ಇತ್ತೀಚಿನ ಸುದ್ದಿ
ರೈಲ್ವೆ ಇಲಾಖೆ ಟ್ವಿಟರ್ ನಲ್ಲಿ ಹಾಕಿದ ಈ ಮನೋಹರ ದೃಶ್ಯ ಎಲ್ಲಿ ? ನೀವೇ ಊಹಿಸಿ
September 27, 2020, 8:46 AM

ನವದೆಹಲಿ(reporterkarnataka news): ಮಂಗಳೂರು ಸಮೀಪದ, ಕೇರಳ ವಿಭಾಗಕ್ಕೆ ಸೇರಿದ ಉಪ್ಪಳ ಸಮೀಪದ ರೈಲು ಹಳಿಯ ಅತ್ಯುತ್ತಮ ಚಿತ್ರವನ್ನು ರೈಲ್ವೆ ಇಲಾಖೆ ತನ್ನ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದೆ.
ನಾಗರಕೋವಿಲ್ ಮತ್ತು ಮಂಗಳೂರು ಮಧ್ಯೆ ಸಂಚರಿಸುವ ಎರ್ನಾಡ್ ಏಕ್ಸ್ ಪ್ರೆಸ್ ರೈಲು ಉಪ್ಪಳ ಬಳಿ ಹಾದು ಹೋಗುವ ಚಿತ್ರವನ್ನು ಟ್ವಿಟರ್ ನಲ್ಲಿ ಶೇರ್ ಮಾಡಲಾಗಿದೆ.
ಇದಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ದೇವರ ಸ್ವಂತ ನಾಡಿನ ಮನೋಹರ ದೃಶ್ಯ ಎಂದು ಟ್ವೀಟ್ ಮಾಡಲಾಗಿದೆ.