ ಸೂಚಿಸಿದ್ದಾರೆ.