4:54 AM Wednesday24 - February 2021
ಬ್ರೇಕಿಂಗ್ ನ್ಯೂಸ್
ತಂಬಾಕು ಜಾಗೃತಿ ಮೂಡಿಸಲು ‘ಗುಲಾಬಿ ಅಭಿಯಾನ’:  ಬೆಳುವಾಯಿ ಶಾಲಾ ಮಕ್ಕಳಿಂದ ಜಾಥಾ ಪೇಜಾವರ ಶ್ರೀಗಳಿಗೆ ಗುರು ವಂದನೆ: ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ 1 ಕೋಟಿ… ಆವಿಷ್ಕಾರ ಮತ್ತು ತಂತ್ರಜ್ಞಾನದ ಜಾಗತಿಕ ಕೇಂದ್ರವಾಗಿ ಮಂಗಳೂರು ಅಭಿವೃದ್ಧಿ: ಡಿಸಿಎಂ ಡಾ. ಅಶ್ವಥನಾರಾಯಣ ಜನರು ಮಾಸ್ಕ್ ಧರಿಸದಿದ್ದರೆ ಮತ್ತೆ ಲಾಕ್ ಡೌನ್: ಮುಖ್ಯಮಂತ್ರಿ ನಾಗರಿಕರಿಗೆ ಎಚ್ಚರಿಕೆ ಕೊರೊನಾ ಭಯಕ್ಕೆ ಗಡಿಯಲ್ಲಿ ಹೈ ಅಲರ್ಟ್: ಕರ್ನಾಟಕ – ಮಹಾರಾಷ್ಟ್ರ ಗಡಿಗಳಲ್ಲಿ ಚೆಕ್… ವಿಜಯಪುರ ಹುಡ್ಗರ ಸಿನಿಮಾ ಕನಸು:’ ದಿ ಪ್ರಾಬ್ಲಮ್’  ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಸರಕಾರಿ, ಬ್ಯಾಂಕಿಂಗ್ ಕೆಲಸ ಗಿಟ್ಟಿಸುವುದು ಈಗ ಬಹಳ ಸುಲಭ: ಶ್ಲಾಘ್ಯ ಸಂಸ್ಥೆ ಸಂಪರ್ಕಿಸಿ! ಜೋಕೆ….ಮದುವೆಗೆ ಬರ್ತಾರೆ ಮ್ಯಾರೇಜ್ ಮಾರ್ಷಲ್ !: ಫುಡ್ ಹಂಚುವವರ ಮೇಲೂ ನಿಗಾ ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ ಅಲಂಗಾರು ಈಶ್ವರ ಭಟ್ಟರಿಗೆ ವಿಪ್ರಭೂಷಣ ಪ್ರಶಸ್ತಿ ಪ್ರದಾನ: ವಿಶೇಷ ಗೌರವಾರ್ಪಣೆ

ಇತ್ತೀಚಿನ ಸುದ್ದಿ

ರಾಧಾಕೃಷ್ಣದ ಈ ರಾಧೆ, ಕೃಷ್ಣರ ಬಗ್ಗೆ ನಿಮಗೆಷ್ಟು ಗೊತ್ತು..? ಅವರ ನಿಜ ಹೆಸರು ಏನು ತಿಳಿದಿದೆಯಾ ? ಇಲ್ಲಿದೆ ಕಂಪ್ಲೀಟ್ ಡಿಟೇಲ್

August 27, 2020, 2:03 AM

ಜಿ.ಎನ್‌.ಎ
info.reporterkarnataka@gmail.com

ಈಗ ಕನ್ನಡ ವಾಹಿನಿಗಳಲ್ಲಿ ಡಂಬ್ಬಿಂಗ್ ಧಾರಾವಾಹಿಗಳದ್ದೇ ದರಬಾರು. ಅದರಲ್ಲೂ ಅನೇಕ ಧಾರಾವಾಹಿಗಳು ಪ್ರೇಕ್ಷಕರ ಮನಸ್ಸನ್ನು ಗೆಲ್ಲುವುದರಲ್ಲಿ ಯಶಸ್ವಿಯಾಗಿವೆ. ರಾಧಾಕೃಷ್ಣ ಎನ್ನುವ ಧಾರಾವಾಹಿ ಮಾತ್ರ ಸಿಕ್ಕಾಪಟ್ಟೆ ಪ್ರಭಾವವನ್ನು ಬೀರಿದೆ ಎಲ್ಲರ ವಾಟ್ಸಪ್ ಸ್ಟೇಟಸ್, ಡಿಪಿಗಳಲ್ಲಿ ಇದರ ನಾಯಕ ನಾಯಕಿಯ ಫೋಟೊ, ಡೈಲಾಗ್ ವಿಡಿಯೋಗಳು ರಾರಾಜಿಸುತ್ತಾ ಇರುತ್ತವೆ.

ಆದರೆ ನಿಮಗೆ ಆ ನಿಮ್ಮ ಮನ ಕದ್ದ ಕೃಷ್ಣನ ನಿಜ ಹೆಸರು ಗೊತ್ತೆ.? ಆ ರಾಧೆ ಎಲ್ಲಿಯವಳು ಗೊತ್ತೆ ಇಲ್ಲಿದೆ ಕಂಪ್ಲೀಟ್ ಮಾಹಿತಿ.

ಮೊದಲಿಗೆ ರಾಧೆಯ ಬಗ್ಗೆ ಮಾತಾಡೋಣ. ಈ ಪಾತ್ರ ಮಾಡುತ್ತಿರುವವರ ನಿಜ ಹೆಸರು ಮಲ್ಲಿಕಾ ಸಿಂಗ್. ಮೂಲತಃ ಕಾಶ್ಮೀರದವರು ಈಗ ಮುಂಬೈಯಲ್ಲಿದ್ದು ಕಿರುತೆರೆಯಲ್ಲಿ ಸಕ್ರಿಯವಾಗಿದ್ದಾರೆ. ನಟಿಯಾಗುವುದು ಅವರ ತಾಯಿಯ ಆಸೆಯಾಗಿತ್ತಂತೆ ಅದರಂತೆ ಕಿರುತೆರೆಗೆ ಕಾಲಿಟ್ಟು ಈಗ ಅನಂತ ಜನರ ಮನ ಗೆಲ್ಲುವುದರಲ್ಲಿ ಸಫಲರಾಗಿದ್ದಾರೆ

ಇನ್ನು ಆ ಕೃಷ್ಣನಂತೆ ಕೋಟ್ಯಾಂತರ ಮನಗೆದ್ದ ಈ ಧಾರಾವಾಹಿಯ ಕೃಷ್ಣನ ಬಗ್ಗೆ ಮಾತಾಡುವುದಾದರೆ ಆ ಪಾತ್ರಕ್ಕೆ ಜೀವ ತುಂಬಿದ ಯುವಕನ ಹೆಸರು ಸುಮೇಧ್. ಸುಮೇಧ್ ವಸುದೇವ್ ಮುದಗಳ್ಕರ್ ಪೂರ್ಣ ಹೆಸರು. ಮಹಾರಾಷ್ಟ್ರದಲ್ಲೇ ಹುಟ್ಟಿದವರು. ಬಾಲ್ಯದಿಂದಲೇ ನಾಟ್ಯದಲ್ಲಿ ಅಭಿರುಚಿಯನ್ನು ಹೊಂದಿದ್ದ ಸುಮೇಧ್ ಕ್ಲಾಸಿಕಲ್ ಡ್ಯಾನ್ಸ್ ಕಲಿತಿದ್ದಾರೆ. ಪುಣೆ ಫಿಲ್ಮ್ ಇನ್ಸ್ಟಿಟ್ಯೂಷನ್‌ನಲ್ಲಿ ಪದವಿ ಪಡೆದಿರುವ ಇವರು ಮೊದಲ ಬಾರಿ ಕಿರುತೆರೆಗೆ ಎಂಟ್ರಿಯಾಗಿದ್ದು ಚಕ್ರವರ್ತಿ ಅಶೋಕ ಸಾಮ್ರಾಟ್ ಧಾರಾವಾಹಿಯಲ್ಲಿ.
ಈ ಧಾರಾವಾಹಿ ಕೂಡಾ ಇದೀಗ ಕನ್ನಡಕ್ಕೆ ಡಬ್ ಆಗಿ ಪ್ರಸಾರವಾಗುತ್ತಿದೆ. ಇದರಲ್ಲಿ ಸುಮೇಧ್ ನೆಗೆಟಿವ್ ಪಾತ್ರದಲ್ಲಿ ನಟಿಸಿದ್ದರು.


ಧಾರಾವಾಹಿಯಲ್ಲಿ ನಟಿಸುವುದರ ಜೊತೆಗೆ ಹಿಂದಿಯ ಅನೇಕ ಡ್ಯಾನ್ಸ್ ಕಾರ್ಯಕ್ರಮಗಳಲ್ಲೂ ಸುಮೇಧ್ ಸ್ಪರ್ಧಿಯಾಗಿ ಪಾಲ್ಗೊಂಡು ಜಯಗಳಿಸಿದ್ದಾರೆ. ಕೆಲವೊಂದು ಮರಾಠಿ ಸಿನಿಮಾಗಳಲ್ಲೂ ಇವರು ನಟಿಸಿದ್ದಾರೆ. ಆದರೆ ಈ ಹುಡುಗನಿಗೆ ಹೆಸರು ತಂದುಕೊಟ್ಟದ್ದು ಮಾತ್ರ ರಾಧಾಕೃಷ್ಣ ಧಾರಾವಾಹಿಯ ಕೃಷ್ಣ ಪಾತ್ರ. ತಮ್ಮ ನಗುವಿನಂದಲೇ ಎಲ್ಲರ ಮನಸ್ಸು ಕದ್ದಿರುವ ಈ ಹುಡುಗನಿಗೆ ಅನೇಕ ಪ್ರಶಸ್ತಿಗಳು ಕೂಡಾ ದೊರೆತಿದೆ.
ಈ ಧಾರಾವಾಹಿಯಲ್ಲಿ ನಟಿಸಲು ಆರಂಭಿಸಿದಾಗ ಸುಮೇಧ್ಗೆ ಅಭಿಮಾನಿಗಳ ಸಂಖ್ಯೆ ಬಹಳ ಹೆಚ್ಚಾಗಿದೆಯಂತೆ. ಅದರಲ್ಲೂ ಮಹಿಳೆಯರೇ ಹೆಚ್ಚು ಅಭಿಮಾನಿಗಳಂತೆ. ಪ್ರತಿದಿನ ಅವರ ಮೊಬೈಲ್ಗೆ ಸಾವಿರಾರು ಮೆಸೇಜ್, ಕಾಲ್ಗಳು ಬರುತ್ತಿವೆಯಂತೆ. ಆದರೆ ನಿಮ್ಮೆಲ್ಲರ ಪ್ರೀತಿಗೆ ನಾನು ನಿಜಕ್ಕೂ ತಲೆ ಬಾಗುತ್ತೇನೆ ಎಂದು ಅಭಿಮಾನಿಗಳಿಗೆ ಧನ್ಯವಾದ ಹೇಳುತ್ತಾರೆ ಸುಮೇಧ್.

ಇತ್ತೀಚಿನ ಸುದ್ದಿ

ಜಾಹೀರಾತು