ಇತ್ತೀಚಿನ ಸುದ್ದಿ
ವಿಶ್ವದ ಯಾವುದೇ ಶಕ್ತಿಗೂ ಸಂತ್ರಸ್ತೆಯ ಕುಟಂಬದ ಧ್ವನಿ ಹತ್ತಿಕ್ಕಲು ಸಾಧ್ಯವಿಲ್ಲ: ರಾಹುಲ್ ಗಾಂಧಿ
October 4, 2020, 12:01 AM

ಹತ್ರಾಸ್(Reporter Karnataka News): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅತ್ಯಾಚಾರದ ಬಳಿಕ ಮೃತಪಟ್ಟ ಯುವತಿಯ ಮನೆಗೆ ಭೇಟಿ ನೀಡಿ ಕುಟುಂಬ ಸದಸ್ಯರನ್ನು ಸಂತೈಸಿದರು. ಬಿಗಿ ಭದ್ರತೆಯ ಮಧ್ಯೆ ಇಬ್ಬರು ಯುವತಿಯ ಮನೆಗೆ ಭೇಟಿ ನೀಡಿದರು. ಹೆತ್ತವರಿಗೆ ಸಾಂತ್ವನ ಹೇಳಿದ ರಾಹುಲ್ ಗಾಂಧಿ, ಕಾಂಗ್ರೆಸ್ ಕುಟುಂಬಕ್ಕೆ ತನ್ನ ಬೆಂಬಲ ಮುಂದುವರಿಸಲಿದೆ ಎಂದು ಹೇಳಿದರು.

ಈ ಕುಟುಂಬದ ರಕ್ಷಣೆ ಉತ್ತರ ಪ್ರದೇಶ ಸರ್ಕಾರದ್ದಾಗಿದೆ. ಸರ್ಕಾರ ಅವರಿಗೆ ಪೂರ್ಣ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.

ವಿಶ್ವದ ಯಾವುದೇ ಶಕ್ತಿಗೆ ಈ ಕುಟುಂಬದ ಧ್ವನಿ ಹತ್ತಿಕ್ಕಲು ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ ಘೋಷಿಸಿದರು.
ಘಟನೆಗೆ ಉತ್ತರ ಪ್ರದೇಶ ಸರ್ಕಾರವೇ ಹೊಣೆ ಎಂದು ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದರು.