ಇತ್ತೀಚಿನ ಸುದ್ದಿ
ನಟಿ ರಾಗಿಣಿ ನಿವಾಸಕ್ಕೆ ಸಿಸಿಬಿ ದಾಳಿ: ಹೂ ಕುಂಡಗಳಲ್ಲಿಯೂ ತಪಾಸಣೆ, ಮೊಬೈಲ್ ವಶ
September 4, 2020, 3:04 AM

ಬೆಂಗಳೂರು(reporterkarnataka news): ಮಾದಕ ದ್ರವ್ಯ ಜಾಲದ ನಂಟು ಆರೋಪದ ಹಿನ್ನೆಲೆಯಲ್ಲಿ ನಟಿ ರಾಗಿಣಿ ದ್ವಿವೇದಿ ಮನೆಗೆ ದಾಳಿ ನಡೆಸಿರುವ ಸಿಸಿಬಿ ಅಧಿಕಾರಿಗಳು ಮನೆಯ ಇಂಚಿಂಚನ್ನು ಶೋಧ ನಡೆಸುತ್ತಿದ್ದಾರೆ. ಮನೆಯಲ್ಲಿರುವ ಹೂ ಕುಂಡಗಳಲ್ಲಿಯೂ ಮಾದಕ ದ್ರವ್ಯಕ್ಕಾಗಿ ಶೋಧ ನಡೆಸಲಾಗಿದೆ.
ಮನೆಯ ಎಲ್ಲ ಸದಸ್ಯರ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಮನೆಯ ಬೀರು ಮತ್ತು ವಾರ್ಡ್ ರೋಬ್ ಗಳಲ್ಲಿ ಕೂಡ ಶೋಧ ನಡೆಸಲಾಗಿದೆ. ಸಿಸಿಬಿ ಅಧಿಕಾರಿಗಳ ಶೋಧಕ್ಕೆ ರಾಗಿಣಿ ಮತ್ತು ಮನೆಯ ಇತರ ಸದಸ್ಯರು ಸಹಕಾರ ನೀಡಿದ್ದಾರೆ ಎಂದು ವರದಿಯಾಗಿದೆ.