ಇತ್ತೀಚಿನ ಸುದ್ದಿ
ಡ್ರಗ್ಸ್ ಜಾಲ: ನಟಿ ರಾಗಿಣಿ ವಿರುದ್ಧ ಎಫ್ ಐಆರ್ ದಾಖಲು, ಬಂಧನ ಸಾಧ್ಯತೆ
September 4, 2020, 11:52 AM

ಬೆಂಗಳೂರು(reporterkarnataka news): ಚಂದನವನದ ಮಾದಕ ದ್ರವ್ಯ ಸಂಪರ್ಕದ ಕುರಿತು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿರುವ ಚಲನಚಿತ್ರ ನಟಿ ರಾಗಿಣಿ ದ್ವಿವೇದಿ ವಿರುದ್ಧ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಿದ್ದು, ಅವರ ಬಂಧನದ ಎಲ್ಲ ಸಾಧ್ಯತೆಗಳಿವೆ.
ರಾಗಿಣಿ ವಿರುದ್ಧ ಸಿಸಿಬಿ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿದ್ದಾರೆ. ಡ್ರಗ್ಸ್ ಜಾಲಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಈಗಾಗಲೇ ರಾಹುಲ್ ಹಾಗೂ ರವಿಶಂಕರ್ ಅವರನ್ನು ಬಂಧಿಸಿದ್ದಾರೆ.
ತನಿಖೆ ನಡೆಸುತ್ತಿರುವ ಸಿಸಿಬಿ ಅಧಿಕಾರಿಗಳು ಇದೀಗ ನಟಿ ರಾಗಿಣಿಯನ್ನು ವಿಚಾರಣೆಗೆ ಗುರಿಪಡಿಸಿದ್ದಾರೆ. ಮಾದಕ ದ್ರವ್ಯ ಜಾಲದಲ್ಲಿ ರಾಗಿಣಿಯ ಪಾತ್ರ ಮತ್ತು ಅವರ ಆಪ್ತ ಸ್ನೇಹಿತರ ಚಲನವಲನದ ಬಗ್ಗೆ ಪ್ರಶ್ನಿಸಲಾಗಿದೆ.
ಸುಮಾರು 40 ಪ್ರಶ್ನೆಗಳನ್ನು ತನಿಖಾ ಅಧಿಕಾರಿಗಳು ಕೇಳಿದ್ದಾರೆ.
2018ರಲ್ಲಿ ಆರೋಪಿ ಪ್ರತೀಕ್ ಶೆಟ್ಟಿ ನೀಡಿದ್ದ ಹೇಳಿಕೆ ಯನ್ನು ಕೂಡ ತನಿಖಾ ಅಧಿಕಾರಿಗಳು ಪರಿಗಣಿಸಿದ್ದಾರೆ. ಅದೇ ರೀತಿ ಇದೀಗ ಸಿಸಿಬಿ ವಶದಲ್ಲಿರುವ ರವಿ ಶಂಕರ್ ನೀಡಿದ ಮಾಹಿತಿ ಆಧಾರದಲ್ಲಿ ಪ್ರಶ್ನೆ ಸಿದ್ದಪಡಿಸಲಾಗಿದೆ..